Cab Driver Scam (ಸಾಂದರ್ಭಿಕ ಚಿತ್ರ)
ಬೆಂಗಳೂರು: ಬೆಂಗಳೂರಿನ ನಗರಿಯಲ್ಲಿ ಸಾರಿಗೆ ವ್ಯವಸ್ಥೆ ಎಷ್ಟು ಸುಧಾರಿಸಿದೆಯೋ, ಅಷ್ಟೇ ವೇಗವಾಗಿ ಪ್ರಯಾಣಿಕರನ್ನು ವಂಚಿಸುವ ಹೊಸ ತಂತ್ರಗಳು ಹುಟ್ಟಿಕೊಳ್ಳುತ್ತಿವೆ. (Cab Driver Scam) ಆದಾಗ್ಯೂ, ಪ್ರಯಾಣಿಕರೊಬ್ಬರು ಓಲಾ ಬುಕ್ ಮಾಡಿದ ನಂತರ ಅವರಿಗಾದ ಕಹಿ ಘಟನೆಯೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಬುಕ್ಕಿಂಗ್ ಸಮಯದಲ್ಲಿ ಆ್ಯಪ್ ತೋರಿಸಿದ ಮೊತ್ತ 285 ರೂಗಳು. ಆದರೆ, ಪ್ರಯಾಣ ಮುಗಿದ ನಂತರ ಚಾಲಕ ತೋರಿದ ಬಿಲ್ ಸುಮಾರು 5,950 ರೂ. ಬಿಲ್ ಬಂದಿರುವುದಾಗಿ ಆರೋಪಿಸಿದ್ದಾರೆ.
ನಾನು ಕೆಲವು ಹಳೆಯ ಸವಾರಿಗಳನ್ನು ರದ್ದುಗೊಳಿಸಿದ್ದೇನೆ ಮತ್ತು ನಾನು ಪಾವತಿಸದಿದ್ದರೆ ಆ ಮೊತ್ತವನ್ನು ಅವರ ಖಾತೆಯಿಂದ ಕಡಿತಗೊಳಿಸಲಾಗುವುದು ಎಂದು ಚಾಲಕ ಹೇಳಿದ್ದಾರೆ. ಈ ವೇಳೆ ಅಪ್ಲಿಕೇಶನ್‌ನಲ್ಲಿ 285 ರೂ. ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಪ್ರಯಾಣಿಕ ವಿವರಿಸಲು ಪ್ರಯತ್ನಿಸಿದಾಗ ಚಾಲಕ ನೀವು 5950 ರೂ. ಪಾವತಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಚಾಲಕ ಹೆಚ್ಚಾಗಿ ಕನ್ನಡದಲ್ಲಿ ಮಾತನಾಡುತ್ತಿರುವುದರಿಂದ ಪ್ರಯಾಣಿಕನಿಗೆ ಅಷ್ಟೊಂದು ಬರದ ಕಾರಣ ಪರಿಸ್ಥಿತಿ 'ಒತ್ತಡಕರ' ಮತ್ತು ನಿರ್ವಹಿಸಲು ಕಷ್ಟಕರವಾಯಿತು. ಈ ವೇಳೆ ಕ್ಯಾಬ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿದರೂ, ಯಾವುದೇ ಪರಿಹಾರ ಸಿಗಲಿಲ್ಲ ಎಂದು ಹೇಳಿದ್ದಾರೆ.
ಇದಾದ ಬಳಿಕ ಆಪ್ ಮೂಲಕ ಓಲಾದ ತುರ್ತು ಬೆಂಬಲವನ್ನು ಸಂಪರ್ಕಿಸಿದೆ, ತಕ್ಷಣದ ಸಹಾಯವನ್ನು ನಿರೀಕ್ಷಿಸಿದೆ. ಆದಾಗ್ಯೂ, ಕಂಪನಿ ಯಾವುದೇ ರೀತಿಯಲ್ಲಿ ಮಾಹಿತಿ ನೀಡಲಿಲ್ಲ. ಬದಲಾಗಿ ಅಸಭ್ಯ ಮತ್ತು ತಿರಸ್ಕಾರದಿಂದ ವರ್ತಿಸಿದರು ಎಂದರು.
ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ, ಪ್ರಯಾಣಿಕನ ಮನೆ ಮಾಲೀಕರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವಿಚಾರವನ್ನು ಪರಿಹರಿಸಲು ನಾವು ಪೊಲೀಸ್ ಅವರನ್ನು ಭೇಟಿಯಾಘುವುದಾಗಿ ತಿಳಿಸಿದೆವು. ಹಾಗಾಗಿ ನಾವು ಕ್ಯಾಬ್ನ್ನು ಹಿಂಬಾಲಿಸಿ ಹೊರೆಟೆವು. ಸ್ವಲ್ಪ ದೂರವಾದ ಹೋದ ನಂತರ ಕ್ಯಾಬ್ ಚಾಲಕ ಇದ್ದಕ್ಕಿಂದಂತೆ ಮಾರ್ಗ ಬದಲಾಯಿಸಿ ಪರಾರಿಯಾಗಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.
ನೆಟ್ಟಿಗರ ಪ್ರತಿಕ್ರಿಯೆ
ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದು, ಇಂತಹ ಘಟನೆಗಳು ಸಂಭವಿಸಿದಾಗ ತಕ್ಷಣ ಪೊಲೀಸರಿಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ನನಗೂ ಸಹ ಇದು ಸಂಭವಿಸಿದೆ. ಅವರು 'ಇದು ತುರ್ತು ಪರಿಸ್ಥಿತಿ ಅಲ್ಲ' ಎಂದು ಹೇಳಿ ಕರೆಯನ್ನು ಸ್ಥಗಿತಗೊಳಿಸಿದರು ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).