ಕಲಬುರಗಿ ಸಿಯುಕೆನಲ್ಲಿ ಮಂಗಳವಾರ ನಡೆದ ಮ್ಯಾನೇಜ್ಮೆಂಟ್​ ಫೆಸ್ಟ್​ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಎಂಬಿಎ ಉದ್ಯಮಶೀಲತಾ ಕೋರ್ಸ್​ನ ಕರಪತ್ರ ಬಿಡುಗಡೆ ಮಾಡಿದರು. ಪ್ರೊ.ಆರ್​.ಆರ್​.ಬಿರಾದಾರ್​, ಚೇತನ್​ ಶ್ರೀನಾಲಿ, ಡಾ.ಸಫಿಯಾ ಪರ್ವೀನ್​, ಡಾ.ವಿಜಯಕುಮರ್​, ಡಾ.ಪಾಂಡುರಂಗ ಪತ್ತಿ, ಡಾ.ಗಣಪತಿ ಸಿನ್ನೂರ್​ ಇತರರಿದ್ದರು. 
ರಾಜ್ಯ

ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ನೀಡಿ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಸಿಯುಕೆನಲ್ಲಿ ಅಕ್ಯುಥಾ 2ಕೆ26&ಮ್ಯಾನೇಜ್ಮೆಂಟ್​ ಫೆಸ್ಟ್​ಗೆ ಚಾಲನೆ
ಕಲಬುರಗಿ: ಮ್ಯಾನೇಜ್ಮೆಂಟ್​ ವಿದ್ಯಾರ್ಥಿಗಳು ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ಒದಗಿಸಬೇಕು ಎಂದು ಕಡಗಂಚಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗ ಮಂಗಳವಾರ ಆಯೋಜಿಸಿದ್ದ ಅಕ್ಯುಥಾ 2ಕೆ26& ಮ್ಯಾನೇಜ್ಮೆಂಟ್​ ಫೆಸ್ಟ್​ಗೆ ಚಾಲನೆ ನೀಡಿ, ಎಂಬಿಎ ಉದ್ಯಮಶೀಲತಾ ಕೋರ್ಸ್​ನ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ವಿಕಸಿತ ಭಾರತ ಸಾಧಿಸಲು ಉದ್ಯಮಶೀಲತೆ ಬಹಳ ಮುಖ್ಯ. ಎಂಬಿಎ ಉದ್ಯಮಶೀಲತಾ ಕೋರ್ಸ್​ ಪ್ರಾರಂಭಿಸುವುದು ಸರಿಯಾದ ಕ್ರಮವಾಗಿದೆ. ಅಕ್ಯೂಥ್​ನಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ನಿರ್ವಹಣೆ ಮತ್ತು ಉದ್ಯಮಶೀಲತಾ ಕೌಶಲ ಕಲಿಯಲು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕೋಕ್ರಿಯೇಟ್​ ವೆಂಚರ್ಸ್​ ಪಾಲುದಾರ ಚೇತನ್​ ಶ್ರೀನಾಲಿ ಮಾತನಾಡಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ಉದ್ಯಮಿಗಳಿಗೆ ಸಾಕಷ್ಟು ಅವಕಾಶ ಒದಗಿಸುತ್ತಿದೆ. ಇಂದು ಭಾರತದಲ್ಲಿ ಉದ್ಯಮಶೀಲ ಪರಿಸರ ವ್ಯವಸ್ಥೆಯು ಬಹಳಷ್ಟು ಸುಧಾರಿಸಿದೆ ಎಂದರು.
