Bengaluru Financial Literacy for kids
- ಮಕ್ಕಳಿಗೆ ಯುಪಿಐ ಮತ್ತು ಭೀಮ್ ಆ್ಯಪ್ ಮೂಲಕ ಹಣಕಾಸು ಜ್ಞಾನ.
- ತಮ್ಮ 6 ವರ್ಷದ ಮಗನ ಪಠ್ಯ ಪುಸ್ತಕ ಕಂಡು ಅಚ್ಚರಿಗೊಳಗಾದ ಉದ್ಯಮಿ
- ಬಾಲ್ಯದಲ್ಲೇ ಮಕ್ಕಳಿಗೆ ಹಣಕಾಸು ಉಳಿತಾಯ, ವ್ಯವಹಾರದ ಬಗ್ಗೆ ಮಾಹಿತಿ
Financial Literacy for kids: ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲರೂ ಯಾವುದೇ ವಸ್ತು ಖರೀದಿಸಿ, ಅದಕ್ಕೆ ಹಣ ಪಾವತಿಯನ್ನು ಆನ್ಲೈನ್ ಮೂಲಕವೇ ಮಾಡುತ್ತಾರೆ. ನಗದು ಕ್ಯಾರಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವೊಮ್ಮೆ ಇದು ಕೈ ಕೊಟ್ಟಾಗ ಪರದಾಡಿದ್ದು ಇದೇ. ಇದೇ ಹೊತ್ತಿನಲ್ಲಿ ಬೆಂಗಳೂರಿನ ಶಾಲೆಯೊಂದು ತಮ್ಮ ವಿದ್ಯಾರ್ಥಿಗಳಿಗೆ ಉಳಿತಾಯ ಮತ್ತು ಹಣ ವ್ಯವಹಾರದ ಬಗ್ಗೆ ಪ್ರತ್ಯೇಕ ಪಾಠವನ್ನೇ ಮಾಡುತ್ತಿರುವ ಬಗ್ಗೆ ಉದ್ಯಮಿ ಮಾಹಿತಿ ಹಂಚಿಕೊಂಡಿರುವುದು ಲಿಂಕ್ಡಿನ್ ಅಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಖ್ಯಾತ ಸ್ಟಾರ್ಟಪ್ನ ಸಿಇಒ ಕುನಾಲ್ ಕಬ್ರಾ ಎಂಬುವವರ ಆರು ವರ್ಷದ ಮಗನಿಗೆ 'ಫೈನಾನ್ಷಿಯಲ್ ಲಿಟರಸಿ' ಎಂಬ ಪ್ರತ್ಯೇಕ ಪಾಠವನ್ನೇ ಹೇಳಿಕೊಡುತ್ತಿರುವ ಬಗ್ಗೆ ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಖಾಸಗಿ ಶಾಲೆಗಳ ಒಳ್ಳೆಯ ನಿರ್ಧಾರ ಎಂದಿದ್ದಾರೆ.
ಸಾಮಾನ್ಯವಾಗಿ ಒಂದನೇ ತರಗತಿಯ ಮಕ್ಕಳಿಗೆ ಪದ್ಯ-ಗದ್ಯಗಳು ಅವರ ವಯಸ್ಸಿನ ಮಕ್ಕಳು ಎಷ್ಟು ರಿಸೀವ್ ಮಾಡಿಕೊಳ್ಳಲು ಸಾಧ್ಯವೋ ಅಂತಹ ಅಧ್ಯಾಯಗಳು ಮಾತ್ರ ಇರುತ್ತದೆ. ಆದರೆ, ಈ ಸಿಇಒ ಮಗುವಿನ ಶಾಲೆ ಅವರ ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆಯನ್ನು ಪ್ರಾಯೋಗಿಕವಾಗಿ ಕಲಿಸಲು ಆರಂಭಿಸಿದೆ.
ಕುನಾಲ್ ಕಬ್ರಾ ಎಂಬುವವರ ಪೋಸ್ಟ್ನಲ್ಲಿ ಹೀಗಿದೆ...
