ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಉಡುಪ ಪ್ರತಿಷ್ಠಾನದದಶಮಾನೋತ್ಸವ ಅಂಗವಾಗಿ ರಾಜಧಾನಿಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ3 ದಿನಗಳಉಡುಪ ಸಂಗೀತೋತ್ಸವಕ್ಕೆ ಮಲ್ಲೇಶ್ವರದಚೌಡಯ್ಯ ಸ್ಮಾರಕ ಭವನದಲ್ಲಿಶುಕ್ರವಾರ ವಿಧ್ಯುಕ್ತ ಚಾಲನೆದೊರೆಯಿತು.
ಅಂತಾರಾಷ್ಟ್ರೀಯಖ್ಯಾತಿಯ ಹಿಂದೂಸ್ಥಾನಿ ಗಾಯಕಿಬೇಗಂ ಪರ್ವೀನ್ ಸುಲ್ತಾನಾ ಅವರರಂಜನೀಯ ಗಾನಸುಧೆ ಉಡುಪ ಸಂಗೀತೋತ್ಸವಕ್ಕೆಮುನ್ನುಡಿ ಬರೆಯಿತು.ನೂರಾರು ಪ್ರೇಕ್ಷಕರಕರ ತಾಡನದ ನಡುವೆ ವಿವಿಧ ರಾಗಗಳನ್ನುಆಲಾಪಿಸಿದ ಸುಲ್ತಾನಾ ಎಲ್ಲರ ಮನಸೆಳೆದರು. ಪಂಡಿತ್ಡಾ. ರವೀಂದ್ರಕಾಟೋಟಿಯವರ ಹಾರ್ಮೋನಿಯಂ ಮತ್ತುಓಜಸ್ ಆದ್ಯ ಅವರ ತಬಲಾ ಪಕ್ಕವಾದ್ಯಸಾಥ್ ಸುಲ್ತಾನಾ ಅವರ ಕಛೇರಿಯರಂಗು ಹೆಚ್ಚಿಸಿತು.
ಉಡುಪಪ್ರತಿಷ್ಠಾನದ ಟ್ರಸ್ಟಿ ವಿದ್ವಾನ್ಗಿರಿಧರ ಉಡುಪ,ಸಂಧ್ಯಾ ಉಡುಪಉಪಸ್ಥಿತರಿದ್ದರು.
ಇಂದು(ಶನಸಿವಾರ)ಸಂಜೆ 6ಕ್ಕೆತಾಳವಾದ್ಯ ಕಛೇರಿ ನಡೆಯಲಿದ್ದು,ಪದ್ಮಶ್ರೀಪುರಸ್ಕೃತ ವಿದ್ವಾನ್ ತಿರುವಾಯೂರುಭಕ್ತವತ್ಸಲಂ, ನವೀನ್ ಶರ್ಮಾಮತ್ತು ವಿಜಯ ಶ್ಯಾಮರಾವ್ ಚವ್ಹಾಣ್ಶ್ರೋತೃಗಳನ್ನು ರಂಜಿಸಲಿದ್ದಾರೆ.ನಂತರ ಇತ್ತೀಚೆಗೆಪದ್ಮಶ್ರೀ ಗೌರವಕ್ಕೆ ಭಾಜನರಾದವಿದುಷಿ ರಂಜನಿ ಮತ್ತು ಗಾಯತ್ರಿಅವರಿಂದ ಕರ್ನಾಟಕ ಶಾಸ್ತ್ರೀಯಸಂಗೀತ ಕಛೇರಿ ನಡೆಯಲಿದೆ.
ಭಾನುವಾರಸಂಜೆ 7ಕ್ಕೆಪಂಡಿತ್ ವಿಶ್ವಮೋಹನ ಭಟ್ ಅವರಮೋಹನ ವೀಣಾವಾದನ,ವಿವಿಧ ವಾದ್ಯಗಳಲಹರಿಗಳು ಮೇಳೈಸಲಿವೆ.ವಿದ್ವಾಂಸರಾದಶಶಾಂಕ ಸುಬ್ರಹ್ಮಣ್ಯ,ವಿದ್ವಾನ್ ಹರೀಶಶಿವರಾಮ ಕೃಷ್ಣನ್,ದರ್ಶನ್ ದೋಷಿಮತ್ತಿತರ ಸಂಗೀತಗಾರರ ಪ್ರದರ್ಶನನಡೆಯಲಿದೆ.