- ಬೆಳಗಾವಿಯಲ್ಲಿ ಮರ್ಯಾದಗೇಡು ಹತ್ಯೆ ಪ್ರಕರಣ ಬೆಳಕಿಗೆ
- ಬೇರೆ ಜಾತಿಯ ಯುವಕನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಲೆ ಮಾಡಿದ ಪೋಷಕರು
- ಹುಕ್ಕೇರಿ ಗ್ರಾಮದಲ್ಲಿ ಸತ್ಯವ್ವ ಎಂಬ ಯುವತಿಯನ್ನು ಕೊಂದ ಆಕೆಯ ಪೋಷಕರು
ಚಿಕ್ಕೋಡಿ: ಕರ್ನಾಟದಲ್ಲಿ ಮರ್ಯಾದಗೇಡು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನನ್ನ ಗಂಡನ ಜೊತೆ ಬಾಳೋಕೆ ಆಗೋಲ್ಲ, ಪ್ರಿಯಕರನೇ ಬೇಕು ಎಂದು ಹೋದ ಯುವತಿಯನ್ನು ಮಾರ್ಯಾದೆಗೆ ಅಂಜಿ(Karnataka honor killing) ಆಕೆಯ ಪೋಷಕರೇ ವಿಷವಿಟ್ಟು ಕೊಂದು, ಒಂದೇ ಗಂಟೆಯಲ್ಲಿ ಸುಟ್ಟು ಹಾಕಿದ ಘಟನೆ ಬೆಳಗಾವಿಯ ಹುಕ್ಕೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಮೃತ ಮಹಿಳೆಯನ್ನು 24 ವರ್ಷದ ಸತ್ಯವ್ವ ಎಂದು ಗುರುತಿಸಲಾಗಿದೆ. ಹುಕ್ಕೇರಿ ತಾಲೂಕಿನ ನದಿಗುಡಿಕ್ಷೇತ್ರದ ಕೃಷ್ಣ ಪಾಟೀಲ ಮತ್ತು ಸತ್ಯವ್ವ ಅನೋನ್ಯವಾಗಿದ್ದರು. ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಮದುವೆ ಒಪ್ಪದ ಪೋಷಕರು ಬಲವಂತವಾಗಿ ಆಕೆಯನ್ನು ಸಂತೋಷ್ ಹೆಳವಿ ಎಂಬಾತನ ಜೊತೆಗೆ ಮದುವೆ ಮಾಡಿಸಿದರು.
ಕೃಷ್ಣನ ಜೊತೆ ಸಂಸಾರ
ಮದುವೆಯಾದ ಮೇಲೂ ಕೃಷ್ಣನನ್ನು ಮರೆಯಲಾಗದೆ, ಫೆಬ್ರವರಿ 17ರಂದು ಮನೆ ಬಿಟ್ಟು ಬಂದು ಪ್ರಿಯಕರನನ್ನು ಸೇರಿಕೊಂಡಳು. ಇಬ್ಬರು ಪ್ಲ್ಯಾನ್ ಮಾಡಿ ಊರೇ ಬಿಟ್ಟು ತೆರಳಿದರು. ಅಲ್ಲಿಂದ ಬಂದ ಅವರು ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದುಕೊಂಡು ವಾಸ ಮಾಡುತ್ತಿದ್ದರು.
ಮಾರ್ಯಾದಗೇಡು ಹತ್ಯೆ
ಆಕೆ ಓಡಿ ಹೋದ ವಿಚಾರ ತಿಳಿಯುತ್ತಲೇ ಹುಡುಕಾಟ ಶುರು ಮಾಡಿದ್ದ ಪೋಷಕರಿಗೆ ಆಕೆ ಸಿಕ್ಕಿದ್ದು ಕೃಷ್ಣನ ಜೊತೆ. ಅಲ್ಲಿಂದ ತವರಿಗೆ ಎಳೆದುಕೊಂಡು ಬಂದು ಆಕೆಗೆ ಹಿಗ್ಗಾಮುಗ್ಗ ಥಳಿಸಿ, ಹಿಂಸೆ ನೀಡಿದರು. ಆಕೆಯನ್ನು ಮಹಾರಾಷ್ಟ್ರ ಕೊಲ್ಹಾಪುರದ ಶಿರೋಲ್ ಗ್ರಾಮಕ್ಕೆ ಕರೆದುಕೊಂಡು ಹೋಗಿ ಸಾಕಷ್ಟು ಬುದ್ಧಿವಾದ ಹೇಳಲು ಪ್ರಯತ್ನಿಸಿದರು. ನಮ್ಮ ಜಾತಿ ಆತನ ಜಾತಿ ಬೇರೆ ಎಂದು ತಿದ್ದಲು ಯತ್ನಿಸಿದರು. ಏನೇ ಹೇಳಿದರು ಕೃಷ್ಣನೆ ಬೇಕು ಎಂದು ಪಟ್ಟು ಹಿಡಿದು ಕುಳಿತ ಸತ್ಯವ್ವ ಮಾತು ಕೇಳಲೇ ಇಲ್ಲ.
ಇದರಿಂದ ಸತ್ಯವ್ವನ ಪೋಷಕರಿಗೆ ಭಾರಿ ಭಯ ಶುರುವಾಗಿತ್ತು. ಊರಿನಲ್ಲಿ ತಮಗಾಗುವ ಅವಮಾನದ ಬಗ್ಗೆ ಹೆದರಿದರು. ಜನ ಏನು ಮಾತನಾಡಿಕೊಳ್ಳುತ್ತಾರೋ ಎಂಬ ಆತಂಕದಿಂದ ಮಾರ್ಚ್ 21ರಂದು ಬಲವಂತವಾಗಿ ಆಕೆಗೆ ವಿಷ ಕುಡಿಸಿ, ಸುಟ್ಟು ಕೊಂದು ಹಾಕಿದ್ದಾರೆ.
ಕೃಷ್ಣನಿಂದಲೇ ಕೇಸ್
ಸತ್ಯವ್ವ ಪ್ರಿಯಕರ ಕೃಷ್ಣಾ ಪಾಟೀಲ್ ಯಮನಕರಡಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆ ರಹಸ್ಯ ಬೇಧಿಸಿದ್ದಾರೆ. ಸದ್ಯ ಮೃತಳ ಚಿಕ್ಕಪ್ಪ ಪ್ರಕಾಶ್ ಹಳವರ(46), ಸಹೋದರ ಶಾನೂರ್ ಸದಾಶಿವ ಹೆಳವರ್ (35), ಭಾವ ಕಲ್ಲಪ್ಪ, ಸಹೋದರ ಧಾನೂರ ಎಂಬುವವರನ್ನು ಯಮನಕರಡಿ ಪೊಲೀಸರು ಬಂಧಿಸಿದ್ದಾರೆ, (ಏಜೆನ್ಸೀಸ್)