ಸಿಂಧನೂರು ಶಹರ ಠಾಣೆಯಲ್ಲಿ ಬಕ್ರೀದ್ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಚಂದ್ರಶೇಖರ ಜಿ.ನಾಯಕ ಮಾತನಾಡಿದರು. ವಕೀಲರ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎನ್. ರಾಮನಗೌಡ, ಜಾತಿ ನಿರ್ಮೂಲನಾ ಚಳವಳಿಯ ಸಂಸ್ಥಾಪಕ ಎಚ್.ಎನ್.ಬಡಿಗೇರ್, ಮುಖಂಡರಾದ ವೀರೇಶ ಯಡಿಯೂರಮಠ, ರವಿ ಹಿರೇಮಠ ಇತರರಿದ್ದರು.
- ಡಿವೈಎಸ್‌ಪಿ ಚಂದ್ರಶೇಖರ ಹೇಳಿಕೆ
- ಶಾಂತಿ-ಸೌಹಾರ್ದದಿಂದ ಹಬ್ಬ ಆಚರಿಸಿ
ಸಿಂಧನೂರು: ಎಲ್ಲ ಜಾತಿ ಮತ್ತು ಧರ್ಮದವರು ಶಾಂತಿ, ಸಾಮರಸ್ಯದಿಂದ ಬದುಕು ನಡೆಸಬೇಕಿದ್ದು, ಬಕ್ರೀದ್ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕೆಂದು ಡಿವೈಎಸ್‌ಪಿ ಚಂದ್ರಶೇಖರ ಜಿ.ನಾಯಕ ಹೇಳಿದರು.
ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ಹಬ್ಬಕ್ಕೂ ತನ್ನದೇ ಆದ ಇತಿಹಾಸವಿದೆ. ತ್ಯಾಗ, ಬಲಿದಾನಗಳ ಸಂಕೇತವೇ ಬಕ್ರೀದ್. ಹಬ್ಬದ ದಿನದಂದು ಬಲಿ ಕೊಡುವುದು ವಾಡಿಕೆ. ಅದು ಕಾನೂನು ವ್ಯಾಪ್ತಿಯಲ್ಲಿರಬೇಕು. ವೈಯಕ್ತಿಕ ಜಗಳವನ್ನು ಹಬ್ಬಗಳಲ್ಲಿ ಹರಡಿ ಗಲಭೆೆ ಸೃಷ್ಟಿಸಬಾರದು. ಯುವಕರು ಬೈಕ್‌ಗಳ ಸೈಲೆನ್ಸರ್ ಕಿತ್ತಿ ಓಡಿಸಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ ಮಾತನಾಡಿ, ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಂತೆ ಸರ್ವಧರ್ಮದವರು ಒಗ್ಗೂಡಿ ಹಬ್ಬ ಆಚರಿಸಬೇಕು ಎಂದರು.
ವಕೀಲರ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎನ್. ರಾಮನಗೌಡ, ಜಾತಿ ನಿರ್ಮೂಲನಾ ಚಳವಳಿಯ ಸಂಸ್ಥಾಪಕ ಎಚ್.ಎನ್.ಬಡಿಗೇರ್, ಮುಖಂಡರಾದ ವೀರೇಶ ಯಡಿಯೂರಮಠ, ರವಿ ಹಿರೇಮಠ, ನಿಸಾರ್ ಖಾನ್, ಸಿಪಿಐ ವಿನಾಯಕ, ಮುಖಂಡರಾದ ಶ್ರೇಣಿಕ್‌ರಾಜ್ ಶೇಠ್, ವಿಶ್ವನಾಥ ಚೌಧರಿ, ಸುರೇಶ ಜಿ.ಗೊಬ್ಬರಕಲ್, ವೀರೇಶ ರಾರಾವಿ, ಶಿವು ಎಸ್‌ಆರ್‌ಕೆ, ಹನುಮೇಶ ಇದ್ದರು.