Bengaluru Traffic (ಚಿತ್ರ X)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ (
ಸಮಸ್ಯೆಯು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜನನಿಬಿಡ ಜಂಕ್ಷನ್ ಒಂದರಲ್ಲಿ ಉಂಟಾದ ಭಾರಿ ಟ್ರಾಫಿಕ್‌ನಿಂದ ಬೇಸತ್ತ ಪ್ರಯಾಣಿಕರೊಬ್ಬರು, ಆಟೋರಿಕ್ಷಾವನ್ನು ಅರ್ಧದಲ್ಲೇ ತೊರೆದು ಮನೆಗೆ ನಡೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋದಲ್ಲೇನಿದೆ?
ಶಿವಂಗ್ ಎಂಬ ಪ್ರಯಾಣಿಕರು ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 150 ರೂಪಾಯಿ ಬಾಡಿಗೆ ನೀಡಿ ಆಟೋ ಹತ್ತಿದ್ದ ಅವರು ಸಿಗ್ನಲ್ ಬಿದ್ದಾಗ ವಾಹನಗಳು ಇಂಚಿಂಚೂ ಕದಲುರದಷ್ಟು ಜಾಮ್ ಉಂಟಾಗಿದ್ದರಿಂದ ನಿರಾಸೆಯಾಗಿದೆ. ಆದಾಗ್ಯೂ, ಈ ಸಣ್ಣ ದೂರವನ್ನು ಕ್ರಮಿಸಲು ಆಟೋ ಸುಮಾರು 25 ರಿಂದ 30 ನಿಮಿಷ ತೆಗೆದುಕೊಂಡಿದೆ ಎಂದಿದ್ದಾರೆ.
ಆದಾಗ್ಯೂ, ತಮ್ಮ ಗಮ್ಯಸ್ಥಾನಕ್ಕೆ ಇನ್ನು 1 ರಿಂದ 2 ಕಿಲೋಮೀಟರ್ ಬಾಕಿ ಇರುವಾಗಲೇ, ಆಟೋದಲ್ಲೇ ಕುಳಿತಿದ್ದರೆ ಇನ್ನಷ್ಟು ತಡವಾಗುತ್ತದೆ ಎಂದು ಅರಿತ ಶಿವಂಗ್ ಬೇರೆ ಯಾವುದೇ ದಾರಿಯಿಲ್ಲದೇ ಅಲ್ಲಿ ಇಳಿದು ಬರೀ ಕಾಲ್ನಡಿಗೆಯಲ್ಲೇ ಮನೆ ತಲುಪಿದ್ದಾರೆ.
ವಿಶೇಷವೆಂದರೆ, ಜಂಕ್ಷನ್‌ನ ಒಂದು ಬದಿಯ ರಸ್ತೆಯಲ್ಲಿ ಭಾರಿ ವಾಹನ ದಟ್ಟಣೆ ಇದ್ದರೆ, ಅದಕ್ಕೆ ಹೊಂದಿಕೊಂಡಿದ್ದ ಮತ್ತೊಂದು ರಸ್ತೆ ತೀರಾ ಖಾಲಿಯಾಗಿತ್ತು. ಈ ವ್ಯತ್ಯಾಸ ವೀಡಿಯೊದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಹಣ ನೀಡಿ ಆಟೋ ಬುಕ್ ಮಾಡಿದರೂ ಸರಿಯಾದ ಸಮಯಕ್ಕೆ ತಲುಪಲಾಗದ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಹಾಗೂ ನಿರಂತರ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಅವರು ತಮ್ಮ ವೀಡಿಯೊ ಮೂಲಕ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).