ಕೆಂಭಾವಿ ಸಮೀಪ ಗೌಡಗೇರಿ ಗ್ರಾಮದ ಪಿಎಂಶ್ರೀ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಉಮಾದೇವಿ ಮಾತನಾಡಿದರು. ಡಿ.ಡಿ.ರಾಂಪೂರ, ಅಬ್ದುಲ್ ಲತೀಫ್, ಹಳ್ಳೇರಾವ ಕುಲಕರ್ಣಿ, ನಿಂಗಣ್ಣ ಮಾಲಿ ಬಿರಾದಾರ, ಮಹಾಂತಗೌಡ ಪೊಲೀಸ್ ಬಿರಾದಾರ ಇದ್ದರು.
- ಸಮುದಾಯ ಆರೋಗ್ಯ ಕೇಂದ್ರದ ಅಬ್ದುಲ್ ಸಲಹೆ
- ಗೌಡಗೇರಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ
ಕೆಂಭಾವಿ: ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಮಲೇರಿಯಾ ರೋಗ ಹರಡದಂತೆ ತೀವ್ರ ಎಚ್ಚರ ವಹಿಸಬೇಕು ಎಂದು ನಗನೂರ ಸಮುದಾಯ ಆರೋಗ್ಯ ಕೇಂದ್ರದ ಸಿಎಚ್ಒ ಅಬ್ದಲ್ ಲತೀಠ್ ಹೇಳಿದರು.
ಗೌಡಗೇರಿ ಗ್ರಾಮದ ಪಿಎಂಶ್ರೀ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾರಕ ಸೊಳ್ಳೆಗಳಿಂದ ಮಲೇರಿಯಾ ರೋಗ ಬರುತ್ತಿದ್ದು ನಾವು ವಾಸ ಮಡುವ ಪ್ರದೇಶ, ಮನೆ, ಬಯಲು ಜಾಗ ಸೇರಿ ಇತರೆ ಕಡೆಗಳಲ್ಲಿ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಮಲೇರಿಯಾ ತಡೆಗಟ್ಟಲು ಈಗಾಗಲೇ ನಮ್ಮ ಸಮುದಾಯ ಆರೋಗ್ಯ ಕೇಂದ್ರದಿಂದ ಪ್ರಚಾರ ಮಾಡುತ್ತಿದ್ದು ಜನತೆ ಇದಕ್ಕೆ ಸಹಕರಿಸಿ ಮಾರಕ ರೋಗ ತಡೆಗಟ್ಟಲು ನಮ್ಮ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಆರೋಗ್ಯ ಸಹಾಯಕ ಮಾನಯ್ಯ ಅವರು ಮಲೇರಿಯಾ ಲಕ್ಷಣ ಮತ್ತು ಅದರ ಆರೈಕೆ ಬಗ್ಗೆ ಮಾತನಾಡಿದರು. ಮುಖ್ಯಗುರು ಡಿ.ಡಿ.ರಾಂಪೂರ ಅಧ್ಯಕ್ಷತೆ ವಹಿಸಿದ್ದರು. ಉಮಾದೇವಿ, ರೇಣುಕಾ, ಚಂದ್ರಕಲಾ, ಹಳ್ಳೇರಾವ ಕುಲಕರ್ಣಿ, ನಿಂಗಣ್ಣ ಮಾಲಿ ಬಿರಾದಾರ, ಮಹಾಂತಗೌಡ ಪೊಲೀಸ್ ಬಿರಾದಾರ, ಶಿವಾನಂದ, ಭೀಮನಗೌಡ ದೇಸಾಯಿ, ಮೌನೇಶ, ಜ್ಯೋತಿ, ಲ್ಮ, ಹಣಮಂತಿ, ಬಸವರಾಜ ಇತರರಿದ್ದರು.