ನನಗೆ ನಿಜಕ್ಕೂ ಆಶ್ಚರ್ಯವಾಯ್ತು ನನ್ನ ಆರು ವರ್ಷದ ಮಗನ ಶಾಲೆಯಲ್ಲಿ ಮೈ ಪೈಸೋ(ನನ್ನ ಹಣ), ಮನಿ ಮೈಂಡ್ಫುಲ್ನೆಸ್(ತಲೆಯ ತುಂಬ ಹಣದ ಯೋಚನೆ) ಎನ್ನುವ ಪುಸ್ತಕ ಕೊಟ್ಟಿದ್ದಾರೆ. ಇದರಲ್ಲಿ ಯುಪಿಐ, ಭೀಮ್ ಪಾವತಿ, ಉಳಿತಾಯ, ಹಣ ಖರ್ಚು ವೆಚ್ಚದ ಬಗ್ಗೆ ಪಠ್ಯವನ್ನು ಒಳಗೊಂಡಿದೆ. ನಾನು ನನ್ನ ಇಡೀ ವೃತ್ತಿ ಜೀವನ ಹಣದ ಸುತ್ತ, ಉದ್ಯಮದ ಸುತ್ತಲೇ ಸುತ್ತುತ್ತಿದ್ದೇನೆ,. ನನ್ನ ಮನೆಯಲ್ಲಿರುವ ಹಿರಿಯರಿಗೆ ಇಂದಿಗೂ ಈ ವ್ಯವಹಾರದ ಬಗ್ಗೆ ಗೊತ್ತೇ ಆಗೋದಿಲ್ಲ. ನನ್ನ ಸುತ್ತಮುತ್ತಲಿನ ಜನರಿಗೆ ನಾನೇ ಅನಧಿಕೃತ ಹಣಕಾಸು ಸಹಾಯವಾಣಿ. ನನಗೆ ಆಗ ಯೋಚನೆಗೆ ಬರುತ್ತಿದ್ದು ಇದನ್ನೆಲ್ಲ ನಮಗ್ಯಾಕೆ ಯಾರು ಕಲಿಸುತ್ತಿರಲಿಲ್ಲ ಎಂದು.
ನಮಗೆ ಯಾವ್ಯಾವುದೋ ಥಿಯರಿಗೆಳು, ಎಂದೋ ನಡೆದ ಯುದ್ಧದ ಬಗ್ಗೆ ಪಾಠ ಮಾಡುತ್ತಿದ್ದರು. ಆದರೆ, ಈ ಉಳಿತಾಯದ ಬಗ್ಗೆ ಕಲಿಸಿಲ್ಲ. ಟಿಡಿಎಸ್, ಪಿಎಫ್ ಏನೆಂದು ತಿಳಿದಿರಲಿಲ್ಲ. ಇಂದು ನನ್ನ ಮಗ ಈ ಪುಸ್ತಕವನ್ನು ನನ್ನ ಮುಂದೆ ಸಾಮಾನ್ಯ ಪುಸ್ತಕವೆಂದು ಇಟ್ಟಾಗ ನನಗೆ ನಿಜಕ್ಕೂ ಆಶ್ಚರ್ಯವಾಗಿ ನೋಡುತ್ತಾ ಕುಳಿತುಬಿಟ್ಟೆ.
ನೆಟ್ಟಿಗರು ಏನಂದ್ರು?
ಇಂತಹ ಪಠ್ಯಗಳನ್ನು ಭಾರತದ ಶಾಲೆಗಳು ಎಂದೋ ಅಳವಡಿಕೆ ಮಾಡಿಕೊಳ್ಳಬೇಕಾಗಿತ್ತು. ದುರದೃಷ್ಟವಶಾತ್ ಇತ್ತೀಚೆಗೆ ಅಳವಡಿಕೆ ಮಾಡಿಕೊಳ್ಳುತ್ತಿದೆ. ಮಕ್ಕಳಿಗೆ ಸೈದ್ಧಾಂತಿಕವಾಗಿ ಪಾಠ ಮಾಡುವ ಬದಲಾಗಿ ಫೋನ್ ಮೂಲಕ ಹಣ ಪಾವತಿಸುವುದು ಹೇಗೆ? ಯುಪಿಐ ಎಂದರೇನು? ಮತ್ತು ಸಣ್ಣ ವಯಸ್ಸಿನಿಂದಲೇ ಹಣವನ್ನು ಹೇಗೆ ಉಳಿಸಬೇಕು ಎಂಬ ಪ್ರಾಯೋಗಿಕ ಜ್ಞಾನ ಇಂದಿನಿಂದಲೇ ಕಲಿಸಬೇಕು ಎಂದಿದ್ದಾರೆ.
"ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಪ್ರತಿಯೊಂದು ಶಾಲೆಯಲ್ಲೂ ಇಂತಹ ಪಾಠಗಳು ಇರಬೇಕು. "ಬೆಂಗಳೂರಿನ ಶಾಲೆಗಳು ಯಾವಾಗಲೂ ಹೊಸತನಕ್ಕೆ ಹೆಸರಾಗಿವೆ, ಇದು ಅದಕ್ಕೊಂದು ಸಾಕ್ಷಿ" ಎಂದಿದ್ದಾರೆ.