ಮುಳಬಾಗಿಲು ತಾಲೂಕು Ration card ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂದ ನ್ಯಾಯಬೆಲೆ ಅಂಗಡಿ ಮುಂಭಾಗ ಗುರುವಾರ ರಾತ್ರಿ 8ಗಂಟೆಯಲ್ಲೂ ಪಡಿತರ ಪಡೆಯಲು ಸಾಲುಗಟ್ಟಿ ಕುಳಿತಿರುವ ಗ್ರಾಹಕರು.
- ನ್ಯಾಯಬೆಲೆ ಅಂಗಡಿ ಮುಂದೆ ರಾತ್ರಿಯಿಡೀ ಕಾದು ಕುಳಿತ ಕಾರ್ಡ್ದಾರರು
ಮುಳಬಾಗಿಲು: ತಿಂಗಳಿಗೊಮ್ಮೆ ನೀಡುವ ಪಡಿತರ ಆಹಾರ ಧಾನ್ಯ ಪಡೆಯಲು ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಳಬಾಗಿಲಿನಲ್ಲಿ ರಾತ್ರಿಯಿಡೀ ಕಾದರೂ ಪಡಿತರ ಸಿಗದಂತಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ನೀಡುವ ಆಹಾರ ಧಾನ್ಯಗಳನ್ನು ಪಡೆಯಲು ಪ್ರತಿ ತಿಂಗಳು ನಿಗದಿಪಡಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಬಯೋಮೆಟ್ರಿಕ್ Ration card ನೀಡಿ ಪಡಿತರ ಪಡಿಬೇಕಾಗಿದ್ದು, ಸರ್ವರ್ ಸಮಸ್ಯೆಯಿಂದ ಬಯೋಮೆಟ್ರಿಕ್ ಪಡೆಯಲು ಸಾಧ್ಯವಾಗದೆ ಪಡಿತರ ಅಂಗಡಿ ಮಾಲೀಕರು ಮತ್ತು ಪಡಿತರ ಚೀಟಿದಾರರು ರಾತ್ರಿವರೆಗೂ ಕಾದು ಕುಳಿತಿರುವ ದೃಶ್ಯಗಳು ಕಂಡು ಬರುತ್ತಿವೆ.
ನಗರದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂ (ಟಿಎಪಿಸಿಎಂಎಸ್)ನ ನ್ಯಾಯಬೆಲೆ ಅಂಗಡಿಯಲ್ಲಿ 1 ಸಾವಿರಕ್ಕೂ ಅಧಿಕ ಪಡಿತರ ಚೀಟಿದಾರರು ಇದ್ದು, ಗುರುವಾರ ರಾತ್ರಿ ಪಡಿತರ ಪಡೆಯಲು ಸಾರ್ವಜನಿಕರು ಕಾದು ಕುಳಿತಿರುವ ದೃಶ್ಯಗಳು ಕಂಡುಬಂದವು.
ಹಗಲೊತ್ತು ಕೂಲಿ, ರಾತ್ರಿಯಾದರೆ ಕ್ಯೂ
ಹಗಲಲ್ಲಿ ಕೆಲಸ ಕಾರ್ಯ, ಕೂಲಿ ನಾಲಿ ಮಾಡಿಕೊಂಡು ಬರುವ ಸಾಮಾನ್ಯ ಜನರು ಪಡಿತರ ಪಡೆಯಲು ಹೆಣಗಾಡುತ್ತಿದ್ದು, ಹಗಲು ಕೆಲಸ ಮಾಡಿದರೆ, ರಾತ್ರಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಸೂತ್ರವಾಗಿ ಪಡಿತರ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಿದ್ದು, ವಿಶೇಷವಾಗಿ ಸರ್ವರ್ ಸಮಸ್ಯೆ ಎದುರಾಗದಂತೆ ಸರ್ಕಾರ ಮತ್ತು ಅಧಿಕಾರಿಗಳು ಕಾಳಜಿ ವಹಿಸಬೇಕಿದೆ.
ಟಿಎಪಿಸಿಎಂಎಸ್ನಲ್ಲಿ 1 ಸಾವಿರಕ್ಕೂ ಅಧಿಕ ಪಡಿತರ ಚೀಟಿದಾರರಿದ್ದು, ನವೆಂಬರ್ನಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ, ಆದುದರಿಂದ ರಾತ್ರಿಯಲ್ಲಿ ನಿಧಾನವಾಗಿ ಸರ್ವರ್ ಸಿಗುತ್ತಿದ್ದು, ಬಂದಿರುವ ಗ್ರಾಹಕರ ಬಯೋಮೆಟ್ರಿಕ್ ಪಡೆದು ಪಡಿತರ ವಿತರಣೆ ಮಾಡಲಾಗುತ್ತಿದೆ.
- ವಮ್ಮಸಂದ್ರ ನಾರಾಯಣಸ್ವಾಮಿಸಿಬ್ಬಂದಿ ಟಿಎಪಿಸಿಎಂಎಸ್, ಮುಳಬಾಗಿಲು