ಮೃತರ ಕುಟುಂಬಕ್ಕೆ ಸೌಲಭ್ಯ family
ಟೇಕಲ್: ಈಜಲು ಹೋಗಿ ಕೃಷಿ ಹೊಂಡದಲ್ಲಿ ತಂದೆ-ಮಕ್ಕಳಿಬ್ಬರು ಮೃತಪಟ್ಟಿರುವ ಕುಟುಂಬಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಸಂತ್ವನ ಹೇಳಿದರು, ಜತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. family
ಮಾಲೂರು ತಾಲೂಕು ಟೇಕಲ್ ಸಮೀಪದ ಕೊಂಡಶೆಟ್ಟಿಹಳ್ಳಿಯಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ಬೇಸಿಗೆ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ಕೃಷಿ ಹೊಂಡಕ್ಕೆ ಹೋಗಿದ್ದರು. ಆಳ ಹೆಚ್ಚಿದ್ದರಿಂದ ಮೂವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ರವಿ ಅವರು, ಅಧಿಕಾರಿಗಳೊಂದಿಗೆ ಕೃಷಿ ಹೊಂಡ ವೀಕ್ಷಿಸಿದರು, ಅಧಿಕಾರಿಗಳಿಂದ ಕುಟುಂಬದ ಮಾಹಿತಿ ಪಡೆದುಕೊಂಡು ನಿವೇಶನದ ಜತೆಗೆ ವಸತಿ ಕಲ್ಪಿಸಲು ತಾಲೂಕು ಪಂಚಾಯಿತಿ ಇಒ ಕೃಷ್ಣಪ್ಪ ಅವರಿಗೆ ಸೂಚಿಸಿದರು.
ಮೃತ ಕುಟುಂಬದ ಸದಸ್ಯರಿಗೆ 3 ದಿನಗಳೋಳಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ರೈತರು ಕೃಷಿಹೋಂಡ ವಾಡುವಾಗ ತಂತಿಬೇಲಿ ಹಾಗೂ ಅಪಾಯಕಾರಿ ಸ್ಥಳ ಎಂದು ನಾಮಲಕ ಹಾಕಬೇಕು ಎಂದು ರೈತರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ಮೃತರ ಕುಟುಂಬಕ್ಕೆ 2.5 ಲಕ್ಷ ರೂ. ಸರ್ಕಾರದಿಂದ ಪ್ರೋತ್ಸಾಹ ನೀಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು. ಕೃಷಿ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳನ್ನು ಮೂರು ದಿನಗಳ ಒಳಗೆ ನೊಂದ ಕುಟುಂಬಕ್ಕೆ ಧನ ಸಹಾಯ ಮಾಡಬೇಕಾಗಿ ಸೂಚಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ಮೂಲಸೌಲಭ್ಯಗಳು ಈ ಕೂಡಲೇ ಅವರಿಗೆ ಮನೆ ಮಂಜೂರಾತಿ ಪತ್ರ, ವಿದ್ಯುತ್, ಕುಡಿಯುವ ನೀರು, ಮನೆ ನಿರ್ವಾಣ ವಾಡಿಕೊಡಲಾಗುವುದು. ಕಂದಾಯ ಇಲಾಖೆಯಿಂದ ಸಿಗಬೇಕಾದ ವಿಧವಾ ವೇತನ ಮಂಜೂರಾತಿ ಪತ್ರಶ್ರಿ ವಿತರಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ತಹಸೀಲ್ದಾರ್ ಎಂ.ವಿ.ರೂಪಾ, ವಾಸ್ತಿ ಠಾಣೆ ಇನ್‌ಸ್ಪೆಕ್ಟರ್ ಓಂಪ್ರಕಾಶ್‌ಗೌಡ, ಜಿಲ್ಲಾ ಕೃಷಿ ನಿರ್ದೇಶಕಿ ಮಂಜುಳಾ, ಸಹಾಯಕ ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್, ಕಂದಾಯ ನಿರೀಕ್ಷಕ ನಾರಾಯಣಸ್ವಾಮಿ ಇದ್ದರು.