Bengaluru Man Crushed To Death By Tanker
ಬೆಂಗಳೂರು: ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ನೀರಿನ ಟ್ಯಾಂಕರ್ವೊಂದು ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕ ನ್ಯೂ ಟೌನ್‌ನಲ್ಲಿ ಇಂದು(ಜು.17)ರಂದು ಬೆಳ್ಳಂಬೆಳಗ್ಗೆ ನಡೆದಿದೆ.
ಗುರುವಾರ ಬೆಳಿಗ್ಗೆ ಮೊಮ್ಮಕ್ಕಳನ್ನು ಬಿಡಲು ತೆರಳಿದ್ದಾಗ ಸಂಭವಿಸಿರುವ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣದ ಭೀಕರತೆ ಎದೆ ಝಲ್ ಎನಿಸುವಂತೆ ಮಾಡುತ್ತದೆ. ಘಟನಾ ಸ್ಥಳದಲ್ಲೇ ವೃದ್ಧ ಮೃತಪಟ್ಟಿದ್ದು, ಮಕ್ಕಲು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಅತೀ ವೇಗವಾಗಿ ನೀರಿನ ಟ್ಯಾಂಕರ್ ಚಾಲನೆ ಮಾಡುತ್ತಾ ಬಂದ ಚಾಲಕ ವೃದ್ಧನ ಸ್ಕೂಟಿಗೆ ಗುದ್ದಿದ್ದಾನೆ. ಘಟನೆಯಿಂದ ಭಯಗೊಂಡ ಆತ ಪರಾರಿಯಾಗಿದ್ದಾನೆ. ದೂರು ದಾಖಲಿಸಿಕೊಂಡಿದ್ದು, ಆತನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್)