ಗುಲ್ಬರ್ಗ ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೀವವೈವಿದ್ಯತೆ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರೊ.ಜಿ.ಎಂ.ವಿದ್ಯಾಸಾಗರ ಚಾಲನೆ ನೀಡಿದರು. ಪ್ರೊ.ಶಶಿಕಾಂತ ಮಜಗೆ, ಡಾ.ಸಂಧ್ಯಾ ದಿವಾಕರ ಇದ್ದರು. 
ರಾಜ್ಯ

ಜೀವ ಸಂಕುಲ ರಕ್ಷಣೆಯ ರೂವಾರಿಗಳಾಗಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಪ್ರೊ.ಜಿ.ಎಂ.ವಿದ್ಯಾಸಾಗರ ಕರೆ
  • ಗುಲ್ಬರ್ಗ ವಿವಿಯಲ್ಲಿ ಜೀವವೈವಿದ್ಯತೆ ದಿನಾಚರಣೆ
ಕಲಬುರಗಿ: ವಿದ್ಯಾರ್ಥಿಗಳು ಪರಿಸರ ಮತ್ತು ಜೀವ ಸಂಕುಲ ಸಂರಕ್ಷಣೆಯ ರೂವಾರಿಗಳಾಗಬೇಕು, ಜೀವವೈವಿದ್ಯತೆ ದಿನ ಕೇವಲ ಆಚರಣೆಗೆ ಸೀಮಿತವಾಗದೆ ವರ್ಷವಿಡಿ ಪರಿಸರ ರಕ್ಷಣೆ ಮತ್ತು ಜೀವಿಗಳ ಸಂರಕ್ಷಣೆಯಲ್ಲಿ ಕ್ರಿಯಾಶೀಲತೆ ತೋರಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಣಿಶಾಸ ವಿಭಾಗದ ಸಂಯೋಜಕ ಪ್ರೊ.ಎಂ.ವಿದ್ಯಾಸಾಗರ ಎಂದು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಣಿಶಾಸ ವಿಭಾಗ ಮತ್ತು ಪ್ರಾಣಿಶಾಸ ಸಂದ ಸಹಯೋಗದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಜೀವವೈವಿದ್ಯತೆ ದಿನಾಚರಣೆ ಸಮಾರಂಭಕ್ಕೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜೀವವೈವಿದ್ಯತೆಯಲ್ಲಿ ಆಸಕ್ತಿದಾಯಕ ವಿಸ್ಮಯಗಳಿವೆ. ಅವುಗಳ ಕುರಿತು ವೈಜ್ಞಾನಿಕ ಚಿಂತನೆ ಮೂಲಕ ದೂರದೃಷ್ಠಿ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೀಟಗಳು ಮಾನವನ ಆಹಾರ ಪದ್ಧತಿಯ ಮುಖ್ಯ ಭಾಗವಾಗಬಹುದು. ಮಾನವ ಕಲ್ಯಾಣಕ್ಕಾಗಿ ಆರೋಗ್ಯದಾಯಕ ಪರಿಸರ ಮತ್ತು ಜೀವ ವೈವಿಧ್ಯತೆ ಪೋಷಿಸಬೇಕು ಎಂದರು.
ಪ್ರಾಣಿಶಾಸ ಸಂದ ಉಪಾಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ.ಶಶಿಕಾಂತ ಮಜಗಿ ಪ್ರಾಸ್ತಾವಿಕ ಮಾತನಾಡಿ, ಆಕ್ಟಿಂಗ್​ ಲೋಕಲೀ ಫಾರ್​ ಗ್ಲೋಬಲ್​ ಇಂಪ್ಯಾಕ್ಟ್​ ಜೀವವೈವಿದ್ಯತೆ ದಿನಾಚರಣೆ ೂಷವಾಕ್ಯವಾಗಿದೆ. ಜೀವ ವಿಜ್ಞಾನ ಜಗತ್ತು ವೈವಿಧ್ಯತೆಯಿಂದ ಕೂಡಿದೆ. ಜೀವಿಗಳ ವಂಶವಾಹಿ ಮತ್ತು ಪರಿಸರದಲ್ಲಿ ಪ್ರಾಣಿ, ಪ, ಸಸ್ಯ ಮತ್ತು ಸೂಕ್ಷ$್ಮಜಿವಿಗಳು ಸೊಗಸಾದ ಜಗತ್ತು ಸೃಷ್ಟಿಸಿವೆ. ಎಲ್ಲಾ ಜೀವರಾಶಿಗಳಲ್ಲಿ ವೈವಿಧ್ಯತೆ ಕಾಣದಿದ್ದರೆ ಭೂಮಿ ಸುಂದರ ಮತ್ತು ವಿಸ್ಮಯಗಳ ಆಗರವಾಗಿರುತ್ತಿರಲಿಲ್ಲ. ಜೈವಿಕ ವಿಜ್ಞಾನ ೇತ್ರದಲ್ಲಿನ ಸಂಶೋಧನೆಗಳಿಂದ ಸುಮಾರು 1.6 ರಿಂದ 1.8 ಮಿಲಿಯನ್​ ಜೀವಿಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಇನ್ನು 45 ರಿಂದ 50 ಮಿಲಿಯನ್​ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ$್ಮಜಿವಿಗಳು ಇವೆ ಎಂದು ಇತ್ತೀಚಿನ ಶೋಧನೆಗಳಿಂದ ಕಂಡು ಬಂದಿದೆ ಎಂದು ಅಂದಾಜಿಸಲಾಗಿದೆ. ಅವುಗಳ ವಿಶೇಷತೆ, ವೈವಿಧ್ಯತೆ ಗ್ರಹಿಸುವ ಮೂಲಕ ನಾವೀನ್ಯ ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಣಿಶಾಸ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಸಂಧ್ಯಾ ದಿವಾಕರ ವೈವಿಧ್ಯತೆ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಆಯೊಜಿಸಲಾಗಿತ್ತು. ಪ್ರಾಧ್ಯಾಪಕರಾದ ಪ್ರೊ.ವಿಜಯಕುಮಾರ ಮಲಶೆಟ್ಟಿ, ಡಾ.ಶರಣಬಸಪ್ಪ ಪಾಟಿಲ, ಡಾ.ಪರಶುರಾಮ ಕಾಂಬಳೆ ಮತ್ತು ಡಾ.ಖಸಿಮ ಫಾತಿಮಾ ಇತರರಿದ್ದರು. ಮಾಯಾವತಿ ನಿರೂಪಿಸಿದರು. ಭಾಗಪ್ಪ ಪ್ರಾರ್ಥಿಸಿದರು. ಶಿವಾನಿ ಸ್ವಾಗತಿಸಿದರು. ಭಾಗ್ಯಶ್ರೀ ವಂದಿಸಿದರು.