ಕಾನೂನಿನ ಜ್ಞಾನ ಹೊಂದಿ ಸಜ್ಜನರಾಗಿ law 
ರಾಜ್ಯ

ಕಾನೂನಿನ ಜ್ಞಾನ ಹೊಂದಿ ಸಜ್ಜನರಾಗಿ law

ಪ್ರಮುಖ ಮುಖ್ಯಾಂಶಗಳು

  • ಜೆಎಂಎಫ್​ಸಿ ಪ್ರಧಾನ ಸಿವಿಲ್​ ನ್ಯಾಯಾಧೀಶ ಜಿ.ಹರೀಶ್​ ಹೇಳಿಕೆ
ಮುಳಬಾಗಿಲು: ಯುವಪೀಳಿಗೆ ಕಾನೂನಿನ ಅರಿವು ಹೊಂದುವ ಮೂಲಕ ಸಮಾಜಕ್ಕೆ ಸೇವೆ ನೀಡಬೇಕು, ಸಮಾಜದಲ್ಲಿರುವ ಅಸಮಾನತೆ, ಶೋಷಣೆ ತಡೆಗಟ್ಟಲು ಕಾನೂನಿನ ಜ್ಞಾನದಿಂದ ಸಾಧ್ಯ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಜೆಎಂಎಫ್​ಸಿ ಪ್ರಧಾನ ಸಿವಿಲ್​ ನ್ಯಾಯಾಧೀಶ ಜಿ.ಹರೀಶ್​ ಹೇಳಿದರು.law
ತಾಲೂಕಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಸಾಮಾಜಿಕ ನ್ಯಾಯ ಪರಿಕಲ್ಪನೆ ತುಂಬಾ ಮಹತ್ವದಿಂದ ಕೂಡಿದೆ. ಸಮಾಜದಲ್ಲಿರುವ ತಾರತಮ್ಯ ತೊಡೆದು ಹಾಕಿ ಎಲ್ಲರೂ ಸಮಾನರು ಎಂಬ ಮನೋಭಾವ ಎಲ್ಲರಲ್ಲಿ ಬಂದಾಗ ಸಾಮಾಜಿಕ ನ್ಯಾಯ ಪ್ರಜ್ವಲಿಸುತ್ತದೆ. ಆದರೆ ಮನುಷ್ಯನ ಸಂಕುಚಿತದ ಬುದ್ದಿಗಳಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಸಲುವಾಗಿ ಕಾನೂನು ಸೇವೆಗಳು ಸಮಿತಿ ಕಾರ್ಯ ನಿರ್ವಹಿಸುತ್ತದೆ ಎಂದರು.
ತಾಲೂಕು ವಕೀಲರ ಸಂದ ಅಧ್ಯ ಎನ್​. ಸತೀಶ್​ ಕುಮಾರ್​ ಮಾತನಾಡಿ, ಅಪ್ರಾಪ್ತರು ದುಚ್ಚಟಗಳಿಗೆ ಒಳಗಾಗಿ ಅಪರಾಧ ಪ್ರಕ್ರಣದಲ್ಲಿ ಭಾಗಿಯಾಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಮತ್ತು ಯುವ ಜನಾಂಗ ತಮ್ಮ ಪಾಲಕರ ಕಷ್ಟ ಅರಿತು ಅವರ ಕನಸುಗಳನ್ನು ನನಸು ಮಾಡಲು ಮುಂದಾಗಬೇಕು ಎಂದರು,
ತಾಲೂಕು ವಕೀಲರ ಸಂ ಉಪಾಧ್ಯ ಸಿ.ವಿ. ಶ್ರೀನಿವಾಸಪ್ಪ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್​ ಗೀಳು ಬಿಟ್ಟು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಈಗ ಪ್ರತಿದಿನ ನ್ಯಾಯಾಲಯಗಳ ಮೂಲಕ ಬಾಲ ಕಾರ್ಮಿಕ ದುಡಿಮೆ, ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು ವರದಿಯಾಗುತ್ತಿವೆ. ಜತೆಗೆ ನ್ಯಾಯಾಲಯಗಳ ಮೂಲಕ ಶಿೆಗೆ ಒಳಗಾದವರ ಮಾಹಿತಿ ಇರುತ್ತದೆ ಆದ್ದರಿಂದ ಇಂಥ ಮಾಹಿತಿ ತಿಳಿದರೆ, ಅಪರಾಧ ಮಾಡಿದರೆ ಕಾನೂನು ಸುಮ್ಮನೆ ಬಿಡುವುದಿಲ್ಲ ಎಂದರು.
ವಕೀಲರ ಸಂದ ಮಾಜಿ ಅಧ್ಯ ಎಂ.ಎಸ್​. ಶ್ರೀನಿವಾಸರೆಡ್ಡಿ ಮಾತನಾಡಿ, ಶತಶತಮಾನಗಳಿಂದ ಅನೇಕರು ತಾರತಮ್ಯ ತೊಡೆದು ಹಾಕಲು ಶ್ರಮಿಸಿದರು. ಆದರೂ ಇಂದಿಗೂ ತೊಲಗಿಲ್ಲ. ಬಸವಣ್ಣ, ಗಾಂಧೀಜಿ, ಡಾ.ಬಿ.ಆರ್​.ಅಂಬೇಡ್ಕರ್​ ಜನರಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ. ಅವರ ಆದರ್ಶ ಪಾಲಿಸುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂದರು.
ಕಾರ್ಮಿಕ ನಿರೀಕಿ ಆಶಾರಾಣಿ, ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅಮೃತಾ, ಪ್ರಾಧ್ಯಾಪಕಿ ಡಾ.ಎಂ.ಉಮಾ, ಡಾ.ಕೃಷ್ಣಪ್ಪ, ಡಾ.ಸೀನಪ್ಪ, ಡಾ.ಎಂ.ವಿ.ಮೂರ್ತಿ, ಮೋಹನರೆಡ್ಡಿ, ಡಾ.ಎ.ಎಸ್​.ಸುಂದರ ಇದ್ದರು.