ವೈದ್ಯ ಲೋಕಕ್ಕೆ ಹೈಟೆಕ್ ಸ್ಪರ್ಶ: 10 ನಿಮಿಷದಲ್ಲಿ ಲ್ಯಾಬ್ ಮಾದರಿ ಸಾಗಿಸಲು ಬಂತು ಡ್ರೋನ್, ಎಲ್ಲೆಲ್ಲಿ ಸೇವೆ ಲಭ್ಯ? Commercial Drone
- ಬೆಂಗಳೂರಿನ ವೈದ್ಯಕೀಯ ಲೋಕದಲ್ಲಿ ಡ್ರೋನ್ ಕ್ರಾಂತಿ
- ಟ್ರಾಫಿಕ್ನಲ್ಲಿ ಕಾಯೋ ವ್ಯವಧಾನವೇ ಇಲ್ಲ ಡ್ರೋನ್ ಮೂಲಕ ಲ್ಯಾಬ್ ಮಾದರಿ ಸಾಗಿಸೋ ವ್ಯವಸ್ಥೆ
- ಎಲ್ಲೆಲ್ಲಿ ವೈದ್ಯಕೀಯ ತುರ್ತಿಗೆ ಡ್ರೋನ್ ಬಳಕೆ ಮಾಡಿಕೊಳ್ಳಲಾಗುತ್ತಿದೆ?
Commercial Drone : ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಸ್ತೆ ನವೀಕರಣ, ಮೆಟ್ರೋ ಅಭಿವೃದ್ಧಿ ಸೇರಿದಂತೆ ನಾನಾ ಕಾಮಗಾರಿಗಳು ಪ್ರಗತಿಯಲ್ಲಿರುವ ಕಾರಣ, ಎಐ ಆಧಾರಿತ ಪರಿಹಾರ ಕಂಡುಕೊಂಡರೂ ವಾಹನ ಸವಾರರು ಗಂಟೆಗಟ್ಟಲೇ ರಸ್ತೆಯಲ್ಲಿ ಕಾಯೋದು ತಪ್ಪಿದ್ದಲ್ಲ. ಇನ್ನು ರೋಗಿಗಳನ್ನು ಆಸ್ಪತ್ರೆಗೆ ತುರ್ತಾಗಿ ಸೇರಿಸಬೇಕಾದರೂ ಸಹ ಈ ಸಮಸ್ಯೆ ಕಾಡುತ್ತದೆ. ಈ ಎಲ್ಲ ಲೋಪದೋಷಗಳನ್ನು ಮನಗಂಡ ಸ್ಟಾರ್ಟ್ಅಪ್ ಸಂಸ್ಥೆಯೊಂದು ಹೊಸದಾದ ಕ್ರಾಂತಿಗೆ ಮುಂದಾಗಿದೆ.
ಇಂತಹ ಟ್ರಾಫಿಕ್ ಸಮಸ್ಯೆ ಹೊಂದಿರುವ ಬೆಂಗಳೂರಿನಲ್ಲಿ ವೈದ್ಯಕೀಯ ವಿಚಾರಕ್ಕೆ ಸಮಯ ವ್ಯರ್ಥ ಮಾಡದೆ, ಗೋಲ್ಡನ್ ಅವರ್ ಅನ್ನು ಕಾಪಾಡಿಕೊಳ್ಳಲು ಆರೋಗ್ಯ ರಕ್ಷಣ ಸಂಸ್ಥೆ ಮತ್ತು ಲಾಜಿಸ್ಟಿಕ್ ಸ್ಟಾರ್ಟ್ ಅಪ್ ಸಂಸ್ಥೆ ಏರ್ಬೌಂಡ್ ಚಿಂತಿಸಿ, ಪೈಲೆಟ್ ಎನ್ನುವ ಯೋಜನೆಯನ್ನು ಜಾರಿಗೆ ತಂದುಕೊಂಡಿವೆ. ಇದಕ್ಕೆ ನಾರಾಯಣ ಹೆಲ್ತ್ ಸಿಟಿಯ ಒಪ್ಪಿಗೆಯೂ ಇದೆ.
