Bengaluru student spends 3 months as Rapido rider
- ಕಾಲೇಜು ರಜಾವಧಿಯಲ್ಲಿ ರಾಪಿಡೋ ರೈಡರ್ ಆಗಿ ಕೆಲಸ ಮಾಡಿದ ಯುವಕ.
- ಪೂರ್ಣಾವಧಿ ಇದನ್ನೇ ನಂಬಿಕೊಂಡಿರುವ ರೈಡರ್ಗಳ ಕಷ್ಟ ಬಿಚ್ಚಿಟ್ಟ ವಿದ್ಯಾರ್ಥಿ.
- ಕಷ್ಟಗಳು, ಇಂಧನ ವೆಚ್ಚ ಮತ್ತು ಅನಿಶ್ಚಿತತೆಯನ್ನು ಈ ಅನುಭವ ಕಲಿಸಿದೆ ಎಂದು ಹೇಳಿಕೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಲೇಜು ಯುವಕನೊಬ್ಬ ತನ್ನ ರಜಾ ಸಮಯದಲ್ಲಿ ರ್ಯಾಪಿಡೋ ರೈಡ್ ಕೆಲಸ ಮಾಡಿ ಹಣ ಸಂಪಾದಿಸಿದ ಬಗ್ಗೆ ರೆಡ್ಡಿಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ಬೆಂಗಳೂರು ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಎಷ್ಟು ಸದೃಢರನ್ನಾಗಿ ಮಾಡುತ್ತದೆ ಎನ್ನುವುದನ್ನು ತೋರ್ಪಡಿಸಿದ್ದಾರೆ. ಜೊತೆಗೆ ಪೂರ್ಣಾವಧಿಗೆ ಗಿಗ್ ಕೆಲಸವನ್ನೇ ನಂಬಿಕೊಂಡಿರುವ ಕಾರ್ಮಿಕರ ಕಷ್ಟ, ಅವರ ವ್ಯವಸ್ಥೆ ಹೇಗಿರುತ್ತದೆ ಎನ್ನುವುದನ್ನು ಬರೆದುಕೊಂಡು, ಕಳವಳ ವ್ಯಕ್ತಪಡಿಸಿದ್ದಾರೆ.
ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯಾಗಿರುವ ಯುವಕ ಬೆಳಿಗ್ಗೆ 8ರಿಂದ 4;30ರವರೆಗೆ ಬೈಕ್ ರೈಡ್ ಕೆಲಸ ಮಾಡಿ, ಒಂದು ದಿನಕ್ಕೆ ನಾನು ಸುಮಾರು 1,200 ರೂ.ಗಳವರೆಗೆ ಸಂಪಾದಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ಪೋಸ್ಟ್ಗೆ ರೆಡ್ಡಿಟ್ ಬಳಕೆದಾರರು ಕಾಮೆಂಟ್ ಮಾಡಿದ್ದು, ಓದು ಮತ್ತು ಹಣ ಸಂಪಾದಿಸುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಹೀಗೆ ಹೇಳಿದ್ದು
r bengaluru ಎನ್ನುವ ರೆಡ್ಡಿಟ್ ಖಾತೆಯಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ. ನಾನು ಬೆಂಗಳೂರಿನ ಬಿಬಿಎ ವಿದ್ಯಾರ್ಥಿ ಸದ್ಯ ಪರೀಕ್ಷೆ ಮುಗಿದಿರವ ಕಾರಣ 3 ತಿಂಗಳ ರಜೆ ಇತ್ತು. ಈ ಸಮಯದಲ್ಲಿ ನಾನು ಏನಾದರೂ ಮಾಡಬೇಕು ಎಂದು ನಿರ್ಧರಿಸಿ..ರ್ಯಾಪಿಡೋ ಬೈಕ್ ರೈಡ್ ಕೆಲಸಕ್ಕೆ ಸೇರಿಕೊಂಡೆ.
