ಹುಮನಾಬಾದ್ನ ಹರ್ಷಿತ್ ಡಯಾಗೋಸ್ಟಿಕ್ ಕೇರ್ ಕೇಂದ್ರದಲ್ಲಿ ಮಂಗಳವಾರ ನೂತನ ಸಿಟಿ ಸ್ಕಾನ್ ಸೆಂಟರ್ಗೆ ಹಿರೇಮಠದ ಪೀಠಾಧಿಪತಿ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು ಪೂಜೆ ನೆರವೇರಿಸಿ ಚಾಲನೆ ನೀಡಿದರು. ಕೇಂದ್ರದ ಮುಖ್ಯಸ್ಥ ಡಾ.ಶರಣಪ್ಪ ಹಳಿದೊಡ್ಡಿ, ಡಾ. ವಿಶ್ವ ಸೈನೀರ್, ಡಾ.ರೋಹಿತ ರೂಜಿ, ಡಾ.ಪ್ರವಿಣ ಕಡ್ಯಾಳೆ ಇತರರಿದ್ದರು.
- ಶ್ರೀ ರೇಣುಕ ಗಂಗಾಧರ ಶಿವಾಚಾರ್ಯ ನುಡಿ
- ಹುಮನಾಬಾದ್ನಲ್ಲಿ ಮೊದಲ ಸಿಟಿಸ್ಕಾನ್ ಸೆಂಟರ್ ಆರಂಭ
ಹುಮನಾಬಾದ್: ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸರ್ಕಾರಿ ನೌಕರರ ಭವನದ ಸಮೀಪದ ಹರ್ಷಿತ್ ಡಯಾಗೋಸ್ಟಿಕ್ ಕೇರ್ ಕೇಂದ್ರದಲ್ಲಿ ಮಂಗಳವಾರ ಪ್ರಪ್ರಥಮವಾಗಿ ಸಿಟಿ ಸ್ಕಾನ್ ಸೆಂಟನ್ನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು.
ಹಿರಿಯ ವೈದ್ಯ ಡಾ. ಶರಣಪ್ಪ ಹಳಿದೊಡ್ಡಿ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸೌಲಭ್ಯವನ್ನು ಹಿರೇಮಠದ ಪೀಠಾಧಿಪತಿ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ತಾಲೂಕು ಕೇಂದ್ರವಾದ ಹುಮನಾಬಾದ್ನಲ್ಲೆ ಪ್ರಥಮ ಬಾರಿಗೆ ಸಿಟಿ ಸ್ಕಾನ್ ಸೇವೆ ಆರಂಭವಾಗಿರುವುದು ಸ್ಥಳಿಯ ಜನರಿಗೆ ಬಹಳ ಉಪಯುಕ್ತವಾಗಿದೆ. ಈ ಸೌಲಭ್ಯ ಇಲ್ಲದ ಕಾರಣ ಜನರು ಬೀದರ್, ಕಲಬುರಗಿ, ಸೊಲ್ಲಾಪುರ ಹಾಗೂ ಹೈದರಾಬಾದ್ ನಗರಗಳಿಗೆ ತೆರಳಿ ಪರೀೆ ಮಾಡಿಸಿಕೊಳ್ಳಬೇಕಾಗಿತ್ತು. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತಿತ್ತು. ಇದೀಗ ಪಟ್ಟಣದಲ್ಲಿಯೇ ಈ ಸೇವೆ ಲಭ್ಯವಾಗಿರುವುದು ಸಂತಸದ ವಿಷಯವಾಗಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಾಣಿಕನಗರ ಸಂಸ್ಥಾನದ ಶ್ರೀ ಆನಂದರಾಜ ಪ್ರಭು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಸರ್ಕಾರಿ ಆಸ್ಪತ್ರೆಯ ಸಿಎಂಒ ಡಾ.ನಾಗನಾಥ ಹುಲಸೂರೆ, ಡಾ.ವಿಶ್ವ ಸೈನೀರ್, ಡಾ.ರೋಹಿತ ರೂಜಿ, ಡಾ.ಪ್ರವಿಣ ಕಡ್ಯಾಳೆ, ವಿಶಾಲ ಚಿತ್ತಾಕೋಟೆ, ಡಾ.ರಾಹುಲ್ ಪಾಟೀಲ್, ಡಾ.ಮುಸ್ತಾಬಾ ಇತರರು ಭಾಗವಹಿಸಿದ್ದರು.