ಪರಿಸರ ಸ್ನೇಹಿ ಅಭ್ಯಾಸ ಇರಲಿ environmentally 
ರಾಜ್ಯ

ಪರಿಸರ ಸ್ನೇಹಿ ಅಭ್ಯಾಸ ಇರಲಿ environmentally

ಬೆಂಗಳೂರು ಗ್ರಾಮಾಂತರ ಡೆಸ್ಕ್
ಬೆಂ. ಗ್ರಾಮಾಂತರ: ನಮ್ಮ ಪರಿಸರ ಸಂರಸುವುದು ಮತ್ತು ಸ್ವಚ್ಛವಾಗಿಡುವುದು ಒಂದು ದಿನದ ಕೆಲಸವಲ್ಲ. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತೆ ಬಿ. ೌಜಿಯಾ ತರನ್ನುಮ್​ ಹೇಳಿದರು.environmentally
ದೇವನಹಳ್ಳಿ ತಾಲೂಕು ಕುಂದಾಣ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಪ್ರತಿಯೊಬ್ಬರು ಪರಿಸರ ಸ್ನೇಹಿ ಅಭ್ಯಾಸ ಅಳವಡಿಸಿಕೊಂಡು ಸ್ವಚ್ಛ ಮತ್ತು ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಅರ್ಥಪೂರ್ಣ ಪರಿಸರ ದಿನ ಆಚರಿಸೋಣ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಪರಿಸರ ರಕ್ಷಣೆ ಬಗ್ಗೆ ನಿಮ್ಮ ನೆರೆಹೊರೆಯವರಲ್ಲಿ ಜಾಗೃತಿ ಮೂಡಿಸಬೇಕು. ಪಾಲಕರಿಗೂ ಈ ಬಗ್ಗೆ ಅರಿವು ಮೂಡಿಸಿ ಸಸಿಗಳನ್ನು ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಬೇಕು. ನಗರೀಕರಣ, ಕೈಗಾರಿಕರಣದಿಂದ ಪರಿಸರ ನಾಶವಾಗುತ್ತಿದೆ. ಅಭಿವೃದ್ಧಿ ಅನಿವಾರ್ಯವಾಗಿದ್ದರೂ ಮರ&ಗಿಡಗಳನ್ನು ಬೆಳೆಸಿ ಪರಿಸರಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆಗೆ ಪಣ ತೊಡೋಣ: ಈ ಬಾರಿ "ಪ್ರಕೃತಿಯಿಂದ ಪ್ರೇರಣೆ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ' ಎಂಬ ೂಷ ವಾಕ್ಯದೊಂದಿಗೆ ಪರಿಸರ ದಿನಆಚರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಾಸಂತಿ ಅಮರ್​ ತಿಳಿಸಿದರು. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಅತ್ಯುತ್ತಮ ಪರಿಹಾರ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದರು. ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸಾಧ್ಯವಿರುವ ಕಡೆಗಳಲ್ಲಿ ಸಸಿನೆಟ್ಟು ಪೋಷಿಸುವಂತೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾಧ್ಯವಾದ ಕಡೆಗಳಲ್ಲಿ ಮಿನಿ ಅರಣ್ಯೀಕರಣ ನಡೆಸಲು ರೂಪುರೇಷೆ ಸಿದ್ಧಪಡಿಸಿದ್ದು, ಹಂತಹಂತವಾಗಿ ಯೋಜನೆಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು. ಸಸಿಗಳನ್ನು ನೆಟ್ಟರಷ್ಟೇ ಅವುಗಳಿಗೆ ಗೊಬ್ಬರ ನೀರು ಹಾಕಿ ಪೋಷಿಸಬೇಕು, ಸಸಿಗಳು ಬೆಳೆದು ದೊಡ್ಡ ಮರವಾದರೆ ಮಾತ್ರ ನಾವು ಹಾಕಿದ ಶ್ರಮಕ್ಕೆ ಪ್ರತಿಲ ಸಿಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಸಸಿಗಳನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.