ನಿತ್ಯ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಕೆಲಸ ಶುರುಮಾಡಿ ಸಂಜೆ 4:30 ರ ಹೊತ್ತಿಗೆ ಮನೆಗೆ ವಾಪಸ್ ಆಗ್ತಿದ್ದೆ ದಿನಕ್ಕೆ ನಾನು 8.5 ಗಂಟೆಗಳು1,200 ಗಳಿಸಬಹುದು. ಆರಂಭದಲ್ಲಿ ಈ ಬಗ್ಗೆ ನನಗೆ ಮಾಹಿತಿ ಇರಲಿಲ್ಲ,. ಸ್ವಲ್ಪ ಗೊಂದಲಗಳಾಗುತ್ತಿತ್ತು. ಕಾಲಾನಂತರದಲ್ಲಿ ಅಲ್ಗಾರಿದಮ್ ಅನ್ನು ಅರ್ಥಮಾಡಿಕೊಂಡು ಬೇಡಿಕೆ ಎಲ್ಲಿ ಹೆಚ್ಚಿದೆ ಎಂಬುದನ್ನು ಅರಿತೆ ಎಂದು ಬರೆದುಕೊಂಡರು.
ಈ ಕೆಲಸ ನನಗೆ ಗಿಗ್ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಆದಾಯ ಗಳಿಸುವವರ ಬಗ್ಗೆ ಯೋಚನೆ ಮಾಡಲು ಪ್ರೇರಪಿಸಿತು. ಆ ಅವಧಿಯಲ್ಲಿ ನಾನು ನಿಜವಾಗಿಯೂ ಹೆಚ್ಚಿನ ವಿರಾಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಬಹುತೇಕ ಕೆಲಸ ಮಾಡುತ್ತಿದ್ದೆ ಅಥವಾ ಮುಂದಿನ ಆರ್ಡರ್‌ಗಾಗಿ ಕಾಯುತ್ತಿದ್ದೆ. ಇದು ಕೇವಲ ರಜೆಯ ಕಾಲದ ಹಣ ಸಂಪಾದನೆಗಾಗಿ ಮಾತ್ರ ಆಗಿದ್ದರಿಂದ, ನನಗೆ ಯಾವಾಗ ಬೇಕಾದರೂ ಮನೆಗೆ ಹೋಗುವ ಆಯ್ಕೆ ಇತ್ತು. ಆದರೆ ಪೂರ್ಣಾವಧಿಯಾಗಿ ಇದನ್ನು ಮಾಡುವವರಿಗೆ ಆ ಆಯ್ಕೆ ಇರಲೇಬೇಕೆಂದಿಲ್ಲ.
ಈ ವಿಚಾರದಿಂದ ನನಗೆಷ್ಟು ಸಿಟ್ಟು ಬಂತೆಂದರೆ...
ನನ್ನನ್ನು ನಿಜವಾಗಿಯೂ ಸಿಟ್ಟಿಗೆ ಕೆಡಿಸಿದ ಒಂದು ವಿಷಯವೆಂದರೆ, ಕ್ಯಾಪ್ಟನ್‌ಗಳಿಗೆ ಇರುವ ಅಧಿಕಾರ ಅಥವಾ ನಿಯಂತ್ರಣ ಎಷ್ಟು ಕಡಿಮೆ ಎಂಬುದು. ಉದಾಹರಣೆಗೆ, ಗ್ರಾಹಕರು ರೈಡ್ ರದ್ದುಗೊಳಿಸಿದರೆ, ರದ್ದತಿಗೆ ನಿಮ್ಮ ಯಾವುದೇ ತಪ್ಪು ಇಲ್ಲದಿದ್ದರೂ ನಿಮ್ಮ ರೇಟಿಂಗ್ ಕುಸಿಯಬಹುದು. ಮತ್ತು ಏನಾದರೂ ತೊಂದರೆಯಾದಾಗ, ಸರಿಯಾದ ಬೆಂಬಲ ಪಡೆಯುವುದು ನರಕಯಾತನೆಯಂತೆ ಭಾಸವಾಗುತ್ತದೆ. ರೈಡ್‌ಗಳು ಕಡಿಮೆ ಇರುವ ಮಧ್ಯಾಹ್ನ 12 ರಿಂದ 3 ಗಂಟೆಯವರೆಗಿನ ನಿಧಾನವಾದ ಅವಧಿಯಲ್ಲಿ ನಾನು ಆಹಾರ ವಿತರಣೆ ಕೆಲಸವನ್ನೂ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಆಟೋ ಚಾಲಕರು ಬೈದಿಲ್ಲ
ರಜೆಯ ಮೂರು ತಿಂಗಳು ಮೆಜೆಸ್ಟಿಕ್, ರೈಲ್ವೆ ಸ್ಟೇಷನ್ ಸೇರಿದಂತೆ ಹಲವು ಜಾಗದಲ್ಲಿ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ ಆಟೋ ಚಾಲಕರು ನನ್ನನ್ನು ದುರುಗುಟ್ಟಿ ನೋಡುತ್ತಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಮೂರು ತಿಂಗಳಲ್ಲಿ ಒಬ್ಬನೇ ಒಬ್ಬ ಆಟೋ ಚಾಲಕ ನನಗೆ ಬೆದರಿಕೆ ಹಾಕಲಿಲ್ಲ ಅಥವಾ ಮುಖಾಮುಖಿ ಜಗಳಕ್ಕೆ ಬರಲಿಲ್ಲ. ಎಷ್ಟೊ ಜನರು ನನ್ನ ಬಳಿ ಚೆನ್ನಾಗಿ ಮಾತನಾಡಿದರು. ನನಗೆ ನೆಗೆಟಿವ್ ಇನ್ಸಿಡೆಂಟ್ಗಳಿಂದ ಬೇಸರವಾಗಿಲ್ಲ ಎಂದರು.