ನವೀನತೆ ರೂಢಿಸಿಕೊಳ್ಳಿ
ತಂತ್ರಜ್ಞಾನ ವಿಶೇಷವಾಗಿ ಎಐ ಆರ್ಥಿಕ ಭೂದೃಶ್ಯ ಬದಲಾಯಿಸುತ್ತಿದೆ. ಇದು ಸುಮಾರು 9 ಮಿಲಿಯನ್​ ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಆದರೆ ಇದು 9.8 ಮಿಲಿಯನ್​ ಹೊಸ ಉದ್ಯೋಗ ಸೃಷ್ಟಿಸಲಿದೆ. ಇದರರ್ಥ ಎಐ ಹೆಚ್ಚಿನ ಉದ್ಯೋಗ ಸೃಷ್ಟಿಸಲಿದೆ, ಆದರೆ ವಿದ್ಯಾರ್ಥಿಗಳು ಎಐ ಕೌಶಲ ಕಲಿಯಬೇಕು. ಕೃಷಿ ಎಂದರೆ ಕೇವಲ ಸಮಸ್ಯೆ ಎಂದು ಅನೇಕ ಜನರು ಭಾವಿಸುತ್ತಾರೆ. ಅದನ್ನು ಉದ್ಯಮದಂತೆ ನಿರ್ವಹಿಸಿದರೆ ಮತ್ತು ಸಂಪೂರ್ಣ ಪೂರೈಕೆ ಸರಪಳಿಯ ಮೇಲೆ ನಿಮಗೆ ನಿಯಂತ್ರಣವಿದ್ದರೆ ನೀವು ಅತ್ಯುತ್ತಮ ಕೃಷಿ ಆಧಾರಿತ ಕೈಗಾರಿಕೆ ನಿರ್ಮಿಸಬಹುದು. ಯಶಸ್ವಿ ಉದ್ಯಮಿಯಾಗಲು ತಾವು ನವೀನತೆ ರೂಡಿಸಿಕೊಳ್ಳಬೇಕು. ಸಾಮಾಜಿಕ&ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮಾತನಾಡಿ, ಭಾರತದ ವ್ಯವಹಾರ ಪರಿಸರದ ಭೂದೃಶ್ಯವು ಸಾಂಪ್ರದಾಯಿಕ ವ್ಯವಹಾರ ವಿಧಾನದಿಂದ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ವ್ಯವಹಾರ ಮತ್ತು ವ್ಯಾಪಾರಕ್ಕೆ ಬದಲಾಗುತ್ತಾ ಭಾರಿ ಬದಲಾವಣೆಗಳಿಗೆ ಒಳಗಾಗಿದೆ. ಜಾಗತೀಕರಣದ ನಂತರ ವ್ಯಾಪಾರ ಅವಕಾಶಗಳು ತ್ವರಿತಗತಿಯಲ್ಲಿ ವಿಸ್ತರಿಸಿವೆ. ಅಮೆರಿಕ ಮತ್ತು ಚೀನಾ ನಂತರ 2.07 ಲಕ್ಷ ಸ್ಟಾರ್ಟ್​ಪ್​ಗಳೊಂದಿಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮುತ್ತಿದೆ ಎಂದರು.
ವ್ಯವಹಾರ ಕೌಶಲ ಕಲಿಕೆ ಅಗತ್ಯ
ಭಾರತದಲ್ಲಿ ಜಿಡಿಪಿಯ ಶೇ.30 ಮತ್ತು ಒಟ್ಟು ರಫ್ತಿನ ಶೇ.45 ರಷ್ಟಿರುವ 6.5 ಕೋಟಿ ಎಂಎಸ್​ಎಂಇಗಳಿವೆ. ಈ ಉದ್ಯಮಗಳು 2047ರ ವೇಳೆಗೆ ವಿಕಸಿತ ಭಾರತದ ದೃಶ್ಯೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಂಬಿಎ ವಿದ್ಯಾರ್ಥಿಗಳು ಭಾರತದ ಜಿಡಿಪಿ ಹೆಚ್ಚಿಸಲು ಅನ್ವೇಷಿಸಲು ಮತ್ತು ಬಳಸಿಕೊಳ್ಳಲು ಸಾಕಷ್ಟು ವ್ಯಾಪಾರ ಅವಕಾಶ ಹೊಂದಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಅವಕಾಶ ಬಳಸಿಕೊಳ್ಳಲು ಮತ್ತು ಹೊಸ ವ್ಯವಹಾರ ಕೌಶಲ ಕಲಿಯಬೇಕು. ಮುಂದಿನ ದಿನಗಳಲ್ಲಿ ನವೋದ್ಯಮ ಕಾರ್ಯತಂತ್ರ ರೂಪಿಸಿ ಎಂದು ಹೇಳಿದರು.