ಲ್ಯಾಬ್ನಲ್ಲಿ ಸಿಗುವ ಮಾದರಿಗಳನ್ನು ಅಂದರೆ, ರೋಗಿಗಳ ರಕ್ತ, ಮೂತ್ರ ಸೇರಿದಂತೆ ನಾನಾ ಪರೀಕ್ಷೆಗಳ ರಿಪೋರ್ಟ್ ಮತ್ತು ಮಾದರಿಯನ್ನು( Bengaluru Drone Dlivery) ಡ್ರೋನ್ ಮುಖೇನ ಜೋಪಾನವಾಗಿ, ಕಡಿಮೆ ಸಮಯದಲ್ಲಿ ಸಾಗಿಸುತ್ತವೆ.
ಏನಿದು ಡ್ರೋನ್ ವ್ಯವಸ್ಥೆ?
ಬಾವಲಿಯಂತೆ ಕಾಣುವ ಡ್ರೋನ್ ಲ್ಯಾಬ್ನಲ್ಲಿ ಪಡೆದುಕೊಂಡ ರೋಗಿಯ ಮಾದರಿಯನ್ನ ತನ್ನ ಹೊಟ್ಟೆಗೆ ಕಟ್ಟಿಕೊಂಡು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ನೀಡುತ್ತದೆ. ಟ್ರಾಫಿಕ್ನಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ವಾಹನಗಳು ಗಂಟೆ ಗಟ್ಟಲೇ ಕಾಯುವ ಬದಲು ಈ ಡ್ರೋನ್ ಗಳನ್ನೇ ಬಳಕೆ ಮಾಡಿಕೊಳ್ಳಬಹುದು ಎನ್ನುವುದು ನಾರಾಯಣ ಹೆಲ್ತ್ ಸಿಟಿ ವ್ಯವಸ್ಥಾಪಕರ ಸಲಹೆಯಾಗಿದೆ.
ಈವರೆಗೂ ಸಾಗಿಸಲಾದ ಲ್ಯಾಬ್ ಮಾದರಿಗಳೆಷ್ಟು?
2026 ಜನವರಿಯಿಂದ ಈ ಪೈಲಟ್ ಯೋಜನೆಯನ್ನು ಜಾರಿ ತರಲಾಗಿದೆ. ಅಲ್ಲಿಂದ 54 ದಿನಗಳಲ್ಲಿ ಸುಮಾರು 700 ಬಾರಿ ಡ್ರೋನ್ ಬಳಕೆ ಮಾಡಿಕೊಳ್ಳಲಾಗಿದೆ. ಒಂದೊಂದು ಡ್ರೋನ್ಗಳು 40 ರೋಗಿಯ ಲ್ಯಾಬ್ ಮಾದರಿಗಳನ್ನು ಸಾಗಿಸಿವೆ. ಹತ್ತು ನಿಮಿಷದಲ್ಲಿ ನಾಲ್ಕು ಕಿ.ಮೀವರೆಗೂ ಈ ಡ್ರೋನ್ ಸಂಚರಿಸುತ್ತವೆ. ಪೀಕ್ ಅವರ್ನಲ್ಲಿ ಟ್ರಾಫಿಕ್ ಮಧ್ಯೆ ಕಾಯುವ ಅವಶ್ಯಕತೆ ಇಲ್ಲದೆ ಈ ಡ್ರೋನ್ ಬಳಕೆ ಮಾಡಿಕೊಳ್ಳಬಹುದು. ಪ್ರತಿ ಒಂದು ಡ್ರೋನ್ ಕಾರ್ಯಾಚರಣೆಯ ವೆಚ್ಚವೂ ಬಜೆಟ್ ಫ್ರೆಂಡ್ಲಿ ಆಗಿರುತ್ತದೆ ಎಂದು ಏರ್ಬೌಂಡ್ ಕಂಪನಿಯ ಮಾಲೀಕರು ಹೇಳಿಕೊಂಡಿದ್ದಾರೆ.
ಈ ಬಗ್ಗೆ ನಾರಾಯಣ ಹೆಲ್ತ್ನ ಸಂಸ್ಥಾಪಕ ಮತ್ತು ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದ್ದು, ಬನಶಂಕರಿಯಲ್ಲಿ ನಾರಾಯಣ ಹೆಲ್ತ್ ಸಿಟಿ ತೆರೆಯಲು ಚಿಂತಿಸುತ್ತಿದ್ದೇವೆ. ಅಲ್ಲಿಗೆ ಈ ಡ್ರೋನ್ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು, (ಏಜನ್ಸೀಸ್).