ಇತ್ತೀಚಿನ ನಿಷೇಧಗಳು/ಆರ್‌ಟಿಒ (RTO) ವಶಪಡಿಸಿಕೊಳ್ಳುವ ನಾಟಕೀಯ ಬೆಳವಣಿಗೆಗಳಿಗೂ ಮುಂಚೆಯೇ ನಾನು ನನ್ನ ರಾಪಿಡೋ ಪಯಣವನ್ನು ಮುಗಿಸಿದ್ದೆ, ಹಾಗಾಗಿ ಆ ಕಡೆಯ ಕಷ್ಟಗಳನ್ನು ನಾನು ವೈಯಕ್ತಿಕವಾಗಿ ಅನುಭವಿಸಲಿಲ್ಲ. ಒಟ್ಟಾರೆಯಾಗಿ, ನಾನು ಇದನ್ನು ಮಾಡಿದ್ದು ಒಳ್ಳೆಯದಾಯಿತು ಎಂದುಕೊಳ್ಳುತ್ತೇನೆ..
ಇದು ಕೇವಲ ದಿನಕ್ಕೆ 1,200 ರೂ. ಗಳಿಸುವ ಬಗ್ಗೆ ಮಾತ್ರವಲ್ಲ. ಗಿಗ್ ಕೆಲಸವು ಕಾರ್ಮಿಕರ ದೃಷ್ಟಿಕೋನದಲ್ಲಿ ಹೇಗಿರುತ್ತದೆ ಎಂಬುದನ್ನು ನಾನು ಕಣ್ಣಾರೆ ನೋಡಿದೆ - ಕಾಯುವಿಕೆ, ಇಂಧನ ವೆಚ್ಚ, ಅನಿಶ್ಚಿತತೆ, ಪ್ಲಾಟ್‌ಫಾರ್ಮ್ ನಿಯಮಗಳು, ಗ್ರಾಹಕರ ಸಮಸ್ಯೆಗಳು, ರೆಸ್ಟೋರೆಂಟ್ ಸಮಸ್ಯೆಗಳು ಮತ್ತು ಬದುಕಿನ ಕಷ್ಟಗಳನ್ನು ನನಗೆ ತೋರಿಸಿಕೊಟ್ಟವು
ಒಬ್ಬ ವಿದ್ಯಾರ್ಥಿಯಾಗಿ 3 ತಿಂಗಳು ಗಿಗ್ ಕೆಲಸ ಮಾಡುವುದಕ್ಕೂ, ನಿಮ್ಮ ಕುಟುಂಬವೇ ಅದರ ಮೇಲೆ ಅವಲಂಬಿತವಾಗಿರುವುದರಿಂದ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಮತ್ತೊಬ್ಬರಿಗೆ, ಅದೇ 1,200 ರೂ. ಅವರ ಬಿಲ್ಸ್‌ಗಳನ್ನು ಪಾವತಿಸುವುದಕ್ಕೋ ಇಲ್ಲದಿರುವುದಕ್ಕೋ ಇರುವ ವ್ಯತ್ಯಾಸವಾಗಿರಬಹುದು, (ಏಜೆನ್ಸೀಸ್).