Bengaluru auto driver kindness earns him an ice cream treat: 
ರಾಜ್ಯ

ಆಟೋ ಡ್ರೈವರ್​ ಪ್ರಾಮಾಣಿಕತೆಗೆ ಮನಸೋತ ಯುವತಿ; ಐಸ್​​ ಕ್ರೀಂ ಟ್ರೀಟ್​ ಕೊಡಿಸಿ ನೆಟ್ಟಿಗರ ಮನಗೆದ್ದ ಲೇಡಿ..Bengaluru

Bengaluru auto driver kindness earns him an ice cream treat: ಕೆಲವೊಮ್ಮೆ ಬೆಂಗಳೂರು ಹೀಗೆನೆ ಅಪರಿಚಿತರನ್ನು ಪರಿಚಿತರೆನ್ನುವಂತೆ ಮಾಡುತ್ತದೆ...ಗುರುತು ಪರಿಚಯ ಇಲ್ಲದವರಿಗೆ ಸಹಾಯ ಮಾಡುವಂತೆ ಮಾಡುತ್ತದೆ. ಕೆಲಸ ಸಿಗದಿದ್ದಾಗ ಅಳಿಸುತ್ತದೆ. ನಗಿಸುತ್ತದೆ. ಹೊಸ ಸ್ನೇಹಿತರು, ಪ್ರೀತಿ ಹೀಗೆ ನಾನಾ ವಿಚಾರಕ್ಕೆ ಕಾರಣವಾಗುತ್ತದೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರ ಮನ ಗೆದ್ದಿದ್ದು ಇಂತದ್ದೇ ಒಂದು ಘಟನೆ.
ಸಾಮಾನ್ಯವಾಗಿ ಹೊತ್ತಲ್ಲದ ಹೊತ್ತಲಿ, ಪ್ರಯಾಣಿಸುತ್ತಿರುವ ಸಮಯದಲ್ಲಿ ಕೆಲವೊಂದು ಆಹಾರ ತಿನ್ನಬೇಕು ಎನ್ನುವ ಹೆಬ್ಬಯಕೆ ಶುರುವಾಗುತ್ತದೆ. ಆದರೆ, ನಾವು ಹೋಗುತ್ತಿರುವ ಸಾರ್ವಜನಿಕ ವಾಹನ, ಕ್ಯಾಬ್​ ನಿಲ್ಲಿಸೋದು ಹೇಗೆ ಎನ್ನುವ ಭಯದಲ್ಲಿ ಸುಮ್ಮನಾಗುತ್ತೇವೆ. ಆದರೆ, ಬೆಂಗಳೂರಿನಲ್ಲಿ ಯುವತಿಯೊಬ್ಬರಿಗೆ ಐಸ್​ಕ್ರೀಂ ತಿನ್ನಬೇಕು ಎನಿಸಿ...ರ್ಯಾಪಿಡೋ ಚಾಲಕನನ್ನು ಅಲ್ಲಿಯೇ ನಿಲ್ಲಿಸಿ, ಆತನಿಗೂ ಐಸ್​ ಕ್ರೀಂ ತಂದ ಘಟನೆಯೂ ನೆಟ್ಟಿಗರ ಮನಗೆದ್ದಿದೆ.

ವಿಡಿಯೋದಲ್ಲಿ ಏನಿದೆ?

ಲಕ್ಷ್ಯಾ ಮೆಹ್ತಾ ಎನ್ನುವವರು ಹಂಚಿಕೊಂಡಿರುವ ವಿಡಿಯೋದಲ್ಲಿ ಹೀಗಿದೆ. ಅನ್ಯ ರಾಜ್ಯದ ಹುಡುಗಿಯೊಬ್ಬರು ರ್ಯಾಪಿಡೋದಲ್ಲಿ ಪ್ರಯಾಣಿಸುತ್ತಿರುವಾಗ ಕಣ್ಣಿಗೆ ಐಸ್​ಕ್ರೀಂ ಪಾರ್ಲರ್​ವೊಂದು ಕಾಣಿಸುತ್ತದೆ. ಆಗ ಥಟ್ಟನೇ ಬಯ್ಯ ಕೊಂಚ ನಿಲ್ಲಿಸಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಐಸ್​ಕ್ರೀಂ ತರುತ್ತೇನೆ ಎಂದು ಹೋದ ಆಕೆ ತನಗಷ್ಟೇ ಅಲ್ಲದೇ ಆಟೋ ಚಾಲಕನಿಗೊಂದು ಐಸ್​ಕ್ರೀಂ ಕೊಂಡು ತಂದು ಕೊಟ್ಟು. ಇದನ್ನು ತಿನ್ನಿ ತುಂಬಾನೆ ಚಂದವಾಗಿರುತ್ತದೆ ಎಂದು ಹೇಳಿದ್ದಾರೆ. ಅಯ್ಯೋ ನನಗೆ ಇದರ ಅವಶ್ಯಕತೆ ಇರಲಿಲ್ಲ ಎಂದ ಆಟೋ ಡ್ರೈವರ್​ ಕೊನೆಗೆ ಥ್ಯಾಂಕ್ಯು ಮೇಡಂ ಎಂದು ನಕ್ಕಿದ್ದು ಗಮನ ಸೆಳೆದಿದೆ.

ನೆಟ್ಟಿಗರು ಏನಂದ್ರು?

ಇದೆನೂ ದೊಡ್ಡ ವಿಚಾರ ಅಲ್ಲ ಐಸ್​ಕ್ರೀಂ ತಿನ್ನೋಕೆ ಬಯಸಿದ್ಲು ಆತನಿಗೂ ತಂದು ಕೊಟ್ಲು ಅಷ್ಟೇನೆ. ಇದಕ್ಕೆ ಇಷ್ಟೆಲ್ಲ ಬಿಲ್ಡಪ್​ ಬೇಕಿತ್ತಾ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಬದಲಾವಣೆಗಳೆ ಚಂದ. ಅಲ್ಲಿ ಆಟೋ ಡ್ರೈವರ್​ ಆಕೆ ಬೈದು ಸುಮ್ಮನೆ ಕರೆದುಕೊಂಡು ಹೋಗಬೇಕಿತ್ತು. ನಾವು ಭಾರತೀಯರು ಯಾವುದೇ ಕಾರಣವಿಲ್ಲದೆ ತುಂಬಾ ಕೋಪಗೊಳ್ಳುತ್ತೇವೆ. ಆದರೆ, ಆತ ಹಾಗೆ ಮಾಡಲಿಲ್ಲ. ನಿಲ್ಲಿಸಿ ಸಹಕರಿಸಿದ ಎಂದು ಆರ್ಜೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ವಿಕ್ರಮ್​ ಆಶಾ ಎನ್ನುವವರು ಕಾಮೆಂಟ್ ಮಾಡಿದ್ದು, ಕ್ಯಾಮೆರಾದ ಹೊರಗೆಯೂ ಜನರು ಇದೇ ರೀತಿ ವರ್ತಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ನನಗೆ ಅನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಜನರು ಮಾನವೀಯತೆ, ಪ್ರೀತಿಯನ್ನು ಮರೆತಿಲ್ಲ ಎನ್ನುವುದು ಈ ವಿಡಿಯೋ ಮೂಲಕ ಕಾಣಿಸುತ್ತಿದೆ, (ಏಜೆನ್ಸೀಸ್).