ಸಿಎಂ ಡಿಕೆ ಶಿವಕುಮಾರ್ ಭಾಷಣದ ವೇಳೆ ಮೋದಿ ಹೆಸರ ಕೂಗಿದ ಜನ
- ಮೋದಿನೇ ಡಿಕೆ ಡಿಕೆ ಅಂತಾ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀದ್ದೀರಾ ಎಂದ ಟಾಂಗ್ ಕೊಟ್ಟ ಸಿಎಂ
- ಡಿಕೆ ಶಿವಕುಮಾರ್ ಅವರ ಭಾಷಣದ ವೇಳೆ ಮೋದಿ ಹೆಸರ ಘೋಷಣೆ
- ಯುವಜನರು ಸಂತೋಷವಾಗಿರಬೇಕು, ಫ್ರೀಡಂ ಇಸ್ ಪಲ್ಸ್ ಯೂತ್ ಇಸ್ ಪವರ್ ಎಂದ ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಫ್ರೀಡಂ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡುತ್ತಿರುವಾಗ ಮೋದಿ..ಮೋದಿ ಎಂದ ಯುವಕರಿಗೆ ಕ್ಷಣಾರ್ಧದಲ್ಲೇ ಕೊಟ್ಟ ಟಾಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ಮಾತನಾಡಲು ಶುರು ಮಾಡಿದಾಗ, ಕೆಲ ಯುವಕರು ಮೋದಿ, ಮೋದಿ ಎಂದು ಕೂಗಲು ಶುರು ಮಾಡಿದರು. ಈ ವೇಳೆ ಕೊಂಚ ಕಾಲ ಮಾತನಾಡದೆ ನಿಂತ ಸಿಎಂ ನಂತರ ನಗುತ್ತಾ ಪ್ರಧಾನಿ ಮೋದಿಯವ್ರೇನೆ ಡಿಕೆ, ಡಿಕೆ ಎನ್ನುತ್ತಾರೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀದ್ದೀರಾ ಎಂದರು. ಆಗ ಮತ್ತೆ ಅಲ್ಲಿ ನೆರೆದಿದ್ದ ಜನರು ಡಿಕೆ,...ಡಿಕೆ ಎನ್ನುವ ಘೋಷಣೆಗಳನ್ನು ಕೂಗಿದರು. ಆ ಮಧ್ಯೆ ಸಿಎಂ ಭಾಷಣ ಆರಂಭಿಸಿದರು.
ಏನಿದು ಫ್ರೀಡಂ ಹಬ್ಬ
ಮೊದಲ ಬಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧಾನಸೌಧ ಆವರಣದಲ್ಲಿ ಫ್ರೀಡಂ ಹಬ್ಬ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮ್ಮೆ ಸಾವಿರಾರು ಜನರು ಆಗಮಿಸಿದ್ದರು. ಸಚಿವ ಕೃಷ್ಣ ಬೈರೇಗೌಡ ಅವರು ಈ ಸಮಾರಂಭದ ರುವಾರಿಯಾಗಿದ್ದರು. ಸಿಂಗರ್ ರಘು ದೀಕ್ಷಿತ್, ಸಂಚಿತ್ ಹೆಗ್ಡೆ ಹಾಡುಗಳಿಗೆ ಬೆಂಗಳೂರಿಗರು ಕುಣಿದು ಕುಪ್ಪಳಿಸಿದ್ದರು.
ಏನೆಲ್ಲ ಇತ್ತು?
ಮಕ್ಕಳು ಹಾಗೂ ಹಿರಿಯರು ಸೇರಿದಂತೆ ಎಲ್ಲರೂ ವಿಧಾನಸೌಧದ ವಾಸ್ತು ಶಿಲ್ಪವನ್ನು ಹತ್ತಿರದಿಂದ ಕಾಣುವಂತೆ ಮಾಡಲು ವಿಶೇಷ ಮಾರ್ಗದರ್ಶಿತ ಪ್ರವಾಸ ಮಾಡಲಾಗಿತ್ತು. ಲಿವಿಂಗ್ ಮ್ಯೂಸಿಯಂ, ವೇಷಭೂಷಣ ಸ್ಪರ್ಧೆ, ರಸ ಪ್ರಶ್ನೆ, ಚಿತ್ರ ಕಲೆ, 120ಕ್ಕೂ ಹೆಚ್ಚು ಮೇಳಗಳಲ್ಲಿ ಕರಕುಶಲ ವಸ್ತು, ಹಸ್ತ ಪ್ರತಿ, ನೈಸರ್ಗಿಕ ಉಡುಪು ಆಹಾರ ಮೇಳ ಇತ್ತು.
ಮೋದಿನೆ ಡಿಕೆ ಅಂತಾರೆ
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡುವ ಸರದಿ ಬಂದಿತ್ತು. ಈ ವೇಳೆ ವೇದಿಕೆ ಮೇಲೆ ಬಂದ ಅವರು ಭಾಷಣ ಶುರು ಮಾಡುವ ಮುನ್ನವೇ ನೆರೆದಿದ್ದ ಕೆಲ ಜನ ಮೋದಿ ಎಂದು ಕೂಗಿದರು. ಆಗ ಮೋದಿನೆ ಡಿಕೆ ಎನ್ನುತ್ತಾರೆ. ನೀವ್ಯಾಕೆ ಮೋದಿ ಎನ್ನುತ್ತೀರ ಎಂದು ಹಾಸ್ಯಭರಿತ ಟಾಂಗ್ ಕೊಟ್ಟರು.
ಕಾರಣಾಂತರದಿಂದ ಫ್ರೀಡಂ ಹಬ್ಬಕ್ಕೆ ಪ್ರವೇಶವನ್ನು ಸೀಮಿತಗೊಳಿಸಿದ್ದೇವೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ. ಲಕ್ಷಾಂತರ ಜನರು ಬಂದು ವಾಪಸ್ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ಕೊಟ್ಟರು.
ಫ್ರೀಡಂ ಇಸ್ ಪಲ್ಸ್ ಯೂತ್ ಇಸ್ ಪವರ್
ಫ್ರೀಡಂ ಇಸ್ ಪಲ್ಸ್ ಯೂತ್ ಇಸ್ ಪವರ್. ನೀವೆಲ್ಲಾ ನಗುತ್ತಾ ಸಂತೋಷವಾಗಿ ಇರಬೇಕು ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಬಂದಿದೆ.
ನನಗೆ ಈ ಭಾಷಣ ಮುಖ್ಯ ಅಲ್ಲ. ನಿಮ್ಮನ್ನು ಕಾಣಲು ನಾನು ಇಲ್ಲಿಗೆ ಬಂದಿದ್ದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು, (ಏಜೆನ್ಸೀಸ್).