Bengaluru Officer Downloads APK File Loses Rs 10 Lakh
- ವಾಟ್ಸಪ್ ನಲ್ಲಿ ಮದುವೆ ಕಾರ್ಡ್ ಬಂತು ಎಂದು ಓಪನ್ ಮಾಡಿದ್ರೆ ಹುಷಾರ್.
- ಎಪಿಕೆ ಫೈಲ್ ತೆರೆದು 9, ಲಕ್ಷ, 96 ಸಾವಿರ ರೂ. ಹಣ ಕಳೆದುಕೊಂಡ ಅರಣ್ಯ ಅಧಿಕಾರಿ.
- ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆ ರಣ್ಯ ಅಧಿಕಾರಿಯಿಂದ ದೂರು.
Bengaluru Officer Downloads APK File Loses Rs 10 Lakh: ವಾಟ್ಸಾಪ್ಗೆ ಬಂದಿದ್ದ ಮದುವೆ ಇನ್ವಿಟೇಶನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿದ್ದೇ ತಡ, ಮೊಬೈಲ್ ಹ್ಯಾಕ್ ಆಗಿ ಮಗಳ ಮದುವೆಗೆ ಕೂಡಿಟ್ಟಿದ್ದ ಲಕ್ಷ, ಲಕ್ಷ ಹಣವನ್ನು ಅರಣ್ಯಾಧಿಕಾರಿಯೊಬ್ಬರು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಂತಹ ಸಣ್ಣ ತಪ್ಪುಗಳಿಂದ ಪಾರಾಗೋದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಮಗಳ ಮದುವೆಗೆಂದು ಇಟ್ಟಿದ್ದ ಹಣ ಲೂಟಿ
ಜುಲೈ 13ರಂದು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ರಮೇಶ್ ಬಾಬು ಅವರಿಗೆ ವಾಟ್ಸಾಪ್ನಲ್ಲಿ ಮ್ಯಾರೇಜ್ ಇನ್ವೀಟೇಷನ್ ಮೆಸೇಜ್ ಬಂದಿತ್ತು. ಮಾರನೇ ದಿನ ಅಂದರೆ, ಜು.14ರಂದು ಸ್ನೇಹಿತರು ಕಳಿಸಿದ್ದಾರೆಂದು ಎಪಿಕೆ ಫೈಲ್ ಮೇಲೆ ಕ್ಲಿಕ್ ಮಾಡಿದ್ದಾರೆ. ಹಾಗೆ ಮಾಡಿ 30 ನಿಮಿಷಕ್ಕೆ ಅಕೌಂಟ್ನಲ್ಲಿದ್ದ ಸುಮಾರು 9, ಲಕ್ಷ, 96 ಸಾವಿರ ಹಣ ಕಟ್ ಆಗಿತ್ತು.ಅದರ ಮೆಸೇಜ್ ಕೂಡ ಬಂದಿದೆ. ಆದರೆ ಈ ಬಗ್ಗೆ ತಕ್ಷಣ ಗಮನ ಕೊಡದ ಅವರು, ಸಮಯ ಸಿಕ್ಕಾಗ ಮೆಸೇಜ್ ಓದಲು ಶುರು ಮಾಡಿದಾಗ ಈ ಹಣ ವರ್ಗಾವಣೆಯಾಗಿರುವ ಶಾಕಿಂಗ್ ವಿಚಾರವನ್ನು ಅರಿತುಕೊಂಡಿದ್ದಾರೆ. ಇದು ಮಗಳ ಮದುವೆಗಾಗಿ ಕೂಡಿಡಲಾಗಿತ್ತು..ಆದರೆ ಒಂದೇ ಒಂದು ಕ್ಲಿಕ್ನಿಂದಾಗಿ ಹಣ ಕಳ್ಳತನವಾಗಿದೆ ಎಂದು ಹೇಳಲಾಗಿದೆ.
ರಮೇಶ್ ಬಾಬು ಅವರಿಗೆ ಮಾತ್ರವಲ್ಲದೇ ಅವರ ಸ್ನೇಹಿತರು ಸೇರಿ ಹತ್ತು ಜನಕ್ಕೆ ಇದೇ APK ಫೈಲ್ ಮೆಸೇಜ್ ಬಂದಿದೆ. ಈ ಬಗ್ಗೆ ಕೂಡಲೇ ಅವರು 1930 ಸೈಬರ್ ಹೆಲ್ಪ್ಲೈನ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ ತಮ್ಮ ಬ್ಯಾಂಕ್ ನವರಿಗೂ ಮಾಹಿತಿ ನೀಡಿದ್ದಾರೆ. ಆ ಬಳಿಕ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಬರ್ ವಂಚಕರ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ,.
ವಂಚನೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ಗೂಗಲ್ ಪ್ಲೇಸ್ಟೋರ್ನಲ್ಲಿ ಸಿಗದ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಲು ಎಪಿಕೆ ಫೈಲ್ ಬಳಕೆ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ವಂಚಕರು ಇದನ್ನು ಸೈಬರ್ ವಂಚನೆಗೆ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒತ್ತಡದ ಮಧ್ಯೆ ಕೆಲವರು ಅದನ್ನು ಕ್ಲಿಕ್ ಮಾಡಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದು ಉಂಟು. ಹೀಗಾಗಿ ಇನ್ಮುಂದ ಇಂತಹ ಫೈಲ್ ಕ್ಲಿಕ್ ಮಾಡುವ ಮುನ್ನ ಕೆಲವೊಂದು ನಿಯಮವನ್ನು ಪಾಲಿಸಿ.
- ವಾಟ್ಸಾಪ್ ಸೇರಿದಂತೆ ಯಾವುದೇ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಬರುವ ಎಪಿಕೆ ಞಐಳ್ ಮೇಲೆ ಕ್ಲಿಕ್ ಮಾಡಲು ಹೋಗಲೇ ಬೇಡಿ. ಅದನ್ನು ಅಲ್ಲಿಂದಲ್ಲೇ ಡಿಲೀಟ್ ಮಾಡಿಬಿಡಿ
- ಅಧಿಕೃತ ಅಪ್ಲಿಕೇಶನ್ ಮಾತ್ರ ಇರಲಿ
ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕಾದ ಆ್ಯಪ್‌ಗಳನ್ನು ಕೇವಲ ಗೂಗಲ್ ಪ್ಲೇಸ್ಟೋರ್ನಿಂದ ಮಾತ್ರ ಡೌನ್ಲೋಡ್ ಮಾಡಿ, ಅಧಿಕೃತವಾಗಿಲ್ಲದ ಯಾವುದೇ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಆಗೋದು ಬೇಡ.
ನಿಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಅನೌನ್ ಅಪ್ಲಿಕೇಶನ್ ಎನ್ನುವ ಆಯ್ಕೆಯನ್ನು ಆಫ್ ಮಾಡಿ ಸೇಪ್ ಆಗಿಡಿ.
- ಅಕಸ್ಮಾತ್ ಸೈಬರ್ ವಂಚನೆಗ ಒಳಗಾಗಿದ್ದರೆ ಹೀಗೆ ಮಾಡಿ
- ತಕ್ಷಣವೇ ನಿಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿ
- ನಿಮ್ಮ ಬ್ಯಾಂಕ್ಗೆ ಕರೆ ಮಾಡಿ ಅಕೌಂಟ್ ಬ್ಲಾಕ್ ಮಾಡಲು ಮಾಹಿತಿ ನೀಡಿ, (ಏಜೆನ್ಸೀಸ್).