ಮಧುಗಿರಿ meeting ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​, ತಾಪಂ ಇಒ ಬಿ.ಕೆ.ಉತ್ತಮ್​, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್​ ನಂದಿನಿ ಇದ್ದರು. 
ರಾಜ್ಯ

ಬರಗಾಲ ಎದುರಿಸಲು ಸನ್ನದ್ಧರಾಗಿ meeting

ಪ್ರಮುಖ ಮುಖ್ಯಾಂಶಗಳು

  • ಆಧಿಕಾರಿಗಳಿಗೆ ಶಾಸಕ ಕೆ.ಎನ್​ ರಾಜಣ್ಣ ಸೂಚನೆ
  • ತಾಲೂಕುಮಟ್ಟದ ಟಾಸ್ಕ್​ ಫೋರ್ಸ್​ ಸಭೆ
ಮಧುಗಿರಿ: ಬರಗಾಲದ ಪರಿಸ್ಥಿತಿ ಎದುರಾಗುವ ಮುನ್ನವೇ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ, ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಕೆ.ಎನ್​ ರಾಜಣ್ಣ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ತೊಂದರೆ ಕಂಡು ಬಂದಲ್ಲಿ ಖಾಸಗಿ ಬೋರ್​ವೆಲ್​ಗಳಿಂದ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮ ಕೈಳ್ಳಬೇಕು. ಬರಗಾಲದ ಪರಿಸ್ಥಿತಿ ನಿರ್ವಹಣೆಗೆ ಮಧುಗಿರಿ ತಾಲೂಕಿಗೆ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಗೋಶಾಲೆ ಪ್ರಾರಂಭ ಮಾಡುವ ಸಂದರ್ಭದಲ್ಲಿ ಮತ್ತು ಗೋಪಾಲಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮೇವಿನ ಬೀಜ ವಿತರಿಸುವಂತೆ ಕೃಷಿ ಇಲಾಖೆ, ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಪಂಗಳಲ್ಲಿ ವಾಟರ್​ ಮನ್​ಗಳಿಂದ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸರಿಯಾಗಿ ಕೆಲಸ ಮಾಡದ ವಾಟರ್​ ಮನ್​ಗಳನ್ನು ತೆಗೆದು ಹಾಕುವಂತೆ ತಾಪಂ ಇಒಗೆ ಸೂಚನೆ ನೀಡಿದ ಶಾಸಕರು, ಗ್ರಾಮಾಂತರ ಪ್ರದೇಶಗಳಲ್ಲಿ ಜೆಜೆಎಂನಿಂದ ರಸ್ತೆಗಳು ಹಾಳಾಗಿದ್ದು, ಶೀಘ್ರ ಸರಿಪಡಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಎನ್​ಆರ್​ಇಜಿ ಕಾಮಗಾರಿ ಶೀಘ್ರ ಪ್ರಾರಂಭ ಮಾಡುವಂತೆ ಹಾಗೂ ಇದುವರೆಗೂ ಅಂದಾಜು ಪಟ್ಟಿ ತಯಾರಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬೇರೆ ಜಿಲ್ಲೆಗಳಲ್ಲಿ ಎನ್​ಆರ್​ಇಜಿ ಪ್ರಾರಂಭವಾಗಿದ್ದು, ನಮ್ಮಲ್ಲಿ ಏಕೆ ಪ್ರಾರಂಭವಾಗಿಲ್ಲ ಎಂದು ಶಾಸಕ ಕೆ.ಎನ್​ ರಾಜಣ್ಣ ಪ್ರಶ್ನಿಸಿದರು.
ಗ್ರಾಪಂಗಳು ಕಡ್ಡಾಯವಾಗಿ ಕಂದಾಯ ನಿಗದಿಪಡಿಸಿ ವಸೂಲಿ ಮಾಡಬೇಕು. ಅಧಿಕಾರಿಗಳು ಗ್ರಾಪಂ ಮಟ್ಟದಲ್ಲಿ ವಿದ್ಯುತ್​ ಇಲ್ಲದ ಮಕ್ಕಳ ಮನೆ ಗುರುತಿಸಿ ವರದಿ ನೀಡಿದರೆ, ಅವರಿಗೆ ವಿದ್ಯುತ್​ ಸಂಪರ್ಕ ಕಲ್ಪಿಸಲಾಗುವುದು. ಗ್ರಾಪಂಗಳ ಬೋರ್​ವೆಲ್​ಗಳ ಸುತ್ತಮುತ್ತ ಗಿಡ-&ಗಂಟಿಗಳು ಬೆಳೆಯದಂತೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಬೋರ್​ವೆಲ್​ಗಳಿಗೆ ತುಕ್ಕು ಹಿಡಿಯದಂತೆ ಬಣ್ಣ ಬಳಿಯುವಂತೆ ಸೂಚಿಸಿದರು.
ಮಧುಗಿರಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಮೀಸಲಾಗಿದ್ದ ಹಣವನ್ನು ಅಮೃತ್​&2 ಯೋಜನೆಗೆ ನೀಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಯಾರ ಗಮನಕ್ಕೂ ತರದೇ ಯಾವ ಕಾರಣಕ್ಕೆ ಹಣ ನೀಡಿದ್ದೀರಾ..? ಎಂದು ಮುಖ್ಯಾಧಿಕಾರಿ ಸುರೇಶ್​ ಅವರನ್ನು ಶಾಸಕ ಕೆ.ಎನ್​ ರಾಜಣ್ಣ ತರಾಟೆಗೆ ತೆಗೆದುಕೊಂಡರು.
ಆಡಳಿತಾಧಿಕಾರಿಗಳು ಕಡ್ಡಾಯವಾಗಿ ಗ್ರಾಪಂಗಳಿಗೆ ಭೇಟಿ ನೀಡಿ ಬರಗಾಲದ meeting ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಬೇಕು. ಅದೇ ರೀತಿ ಕಳೆದ ಬಾರಿಯ ಆಡಿಟ್​ ವರದಿ ಮಾಡಬೇಕು.
ತಾಪಂನಲ್ಲಿ 4 ಕೋಟಿ ರೂ. ದುರುಪಯೋಗವಾಗಿರುವ ಕುರಿತು ಮಾತನಾಡಿದ ಕೆ.ಎನ್​ ರಾಜಣ್ಣ, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆದಿದ್ದು, ಹಗರಣದಲ್ಲಿ ಸಿಲುಕಿರುವ ಸಂಬಂಧಪಟ್ಟ ಅಧಿಕಾರಿಗಳು ಎಲ್ಲೆಲ್ಲಿ ಕಾರ್ಯನಿರ್ವಹಿಸಿದ್ದಾರೋ, ಆ ತಾಲೂಕುಗಳಲ್ಲೂ ತನಿಖೆ ನಡೆಸಿ, ಅದೇ ರೀತಿ ಎಸ್​ಐಆರ್​ನಲ್ಲಿ ದಾಖಲಾಗಿರುವ ಉಳಿದವರನ್ನೂ ಬಂಧಿಸುವಂತೆ ಸೂಚಿಸಿದರು.
ಡಿವೈಎಸ್ಪಿ ಮಂಜುನಾಥ್​, ತಾಪಂ ಸಹಾಯಕ ನಿರ್ದೇಶಕ ಧನಂಜಯ್​, ಡಿಡಿಪಿಐ ಮಾಧವರೆಡ್ಡಿ ಇತರರಿದ್ದರು.