ಬೇಸಿಗೆಯಲ್ಲಿಯು ಬತ್ತದ ಕೆರೆಗಳು 
ರಾಜ್ಯ

ಬೇಸಿಗೆಯಲ್ಲಿಯು ಬತ್ತದ ಕೆರೆಗಳು

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಲ್ಲಿಯು ಬತ್ತದ ಕೆರೆಗಳು
  • ಬೆಳಗಾವಿ ಜಿಲ್ಲೆಯ ಕೆರೆಗಳಲ್ಲಿ ನೀರು ಸಂಗ್ರಹ
  • ನೀರಾವರಿ ಯೋಜನೆಗಳು ಪ್ರತಿಫಲ
ಬೇಸಿಗೆಯಲ್ಲಿಯು ಬತ್ತದ ಕೆರೆಗಳು
| ಅಂತರ್ಜಲಮಟ್ಟ ವೃದ್ಧಿಗೆ ಅನುಕೂಲ |ನೀರಾವರಿ ಯೋಜನೆಗಳ ಪ್ರತಿಫಲ
ಆನಂದ ಭಮ್ಮನ್ನವರ ಚಿಕ್ಕೋಡಿ
ಬೇಸಿಗೆಯ ತಾಪಮಾನದಿಂದ ಜನ-ಜಾನುವಾರಗಳಲ್ಲಿ ಜಲದಾಹ ಹೆಚ್ಚಿದೆ.ಬಿಸಿಲಿನ ನೀರಿನ ಜಲಮೂಲಗಳು ಬತ್ತುತ್ತಿವೆ. ಈ ವೇಳೆಯಲ್ಲಿಯೂ  ಜಿಲ್ಲೆಯ 50ಕ್ಕೂ ಅಧಿಕ ಕೆರೆಗಳಲ್ಲಿ ನೀರು ತುಂಬಿಕೊಂಡಿದ್ದು ಜನ-ಜಾನುವಾರ, ಅಂತರ್ಜಲಮಟ್ಟ ವೃದ್ಧಿಗೆ ಅನುಕೂಲವಾಗಿದೆ.
ಜಿಲ್ಲೆಯಲ್ಲಿ ೨೯೫ ಕೆರೆಗಳು :
ಬೆಳಗಾವಿ ತಾಲೂಕಿನಲ್ಲಿ ೨೭,ಖಾನಾಪುರ ೪೦,ಬೈಲಹೊಂಗಲ ೧೪, ಕಿತ್ತೂರ ೨೧, ಹುಕ್ಕೇರಿ ೪೨,ಗೋಕಾಕ ೯,ಸವದತ್ತಿ ೩೬,ರಾಮದುರ್ಗ ೨೮,ರಾಯಬಾಗ ೧೩,ಅಥಣಿ ೩೬,ಕಾಗವಾಡ೩,ಚಿಕ್ಕೋಡಿ ೧೭ , ನಿಪ್ಪಾಣಿ ೪ ಹೀಗೆ ಒಟ್ಟು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗಳು ೨೯೫ ಕೆರೆಗಳಿವೆ. ಈಗಾಗಲೇ ಕೆರೆಗಳು ಬಸಿ ನೀರು ಕೆರೆಗಳಾಗಿರುವುದರಿಂದ ಮಳೆಗಾಲದಲ್ಲಿ ತುಂಬಿ ಚಳಿಗಾಲದಲ್ಲಿ ಬತ್ತಿ ಹೋಗುತ್ತವೆ.
