ಕರಗ ಮಹೋತ್ಸವದ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು ಮಹಿಳೆಯರು ಬೆಲ್ಲದಾರತಿಗಳನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಆನೇಕಲ್ : ಪಟ್ಟಣದ ಭಜನೆ ಮನೆ ಶ್ರೀ ದ್ರೌಪದಮ್ಮ ದೇವಿ ಕರಗ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಮಂಗಳವಾರ ಮತ್ತು ಬುಧವಾರ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ತಿಗಳರ ಬೀದಿಯ ಭಜನೆ ಮನೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ವಿವಿಧ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಬುಧವಾರ ಬೆಳಗ್ಗೆದೀಪೋತ್ಸವ ಅದ್ದೂರಿಯಾಗಿ ನೆರವೇರಿತು. ಮಹಿಳೆಯರು ಬೆಲ್ಲದ ಆರತಿಗಳನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮಹಿಳೆಯರು ದೀಪಾರತಿ ಹೊತ್ತು ಸಾಗಿದರು. ಈ ವೇಳೆ ಡೋಲು ಹಾಗೂ ವಾದ್ಯಗಳ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಗಮನಸೆಳೆದರು. ನೂರಾರುಮಹಿಳೆಯರು ಬೆಲ್ಲದ ಆರತಿಹಾಗೂ ಹೂವಿನಿಂದ ಅಲಂಕೃತ ಕುಂಭಗಳನ್ನು ಹೊತ್ತು ದೀಪೋತ್ಸವದಲ್ಲಿ ಭಾಗಿಯಾದರು.
ಹಸಿಕರಗ ಉತ್ಸವಕ್ಕೆ ಸಿದ್ಧತೆ : ಗುರುವಾರ ಆನೇಕಲ್ ಭಜನೆ ಮನೆಯ ಶ್ರೀ ದ್ರೌಪದಮ್ಮದೇವಿ ಹಸಿ ಕರಗ ಉತ್ಸವ ನಡೆಯಲಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿದ್ದು, ವಿದ್ಯುತ್ ದೀಪಾಲಂಕಾರ ಸೇರಿದಂತೆ ವಿವಿಧ ಸೇವಾ ಕಾರ್ಯಗಳಿಗೆ ಸಜ್ಜುಗೊಳಿಸಲಾಗಿದೆ. ಭಜನೆ ಮನೆ ವತಿಯಿಂದ ಮಾಡಲಾಗುತ್ತಿರುವ ಈ ಬಾರಿಯ ಕರಗ ಉತ್ಸವ ಮೊದಲ ಬಾರಿಗೆ ದೇವಾಲಯದಿಂದ ಕರಗ ಹೊತ್ತು ಪೂಜಾರಿ ಚಂದ್ರಪ್ಪ ಅವರು ಪಟ್ಟಣದಲ್ಲಿ ಸಂಚಾರ ಮಾಡಲಿದ್ದಾರೆ.
ಉತ್ಸವಕ್ಕೆ ಸಜ್ಜು : ಕರಗ ಹೊರುವ ಚಂದ್ರಪ್ಪ, ಈಗಾಗಲೇ ಸಂಪೂರ್ಣವಾಗಿ ಶಾಸೊಕ್ತಗಳನ್ನುಪೂರ್ಣಗೊಳಿಸಿ ಕರಗ ಮಹೋತ್ಸವಕ್ಕೆ ಸಿದ್ಧರಾಗಿದ್ದಾರೆ. ಆಯೋಜಕರು ಭಜನೆ ಮನೆ ದೇವಾಲಯದಲ್ಲೂ ಕೂಡ ಕರಗ ಸಿದ್ಧತೆಗಳನ್ನು ಸಂಪೂರ್ಣವಾಗಿ ಮಾಡಿಕೊಂಡಿದ್ದಾರೆ. ಸಂತೆಮಾಳದ ಬಳಿ ಈಗಾಗಲೇ ಬಲಿರಾಮನ ಮೂರ್ತಿಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಕಳೆದ ತಿಂಗಳು ಧರ್ಮರಾಯಸ್ವಾಮಿ ದೇವಾಲಯದ ಅರ್ಚಕರ ರಮೇಶ್ ಕರಗ ಉತ್ಸವ ನೆರವೇರಿಸಿದ್ದರು. ಇದಾದ ಬಳಿಕ 40 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಸುತ್ತಿದ್ದ ವಹ್ನಿಕುಲ ಸೇವಾ ಸಂದವರು ಈ ಬಾರಿ ಪ್ರತ್ಯೇಕ ಕರಗ ಮಾಡುವ ಮೂಲಕ ಅದ್ದೂರಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.