ಬೆನಕಟ್ಟಿಯಲ್ಲಿ ಹೊನಲು ಬೆಳಕಿನ ಟಗರಿನ ಕಾಳಗವನ್ನು ಶ್ರೇಯಸ್​ ಮಾಮನಿ ಉದ್ಘಾಟಿಸಿದರು. ಎ.ಐ.ಶಿರಸಂಗಿ, ಹನುಮಂತ ಮುರಗೋಡ ಇತರರಿದ್ದರು. 
ರಾಜ್ಯ

ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ

ಮಾಮನಿ ಮನೆತನಕ್ಕೆ ಅಧಿ-ಕಾರಕ್ಕಿಂತ ಜನರ ನಾಡಿಮಿಡಿತ ಮುಖ್ಯ ಎಂದು ಯುವ ಮುಖಂಡ ಶ್ರೇಯಸ್​ ಮಾಮನಿ ಹೇಳಿದರು.

ಗ್ರಾಮದಲ್ಲಿ ನಾಗರಪಂಚಮಿ ಅಂಗವಾಗಿ ಬ್ರ್ಯಾಂಡ್​ ಗೆಳೆಯರ ಬಳಗದ ವತಿಯಿಂದ ತಾಲೂಕು ಬಿಜೆಪಿ ಅಧ್ಯ ವಿರೂಪಾ ಮಾಮನಿ ಪ್ರಾಯೋಜಕತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಟಗರಿನ ಕಾಳಗ ಉದ್ಘಾಟಿಸಿ ಮಾತನಾಡಿದರು.
ಜನರ ಶ್ರೀರೆಯಿಂದ ಮಾಮನಿ ಮನೆತನಕ್ಕೆ ಐದಾರು ದಶಕಗಳ ಕಾಲ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಮುಂದೆಯೂ ಜನರ ಕಷ್ಟ ಹಾಗೂ ಸುಖದಲ್ಲಿ ಮನೆತನ ಸದಾ ಪಾಲ್ಗೊಳ್ಳುತ್ತದೆ ಎಂದರು. ಬಿಜೆಪಿ ಮುಖಂಡ ಪಂಚಪ್ಪ ಮಾತಾರಿ, ಮಾಜಿ ಎಪಿಎಂಸಿ ಅಧ್ಯ ಪ್ರಕಾಶ ನರಿ ಮಾತನಾಡಿದರು. ಮಾಜಿ ಗ್ರಾಪಂ ಸದಸ್ಯ ಈರಯ್ಯ ಹಿರೇಮಠ, ಮಾಯಪ್ಪ ಚೂರಿ, ಪ್ರವಿಣ ಭಿಷ್ಟಣ್ಣವರ, ತೇಜಪ್ಪ ವೀರಶೆಟ್ಟಿ, ಮರೆಪ್ಪ ಕೌಜಲಗಿ, ಉಮೇಶ ಸಾವಳಗಿ, ಗೂಳಪ್ಪ ಗುಡಮ್ಮಕೇರಿ, ಕೀರಪ್ಪ ಕುರಿ, ಹನುಮಂತ ಮುರಗೋಡ, ಮಹಾಂತೇಶ ಭಿಷ್ಟಣ್ಣವರ, ಬಸವರಾಜ ಗೊಗ್ಗಿ, ಕಿರಣ ನಂದಿ, ಮಲ್ಲಪ್ಪ ಶಿರೋಳ, ಮಂಜುನಾಥ ಶಿರೋಳ, ಆಕಾಶ ಕಲ್ಲೇದ, ಮಾಧು ಕುರಿ, ವಾಸುದೇವ ಬರಗಿ, ಶಿದ್ರಾಯ ಬೊಮ್ಮನ್ನವರ ಇತರರಿದ್ದರು.