ಸಿಎಂ ಡಿ.ಕೆ.ಶಿವಕುಮಾರ್ 
ರಾಜ್ಯ

2004ರಲ್ಲಿ ನನಗೂ ಮಂತ್ರಿಗಿರಿ ಸಿಕ್ಕಿರಲಿಲ್ಲ, ತಾಳ್ಮೆಯಿಂದ ಇರಿ ಅವಕಾಶ ಸಿಗಲಿದೆ: ಮಂತ್ರಿಗಿರಿ ವಂಚಿತ ಶಾಸಕರಿಗೆ ಸಿಎಂ ಡಿಕೆಶಿ ಅಭಯ | CM DK Shivakumar

ಬೆಂಗಳೂರು: ಸಂಪುಟದಲ್ಲಿ ಸ್ಥಾನ ಸಿಗದೇ ವಂಚಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರಿಗೆ ಅಭಯ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar), 2004ರಲ್ಲಿ ನನಗೂ ಮಂತ್ರಿಗಿರಿ ಸಿಕ್ಕಿರಲಿಲ್ಲ, ತಾಳ್ಮೆಯಿಂದ ಇದ್ರೆ ಎಲ್ಲರಿಗೂ ಅವಕಾಶ ಮಾಡಿಕೊಡ್ತೇವೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇಂದು(ಆ. 03) ಸಂಪುಟ ಸೇರುವ ನೂತನ ಸಚಿವರು ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಸಂಜೆ 5 ಗಂಟೆಗೆ 20 ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ರಾಜ್ಯಪಾಲರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಸಚಿವ ಸ್ಥಾನ ವಂಚಿತ ಶಾಸಕರಿಂದ ಅಸಮಾಧಾನ ಮತ್ತು ಬೆಂಬಲಿಗರ ಪ್ರತಿಭಟನೆ ಬಗ್ಗೆ ತಮ್ಮ ನಿವಾಸದಲ್ಲಿ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, ಲೋಕಭವನಕ್ಕೆ ನೂತನ ಸಚಿವರ ಪಟ್ಟಿ ಕಳುಹಿಸಿದ್ದೇವೆ. 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನನಗೂ ಮಂತ್ರಿಗಿರಿ ಸಿಕ್ಕಿರಲಿಲ್ಲ. ಹಿಂದೆ ಸಿದ್ದರಾಮಯ್ಯನವರ ಮೊದಲ ಸಂಪುಟದಲ್ಲಿ ಅವಕಾಶ ನೀಡಿರಲಿಲ್ಲ. ನಾವು ತಾಳ್ಮೆಯಿಂದ ಇರಲಿಲ್ಲವೇ? ತಾಳ್ಮೆಯಿಂದ ಇದ್ರೆ ಮುಂದೆ ಅವಕಾಶ ಮಾಡಿಕೊಡ್ತೇವೆ ಎಂದಿದ್ದಾರೆ.

ನೂತನ ಸಚಿವರ ಪಟ್ಟಿ

1. ಪಿ.ಎಂ.ನರೇಂದ್ರಸ್ವಾಮಿ
2. ಶಿವರಾಜ್ ತಂಗಡಗಿ
3. ರುದ್ರಪ್ಪ ಲಮಾಣಿ
4. ಕೆ.ಎಸ್.ಬಸವಂತಪ್ಪ
5. ಬಿ.ನಾಗೇಂದ್ರ
6. ಟಿ.ರಘುಮೂರ್ತಿ
7. B. Z. ಜಮೀರ್ ಅಹಮದ್ ಖಾನ್
8. ರಿಜ್ವಾನ್ ಅರ್ಷದ್
9. ಸಂತೋಷ್ ಲಾಡ್
10. ಮಧು ಬಂಗಾರಪ್ಪ
11. ಪುಟ್ಟರಂಗಶೆಟ್ಟಿ
12. ಎಸ್​.ಎಸ್​. ಮಲ್ಲಿಕಾರ್ಜುನ್​
13. ಡಾ. ಅಜಯ್ ಸಿಂಗ್
14. ಎನ್. ಚಲುವರಾಯ ಸ್ವಾಮಿ
15. ಕೆ.ಎಂ.ಶಿವಲಿಂಗೇಗೌಡ
16. ಎಚ್.ಸಿ.ಬಾಲಕೃಷ್ಣ
17. ಶ್ರೀಮತಿ. ಗಾಯತ್ರಿ ಶಾಂತೇಗೌಡ
18. ಬಸವರಾಜ ರಾಯರೆಡ್ಡಿ
19. ವಿಜಯಾನಂದ ಕಾಶಪ್ಪನವರ್
20. ಲಕ್ಷ್ಮಣ ಸವದಿ

ಪಕ್ಷದ ಹೈಕಮಾಂಡ್ ನಾಯಕರು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವಾಗ ಜಾತಿ, ಧರ್ಮ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಹಾಗೂ ವಿವಿಧ ಸಾಮಾಜಿಕ ವರ್ಗಗಳ ನಡುವಿನ ಸಮತೋಲನವನ್ನು ಎಚ್ಚರಿಕೆಯಿಂದ ಪರಿಗಣಿಸಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಆರು ಮಂದಿಗೆ ಪುನಃ ಅವಕಾಶ ಕಲ್ಪಿಸಿಕೊಡಲಾಗಿದೆ. ಸದ್ಯಕ್ಕೆ ನೂತನ ಸಚಿವರು ಯಾರೆಂದು ತಿಳಿದಿದ್ದು, ಇನ್ನೂ ಯಾರಿಗೆ ಯಾವ ಖಾತೆ ಎಂಬ ಸಸ್ಪೆನ್ಸ್​ ಮಾತ್ರ ಹಾಗೇ ಉಳಿದಿದೆ.