Bengaluru auto driver emotional love story
- 8 ವರ್ಷಗಳ ಹಿಂದೆ ಪತ್ನಿ ನಿಧನ..ಇನ್ನೂ ಆಕೆಯ ನೆನಪಿನಲ್ಲೇ ಇರುವ ಆಟೋ ಚಾಲಕ
- ನಿತ್ಯ ಹೂ ಕೊಂಡು ಆಕೆಯ ಫೋಟೋಗೆ ಇರಿಸಿ...ವೃದ್ಧಾಪ್ಯದಲ್ಲಿಯೂ ಆಟೋ ಚಾಲನೆ
- ಮಕ್ಕಳು, ಮೊಮ್ಮಕ್ಕಳಿದ್ದರೂ ಸಹ ಆಕೆಯನ್ನು ಮರೆಯಲಾಗುತ್ತತಿಲ್ಲ ಎಂದ ವೃದ್ಧ
Bengaluru auto driver emotional love story:
ಪ್ರೀತಿಗೆ ಎಲ್ಲೆ, ಗಡಿ ಯಾವುದು ಇರೋದೆ ಇಲ್ಲ ಎನ್ನುವುದಕ್ಕೆ ಬೆಂಗಳೂರಿನ ಈ ಆಟೋ ಚಾಲಕನೇ ಸಾಕ್ಷಿ. ಯಾಕೆಂದರೆ, ಪತ್ನಿ ಮೃತಪಟ್ಟು 8 ವರ್ಷ ಕಳೆದರೂ ಸಹ ಆಕೆಯ ನಗುವೇ ನನಗೆ ಸ್ಪೂರ್ತಿ ಎಂದು ನಂಬಿರುವ ಈ ಚಾಲಕ ಆಟೋದಲ್ಲಿ ಆಕೆ ಫೋಟೋ ಇರಿಸಿ ಹೂವಿಟ್ಟು ಪೂಜೆ ಮಾಡಿ...ಬೀದಿ ಬೀದಿಯಲ್ಲಿ ಕೆಲಸ ಮಾಡಿ ಆತನ ಪ್ರೇಮ ಎಂಥದ್ದು ಎನ್ನುವುದನ್ನು ಪರೋಕ್ಷವಾಗಿ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಇನ್ಸ್ಟಾಗ್ರಾಮ್ನಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಪತ್ನಿ ಎಂಟು ವರ್ಷದ ಹಿಂದೆ ಮೃತ ಪಟ್ಟಿದ್ದರೂ ಸಹ ಆಕೆಯ ನೆನಪಿನಿಂದ ಹೊರ ಬರಲಾರದೆ, ವಯಸ್ಸಾಗಿದ್ದರೂ ಸಹ ಪ್ರತಿದಿನ ತಮ್ಮ ಆಟೋವನ್ನು ಹೂವಿನಿಂದ ಅಲಂಕರಿಸಿ, ಪತ್ನಿಯ ಭಾವಚಿತ್ರವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡು ಆಕೆಗೆ ಪೂಜೆ ಮಾಡಿ, ಹಗಲಿರುಳು ಇತರ ಜನರನ್ನು ಭೇಟಿ ಮಾಡಿ..ಆಕೆಯನ್ನು ಮರೆಯಲು ಯತ್ನಿಸುತ್ತಿರುವ ವಿಡಿಯೋ ಸದ್ಯ ನೆಟ್ಟಿಗರ ಮನಗೆದ್ದಿದೆ.
ವಿಡಿಯೋದಲ್ಲಿ ಏನಿದೆ?
