ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ವಿದ್ಯಾರ್ಥಿಗಳುಇಂದು ಕಲಿಯುತ್ತಿರುವ ಶಿಕ್ಷಣಮುಂದಿನ 5 ವರ್ಷದನಂತರ ಉಪಯೋಗಕ್ಕೆ ಬರುವುದಿಲ್ಲ.ಆದ್ದರಿಂದಶಿಕ್ಷಣಕ್ಕಿಂತ ಹೆಚ್ಚಾಗಿಕೌಶಲ್ಯವನ್ನು ರೂಢಿಸಿಕೊಂಡುಭವಿಷ್ಯದ ಸವಾಲುಗಳನ್ನು ಎದುರಿಸಲುಸನ್ನದ್ಧರಾಗುವಂತೆ ಹಿರಿಯರಂಗಕರ್ಮಿ ಪ್ರಕಾಶ್ ಬೆಳವಾಡಿಹೇಳಿದ್ದಾರೆ.
ಮಲ್ಲೇಶ್ವರದಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿನಮ್ಮ ಮಲ್ಲೇಶ್ವರ ಮತ್ತುಡಾ.ಸಿ.ಎನ್.ಅಶ್ವತ್ಥನಾರಾಯಣಫೌಂಡೇಶನ್ ಜಂಟಿಯಾಗಿ ಹಮ್ಮಿಕೊಂಡಿದ್ದಸ್ವಾಮಿ ವಿವೇಕಾನಂದ ಜಯಂತಿಹಿನ್ನೆಲೆ ರಾಷ್ಟ್ರೀಯ ಯುವದಿನಾಚರಣೆಯಲ್ಲಿ ಮಾತನಾಡಿದರು.
ವಾತಾವರಣದಕಲುಷಿತತೆ ಮತ್ತು ಡಿಜಿಟಲ್ಬೆಳವಣಿಗೆಗಳ ವೇಗವನ್ನು ಗಮನಿಸಿದರೆಮುಂದಿನ ಭವಿಷ್ಯ ಬಹಳ ಕರಾಳವಾಗಿದೆ.ದಿಲ್ಲಿಯಂತಹಮಹಾನಗರದಲ್ಲಿ ಕಳೆದ 25ವರ್ಷದಿಂದಬಾಧಿಸುತ್ತಿರುವ ವಾಯು ಮಾಲಿನ್ಯವನ್ನುಇನ್ನೂ ಹತೋಟಿಗೆ ತರುವುದಕ್ಕೆಸಾಧ್ಯವಾಗಿಲ್ಲ. ಪಂಚಭೂತಗಳಲ್ಲಾಗುವವೈಪರಿತ್ಯಗಳು ಬಡವ,ಶ್ರೀಮಂತ ಎಲ್ಲರಿಗೂಹಾನಿ ಮಾಡುತ್ತವೆ.ಸ್ವಾಮಿ ವಿವೇಕಾನಂದರುಕೇವಲ ತಮ್ಮ 39ವರ್ಷದ ಜೀವಮಾನದಲ್ಲಿಜಗತ್ತೇ ನಿಬ್ಬೆರಗಾಗುವಂತಹಚಿಂತನೆಗಳನ್ನು ನೀಡಿದರು.ಅವರ ಚಿಂತನೆಯಿಂದಪ್ರೇರಿತರಾದ ಜೆಮ್‌ಶೆಡ್ ಟಾಟಾರವರುಬೆಂಗಳೂರಿನಲ್ಲಿ ವಿಜ್ಞಾನಸಂಸ್ಥೆಯನ್ನು ಸ್ಥಾಪಿಸಿದರು.ಬೇರೆಯವರಿಗಾಗಿಕೆಲಸ ಮಾಡುವುದೇ ನಿಜವಾದ ಸಾಧನೆಎಂದು ನಂಬಿದ್ದ ವಿವೇಕಾನಂದರುಎಲ್ಲರಿಗೂ ಆದರ್ಶವಾಗಬೇಕು ಎಂದುಬೆಳವಾಡಿ ವಿದ್ಯಾರ್ಥಿಗಳಿಗೆಕಿವಿಮಾತು ಹೇಳಿದರು.
ಸಮಾರಂಭದಲ್ಲಿಗಾಯಕ ನವೀನ್ ಸಜ್ಜು,ಓಲಂಪಿಕ ಕ್ರೀಡಾಪಟುಉನ್ನತಿ ಅಯ್ಯಪ್ಪ,ಯುವ ಉದ್ಯಮಿಕೌಶಿಕ್ ಮುದ್ದಾ ಅವರಿಗೆ ವಿವೇಕಾನಂದಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.ಮಾಜಿ ಡಿಸಿಎಂಡಾ.ಸಿ.ಎನ್.ಅಶ್ವತ್ಥನಾರಾಯಣ,ಉದ್ಯಮಿ ಡಾ.ಪ್ರಶಾಂತಪ್ರಕಾಶ್, ಪ್ರಸಾರಭಾರತಿ ಮಾಜಿ ಸಿಇಓ ಶಶಿಶೇಖರ್ವೆಂಪಾಟಿ ಮತ್ತಿತರರು ಉಪಸ್ಥಿತರಿದ್ದರು.
ಜಗತ್ತಿನಾದ್ಯಂತ ಈಗ ಎಐ ಆರ್ಭಟ ಆರಂಭವಾಗಿದೆ. ಎಐ ಬಂದಿರುವುದು ಮನುಷ್ಯನನ್ನು ಸೋಮಾರಿಯಾಗಿಸುವುದಕ್ಕಲ್ಲ. ಬದಲಾಗಿ ಮತ್ತಷ್ಟು ಕ್ರಿಯಾಶೀಲಗೊಳಿಸುವುದಕ್ಕೆ. ಕಾನೂನು, ಪಾಲಿಸಿಗಳನ್ನು ಮೀರಿ ಆವಿಷ್ಕಾರಗಳು ಆಗುತ್ತಿರುತ್ತವೆ. ಅವುಗಳನ್ನು ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡುವುದು ಯುವ ಜನಾಂಗದ ಕ್ರಿಯಾಶೀಲತೆಗೆ ಬಿಟ್ಟಿದ್ದು.