- ಫೈನ್ ಇಂಗ್ಲಿಷ್ ಮಾತನಾಡ್ತಿದ್ದ ರ್ಯಾಪಿಡೋ ರೈಡರ್ನ ಸಂಬಳ ಕೇಳಿ ದಂಗಾದ ಟೆಕ್ಕಿ
- ಲಕ್ಷಕ್ಕೂ ಹೆಚ್ಚು ಸಂಬಳ ಪಡೆದರೂ ಮನೆ ಜವಾಬ್ದಾರಿಯಿಂದ ರ‍್ಯಾಪಿಡೋ ಓಡಿಸುವ ಟೆಕ್ಕಿ
- ಬೆಂಗಳೂರಿನ ಜೀವನ ಎಷ್ಟು ದುಬಾರಿ ಇದೆ ನೋಡಿ ಎಂದು ಪೋಸ್ಟ್
ಬದುಕಿನ ಜಂಜಾಟಗಳ ಮಧ್ಯೆ ಸಾಕಪ್ಪ ಜೀವನ ಎಂದು ಬೇಸರವಾಗುವ ಹೊತ್ತಲ್ಲೇ ಅಚ್ಚರಿ ಎನ್ನುವ ಘಟನೆಗಳು ನಮ್ಮ ಮುಂದೆ ಜರುಗಿ ಅಸಮಾಧಾನವನ್ನು ಮರೆಸಿ, ಹುಮ್ಮಸ್ಸು ನೀಡುವಂತೆ ಮಾಡುತ್ತದೆ. ಇನ್ನಷ್ಟು ದುಡಿಯುವಂತೆ ಪ್ರೇರೇಪಣೆ ಕೊಡುತ್ತದೆ. ಇನ್ನೂ ಕೆಲವು ಜೀವನ ಯಾಕೀಗೆ. ಇನ್ನೆಷ್ಟು ವರ್ಷ ಕತ್ತೆ ದುಡಿಯುವಂತೆ ದುಡಿಯಬೇಕು ಎಂದು ಯೋಚಿಸುವಂತೆ ಮಾಡುತ್ತದೆ. ಹೌದು, ಇದಕ್ಕೊಂದು ತಾಜಾ ಉದಾಹರಣೆ ಸಿಕ್ಕಿದೆ. ಲಕ್ಷಕ್ಕೂ ಹೆಚ್ಚು ಸಂಬಳ ಸಿಗುತ್ತಿದ್ದರೂ ಟೆಕ್ಕಿಯೊಬ್ಬರು ಜೀವನೋತ್ಸಹಕ್ಕಾಗಿ ರ‍್ಯಾಪಿಡೊ ಚಲಾಯಿಸುತ್ತಿರುವ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಲಕ್ಷಕ್ಕೂ ಹೆಚ್ಚು ಸಂಬಳ ಬಂದ್ರೂ ರ‍್ಯಾಪಿಡೋ ಓಡಿಸ್ತೇನೆ
ನಾನು ಬನ್ನೇರುಘಟ್ಟಕ್ಕೆ ಪ್ರಯಾಣಿಸುವಾಗ ರ‍್ಯಾಪಿಡೋ ಬುಕ್ ಮಾಡಿದೆ. 35 ವರ್ಷದ ಸವಾರನೊಬ್ಬ ಕನ್ನಡದಲ್ಲಿ ಮಾತನಾಡಲು ಯತ್ನಿಸಿದ. ನನಗೂ ಕನ್ನಡ ಬಾರದ್ದನ್ನು ಅರಿತ ಅವ, ಇಂಗ್ಲಿಷ್ನಲ್ಲಿ ಮಾತನಾಡಿದ. ಶುರು ಮಾಡಿದ ನಂತರ ನಾನೇನು ಕೆಲಸ ಮಾಡುತ್ತಿದ್ದೇನೆ ಎಂದು ಕೇಳಿದ, ನಾನೂ ಸಾಫ್ಟವೇರ್ಎಂಜಿನಿಯರ್ ಎಂದೆ. ಆಗ ಆತನು ಏನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದು ನಿಜಕ್ಕೂ ಬೇಸರವನ್ನು ಹುಟ್ಟು ಹಾಕಿತ್ತು.
'ನಾನು ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್, ಲಕ್ಷಕ್ಕೂ ಹೆಚ್ಚು ಸಂಬಳ ಎಂದ. ಮಗು ಮನೆ ಜವಾಬ್ದಾರಿ ಹೊತ್ತಿರುವ ಕಾರಣ ವಾರಾಂತ್ಯದಲ್ಲಿ, ರ‍್ಯಾಪಿಡೋ ಕೆಲಸ ಮಾಡುತ್ತೇನೆಎಂದ. ಇದು ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಚಿಂತೆಗೆ ದೂಡಿತು'. ಅಲ್ಲ ಲಕ್ಷಕ್ಕೂ ಹೆಚ್ಚು ಸಂಬಳ ಹೊಂದಿರುವವರು ವಾರಂತ್ಯದಲ್ಲೂ ಮನೆಯ ಜವಾಬ್ದಾರಿಗಾಗಿ ಕೆಲಸ ಮಾಡುತ್ತಾರೆ ಎಂದರೆ, ನಗರ ಜೀವನ ಎಷ್ಟು ದುಬಾರಿ ಎಂದು ನೀವೆ ಚಿಂತಿಸಿ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಏನಂದ್ರು?
ನಗರ ಜೀವನ ದುಬಾರಿಯಾಗಿಲ್ಲ. ಆದರೆ, ಕೆಲವರು ಇನ್ನಷ್ಟು ಹಣ ಬೇಕೆನ್ನುವ ದುರಾಸೆಗೆ ಬಡವರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆಯೇ ಎನ್ನುವುದನ್ನು ಮುಂದಿನ ಬಾರಿ ಇಂತಹ ಜನರನ್ನು ಭೇಟಿ ಮಾಡಿದ್ರೆ ಕಂಡುಕೊಳ್ಳಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಹೆಂಡತಿ ಜೊತೆ ಇರೋಕೆ ಆಗೋದಿಲ್ಲ ಎಂದು ರ್ಯಾಪಿಡೋ ಓಡಿಸ್ತಿರಬೇಕೇನೋ ನೋಡಿ ಎಂದಿದ್ದಾರೆ. ಒಂದು ನೀವು ಸುಳ್ಳು ಹೇಳುತ್ತಿದ್ದೀರಿ ಇಲ್ಲ ಆ ಚಾಲಕ ಸುಳ್ಳು ಹೇಳುತ್ತಿರಬೇಕು. ಸುಮ್ನೆ ಕೆಲಸವಿಲ್ಲದೆ ಕತೆಗಳನ್ನ ಹೇಳಬೇಡಿ ಎಂದು ಬರೆದುಕೊಂಡಿದ್ದಾರೆ.