Be vigilant against human trafficking 
ರಾಜ್ಯ

ಮಾನವ ಕಳ್ಳ ಸಾಗಣೆ ವಿರುದ್ಧ ಜಾಗೃತರಾಗಿ

ಹೊಸಕೋಟೆ: ಮಾನವ ಕಳ್ಳ ಸಾಗಣೆ ದೇಶದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಇದನ್ನು ಕೊನೆಗಾಣಿಸಲು ಮಕ್ಕಳು ತಂದೆತಾಯಿಯ ಮಾತು ಕೇಳಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಮೊಹಮ್ಮದ್​ ಆರೀುಲ್ಲಾ ಕಿವಿಮಾತು ಹೇಳಿದರು.

ಕರೆ ಮಾಡಿ, ಮಾಹಿತಿ ನೀಡಿ

ಮಾನವ ಕಳ್ಳಸಾಗಣೆ ಪ್ರಕರಣಗಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ 181 ಹಾಗೂ ಪೊಲೀಸ್​ ಸಹಾಯವಾಣಿ 112 ದೂರವಾಣಿ ಸಂಖ್ಯೆಗೆ ಕರೆಮಾಡಬೇಕು. ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಆಪರಾಧಿಗಳಿಗೆ 10 ವರ್ಷ ಜೀವಾವಧಿ ಜೈಲು ಶಿಕ್ಷೆಯಾಗಬಹುದು ಎಂದು ಹೇಳಿದರು.


ನಗರದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನವ ಕಳ್ಳ ಸಾಗಣೆಗೆ ಜಾತಿ, ಮತ, ವಯಸ್ಸು, ಲಿಂಗಬೇಧಗಳಿಲ್ಲ. ಆಮೀಷಗಳನ್ನೊಡ್ಡಿ ದೈಹಿಕ, ಲೈಂಗಿಕ ದೌರ್ಜನ್ಯ, ಭಿಕ್ಷಾಟನೆ, ಜೀತದಾಳು, ಅಂಗಾಂಗ ಕಳ್ಳತನ ಹೀಗೆ ಹಲವು ರೀತಿಯಲ್ಲಿ ಶೊಷಣೆ ಮಾಡಲಾಗುತ್ತದೆ. ಇದರಿಂದ ಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರಧಾನ ಸಿವಿಲ್​ ನ್ಯಾಯಾಧೀಶ ಬಿ.ಸತೀಶ್​ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸರ್ಕಾರಿ ಅಧಿಕಾರಿಗಳು, ಪೊಲೀಸ್​ ಹಾಗೂ ನ್ಯಾಯಾಂಗ ಸದಾ ಕಾಯೋರ್ನ್ಮುಖವಾಗಿರಲಿದೆ. ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಆಮೀಷಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.

ಭಾರತ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದ್ದು, ಯುವ ಶಕ್ತಿ ಮನಸ್ಸು ಮಾಡಿದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಆದರೆ ಯುವಕರು ಚಂಚಲ ಮನೋಭಾವದವರಾಗಿದ್ದು, ಹೆಚ್ಚು ಅನಾಹುತಕ್ಕೆ ಕಾರಣರಾಗುತ್ತಿದ್ದಾರೆ. ಪುರುಷ ಪ್ರಧಾನ ದೇಶ ಎಂಬ ಮಾತು ಈಗ ಸುಳ್ಳಾಗಿದ್ದು, ಮಹಿಳೆಯರು ಎಲ್ಲ ರಂಗದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಮಹಿಳಾ ಸಬಲೀಕರಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಯುವಶಕ್ತಿ ಪಾತ್ರ ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ದೇಶವನ್ನು ಮುನ್ನಡೆಸುವತ್ತ ಶ್ರಮಿಸಬೇಕು.

— ರಾಧಾಕೃಷ್ಣ ಅಧ್ಯಕ್ಷ, ವಕೀಲರ ಸಂಘ, ಹೊಸಕೋಟೆ
ಸಂಪನ್ಮೂಲ ವ್ಯಕ್ತಿ ಅನಂತ ಪ್ರಭಾಕರ್​ ಮಾತನಾಡಿ, ಹೆಣ್ಣು ಮಕ್ಕಳು ಶಾಲೆಗೆ ಹೋಗುವಾಗ ಅವರನ್ನು ಆಕರ್ಷಿಸಲು ನಾನಾ ತರಹದ ಆಮೀಷವೊಡ್ಡುತ್ತಾರೆ. ಚಾಕೊಲೇಟ್​, ಗಿಪ್ಟ್​, ಸಿನಿಮಾ, ಹೋಟೆಲ್​ ಹೀಗೆ ಹಲವು ಪ್ರಯತ್ನ ಮಾಡಿ ಸಿನಿಮಾದಲ್ಲಿ ಅವಕಾಶ ಒದಗಿಸುತ್ತೇವೆ ಅಥವಾ ಮದುವೆಯಾಗುತ್ತೇನೆ ಎಂದು ನಂಬಿಸಿ ಮನೆಯಿಂದ ಓಡಿಬರುವಂತೆ ಪ್ರೇರೇಪಿಸುತ್ತಾರೆ. ಒಂದೆರಡು ದಿನ ಕಳೆದು ಅವರನ್ನು ಬೇರೆಯವರಿಗೆ ಮಾರಾಟ ಮಾಡಿ ಹಣಗಳಿಸುತ್ತಾರೆ. ಈ ಬಗ್ಗೆ ಎಚ್ಚರವಾಗಿರಬೇಕು ಎಂದರು.
ಸಂಪನ್ಮೂಲ ವ್ಯಕಿ ಅನಂತ ಪ್ರಭಾಕರ್​, ಮುಖ್ಯಶಿಕ್ಷಕಿ ಸುಧಾ, ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್​, ಶಿಕ್ಷಕಿ ಜಯಲಕ್ಷಿ$್ಮ, ಶಾಲಾ ಅಭಿವೃದ್ಧಿ ಸಮಿತಿ ಮೌಲಾ ಇತರರು ಇದ್ದರು.