ಜಿಲ್ಲಾಧಿಕಾರಿ ಇಕ್ರಮ್​ ಶರೀಫ್ 
ರಾಜ್ಯ

ಭಾರತ್​ ಜೋಡೋ ಯುವ ಸಂದ ಸದಸ್ಯರಾಗಿ

ಕಲಬುರಗಿ: ಯುವ ಜನತೆ ಕ್ರೀಡೆ, ಸಂಸತಿ, ವೈಜ್ಞಾನಿಕ ಚಿಂತನೆ, ಫಿಟ್ನೆಸ್​, ಕೌಶಲ ಅಭಿವೃದ್ಧಿ ಜತೆಗೆ ಸಾಮಾಜಿಕ ಸಾಮರಸ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸರ್ಕಾರ ರಾಜ್ಯಾದ್ಯಂತ 10,000 "ಭಾರತ್​ ಜೋಡೋ ಯುವ ಸಂ'ಗಳನ್ನು ಸ್ಥಾಪಿಸಲಾಗುತ್ತಿದ್ದು, ಜಿಲ್ಲೆಯ 16 ರಿಂದ 35 ವಯಸ್ಸಿನ ಯುವಜನರು ಸದಸ್ಯರಾಗುವಂತೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ತಿಳಿಸಿದ್ದಾರೆ.
ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಪ್ರತಿ ಭಾರತ ಯುವ ಜೋಡೋ ಸಂಕ್ಕೆ ವಾರ್ಷಿಕ ಹಂತ ಹಂತವಾಗಿ 10 ಲಕ್ಷ ರೂ. ನೆರವು ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸಂಘ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4,000 ಜನಸಂಖ್ಯೆ, ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6,000 ಜನಸಂಖ್ಯೆ, ನಗರಸಭೆ ವ್ಯಾಪ್ತಿಯಲ್ಲಿ 8,000 ಜನಸಂಖ್ಯೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10,000 ಜನಸಂಖ್ಯೆಗೆ ಒಂದು ಯುವ ಸಂಘ ಸ್ಥಾಪಿಸಲಾಗುತ್ತದೆ.
ಆಧಾರ್​ ಆಧಾರಿತ ನೊಂದಣಿ ಪ್ರಕ್ರಿಯೆ ಇದಾಗಿದ್ದು, ಯುವ ಸದಸ್ಯರು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್​, ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್​ ನಾಗರಿಕ ಸೇವಾ ಕೇಂದ್ರಗಳ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಅಥವಾ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.