ಡಾ.ಸಫಿಯಾ ಪರ್ವೀನ್​ ಅಕ್ಯುಥ ಫೆಸ್ಟ್​ ಬಗ್ಗೆ ವಿವರಿಸಿ, ಅಕ್ಯುಥ&2ಕೆ26ನ ಭಾಗವಾಗಿ ಶಾರ್ಕ್​ ಟ್ಯಾಂಕ್​, ಟ್ರೆರರ್​ ಹಂಟ್​, ಬೆಸ್ಟ್​ ಮ್ಯಾನೇಜರ್​, ಮಾರ್ಕೆಟಿಂಗ್​, ಮಾನವ ಸಂಪನ್ಮೂಲ, ಹಣಕಾಸು ಮತ್ತು ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಕಾಲೇಜುಗಳ 100ಕ್ಕೂ ಹೆಚ್ಚು ತಂಡಗಳು ನೋಂದಾಯಿಸಿಕೊಂಡಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿಜಯಕುಮಾರ, ಡೀನ್​ ಪಾಂಡುರಂಗ ಪತ್ತಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಶುಷ್ಮಾ ಎಚ್​ ಸ್ವಾಗತಿಸಿದರು. ಡಾ.ಗಣಪತಿ ಸಿನ್ನೂರ್​ ವಂದಿಸಿದರು. ಷ್ಠಿಪ್ರಿಯಾ ಮತ್ತು ಶೇಕ್​ ಅಜರ್​ ನಿರೂಪಿಸಿದರು.
ಅಧ್ಯಾಪಕರಾದ ಡಾ.ಶಿವಕುಮಾರ ಬೆಳ್ಳಿ, ಡಾ.ಶೈಲಜಾ ಕೊನೆಕ್​, ಡಾ.ನಿರಂಜನ ಪೂಜಾರ, ಡಾ.ಜೈಪಾಲ್​, ಡಾ.ವಾಣಿ, ಡಾ.ಶ್ರೀಲಕ್ಷಿ$್ಮ, ಡಾ.ಕವಿತಾ ಸಂಗೋಳಗಿ ಇದ್ದರು. ಶೆಟ್ಟಿ ಸಿನಿಮಾಸ್​ ಈ ಕಾರ್ಯಕ್ರಮ ಪ್ರಾಯೋಜಿಸಿದೆ.
"

ಭಾರತದಲ್ಲಿ ಒಟ್ಟು 350 ಬಿಲಿಯನ್​ ಡಾಲರ್​ ಮೌಲ್ಯದ 125 ಯುನಿಕಾರ್ನ್​ಗಳಿವೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಹರಿಸಬೇಕಾದ ಸಾಕಷ್ಟು ವ್ಯಾಪಾರ ಅವಕಾಶಗಳಿವೆ. ಅನೇಕ ಸವಾಲು ಪರಿಹರಿಸಬೇಕಾಗಿದೆ. ಸ್ಟಾರ್ಟ್​ಪ್​ ಮತ್ತು ಯುನಿಕಾರ್ನ್​ಗಳು ಹೂಡಿಕೆ, ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಆದಾಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಪ್ರೊ.ಆರ್​.ಆರ್​.ಬಿರಾದಾರ್​,

ಕುಲಸಚಿವ, ಸಿಯುಕೆ ಕಲಬುರಗಿ.