ಬೇಸಿಗೆಯಲ್ಲಿಯೂ ಬತ್ತದ ನೀರಿನ ಸೆಲೆ:
ಸಾಮಾನ್ಯವಾಗಿ ಕೆರೆಗಳು ಆರಂಭಕ್ಕೂ ಮುನ್ನವೇ ಬತ್ತಿ ಬಿರುಕು ಬಿಡುತ್ತವೆ. ಆದರೆ ಏತ ನೀರಾವರಿ ಯೋಜನೆ ಮತ್ತು ಮುಂಗಾರು ಮಳೆಯಿಂದ ತುಂಬಿಕೊಂಡ ನೀರು ಜಿಲ್ಲೆಯಲ್ಲಿ 50ಕ್ಕೂ ಅಧಿಕ ಕೆರೆಗಳಲ್ಲಿಯೂ ಸಂಗ್ರಹವಿದೆ. ಹುಕ್ಕೇರಿ ತಾಲೂಕಿನ ಕಮತನೂರ, ಬೈರಾಪೂರ,ಆಲೂರ, ಮಾಂಗನೂರ, ಹಿಟ್ನಿ,ರಕ್ಷಿ, ಯಾದಗೂಡ,ಶೇಲಾಪೂರ, ಹಂಜಾನಟ್ಟಿ ,ಚಿಕ್ಕೋಡಿ ತಾಲೂಕಿನ ವಡ್ರಾಳ,ಜೈನಾಪೂರ, ಖಾನಾಪೂರ, ಬೆಳಗಾವಿ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಸುತ್ತಲಿನ ಜನರಿಗೆ ಆಸರೆ, ಕೃಷಿ ಹೈನುಗಾರಿಕೆಗೆ ಅನುಕೂಲವಾಗಿದೆ.
ದೊಡ್ಡ ಹೆಗ್ಗಳಿಕೆಗೆ ಪಾತ್ರವಾದ ಕಮತನೂರ:
ಹುಕ್ಕೇರಿ ತಾಲ್ಲೂಕಿನ ಕಮತನೂರ ಕೆರೆ ಜಿಲ್ಲೆಯ ಅತಿ ದೊಡ್ಡ ಕೆರೆ ಎನ್ನಿಸಿಕೊಂಡಿದೆ. ಸುಮಾರು ೭ ಕೋಟಿ ರೂ.ವೆಚ್ಚದಲ್ಲಿ ೨೦೧೧-೧೨ ರಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಈ ಕೆರೆ ೨೦೦ ಕೋಟಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ೯೩ ಎಂಸಿಎಪ್‌ಟಿ(೦.೧ ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯ ಮನೆಯಲ್ಲಿದೆ.ಬೇಸಿಗೆಯ ಬೇಗೆಗೆಯ್ಯು ಸದ್ಯ ೬೦ ಎಂಸಿಎಫ್‌ಟಿ ನೀರು ಸಂಗ್ರಹವಿದೆ. ಕೆರೆಯಿಂದ ಸುತ್ತಲಿನ ಕಮತನೂರ,ಗವನಾಳ,ಗೋಟೂರ,ನೀಡಸೋಸಿ ಗ್ರಾಮಗಳಲಿ ಅಂತರ್ಜಲಮಟ್ಟ ವೃದ್ದಿಯಿಂದ 2 ಸಾವಿರ ಕೋಟಿ ಪ್ರದೇಶಕ್ಕೆ ಜೀವ ಸೆಲೆಯಾಗಿದೆ.
ಕೋಟ್-
ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದ ಹಾಗೂ ಏತ ನೀರಾವರಿಯಿಂದ ತುಂಬಿದ ಕೆರೆಗಳಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದೆ ಜನ-ಜಾನುವಾರು,ಕೃಷಿ, ಪಕ್ಷಿಗಳಿಗೆ ಅನುಕೂಲಕರವಾಗಿದೆ.ಕೆರೆಗಳ ನೀರು ತುಂಬಿಸುವ ಯೋಜನೆಗಳ ಅನುಷ್ಠಾನ ಸಹಕಾರಿಯಾಗಿದೆ.
ಸಂಜೀವ ಮಾಳಗೆ
ಕಾರ್ಯನಿರ್ವಾಹಕ ಅಭಿಯಂತರ
ಸಣ್ಣ ನೀರಾವರಿ ಇಲಾಖೆ,ಬೆಳಗಾವಿ