ಸೂರಜ್ ಎಸ್ ಕುರುಪ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೀಗೆಂದು ವಿಡಿಯೋ ಹಂಚಿಕೊಂಡಿದ್ದಾರೆ.. ಇಂದಿರಾನಗರದ ಟ್ರಾಫಿಕ್ ಸಿಗ್ನಲ್ನಲ್ಲಿ ನಾನು ಆಟೋ ಚಾಲಕರೊಬ್ಬರನ್ನು ಕಂಡೆ. ಆ ವೃದ್ಧ ಆಟೋ ಚಾಲಕ ತನ್ನ ಆ ಮುಂಭಾಗದಲ್ಲಿ ಅಂದವಾಗಿ ಜೋಡಿಸಿದ್ದ ಹೂಗಳನ್ನು ಗಮನಿಸಿ, ಯಾರಿಗಾಗಿ ಎಂದು ಸೂರಜ್ ಅವರು ಹೂವುಗಳು ಪ್ರಶ್ನಿಸಿದ್ದಾರೆ. ಇದಕ್ಕೆ ನನ್ನ ಹೆಂಡತಿ ಈಕೆ ಮೃತಪಟ್ಟು ಎಂಟು ವರ್ಷ ಆಯ್ತು ಆದರೆ ಮರೆಯೋಕೆ ಸಾಧ್ಯವಾಗುತ್ತಿಲ್ಲ.
ಪ್ರೀತಿ ಕೊಡೋರಿದ್ರು ಆಕೆಯನ್ನು ಮರೆಯಲಾಗ್ತಿಲ್ಲ
ನನಗೆ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಹೆಚ್ಚು ಪ್ರೀತಿ ಕೊಡುತ್ತಾರೆ. ಆದರೆ ಆಕೆಯ ಪ್ರೀತಿಯನ್ನು ಜೊತೆಗೆ ಆಕೆಯನ್ನು ಇಂದಿಗೂ ಮರೆಯಲಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಪ್ರತಿದಿನ ಆಟೋ ಓಡಿಸಲು ಕಾರಣವೇನೆಂದು ಸೋರಜ್ ಕೇಳಿದಾಗ, ವೃದ್ಧ ಚಾಲಕ ಬಹಳ ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಮನೆಯಲ್ಲಿಯೇ ಸುಮ್ಮನೆ ಕುಳಿತರೆ ಅತಿಯಾದ ಆಲೋಚನೆಗಳು ಮನಸ್ಸನ್ನು ಕಾಡುತ್ತವೆ ಎಂದಿರುವ ಅವರು, ಅದಕ್ಕಿಂತ ಪ್ರತಿದಿನ ಆಟೋ ಓಡಿಸುತ್ತಾ ದಾರಿಯಲ್ಲಿ ಸಿಗುವ ಜನರೊಂದಿಗೆ ಮಾತನಾಡುತ್ತಾ ತಮ್ಮ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ.
ನೆಟ್ಟಿಗರು ಏನಂದ್ರು?
ಯುವತಿಯರು ಇಂಥಾ ಪ್ರೀತಿಯನ್ನು ಬೇಡುತ್ತಾರೆ. ಆದರೆ ಅವರೇ ಹಾಗೆ ನಡೆದುಕೊಳ್ಳೋದಿಲ್ಲ. ಇನ್ನೂ ಹೇಗೆ ತಾನೆ ಇಂತಹ ಪ್ರೀತಿಯನ್ನು ತೋರ್ಪಡಿಸಲು ಸಾಧ್ಯ ಎಂದು ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ಬರೆದುಕೊಂಡಿದ್ದಾರೆ. 'ಶಾಶ್ವತ ಪ್ರೀತಿಯ ಸುಂದರ ಅಭಿವ್ಯಕ್ತಿ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸ್ಥಳೀಯ ಬಳಕೆದಾರರೊಬ್ಬರು ಕಾಮೆಂಟ್ ಮಾಡುತ್ತಾ, ಆ ಚಾಲಕ ತಮ್ಮ ಮನೆಯ ಹತ್ತಿರವೇ ವಾಸಿಸುತ್ತಿದ್ದಾರೆಂದೂ, ಪ್ರತಿದಿನ ಬೆಳಿಗ್ಗೆ ತಮ್ಮ ಆಟೋವನ್ನು ಸ್ವಚ್ಛಗೊಳಿಸಿ ಹೂವಿನಿಂದ ಸಿಂಗರಿಸುವ ಅವರ ಸುಂದರ ದಿನಚರಿಯನ್ನು ತಾವು ನಿತ್ಯ ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ, (ಏಜೆನ್ಸೀಸ್)