ಎಚ್ಚರ... ಹೆಚ್ಚುತ್ತಿದೆ ಮಿದುಳು ಕಾಯಿಲೆ brain disease
- ಮುಂಜಾಗ್ರತೆ ವಹಿಸಲು ಮಣಿಪಾಲ್ ಆಸ್ಪತ್ರೆ ನ್ಯೂರೋ ತಜ್ಞ ಡಾ.ಸಾತ್ವಿಕ್ ಆರ್.ಶೆಟ್ಟಿ ಸಲಹೆ
ಕೋಲಾರ: ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳು ಹರಡದಂತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಮಣಿಪಾಲ್ ಆಸ್ಪತ್ರೆ ನ್ಯೂರೋ ತಜ್ಞ ಡಾ.ಸಾತ್ವಿಕ್ ಆರ್.ಶೆಟ್ಟಿ ತಿಳಿಸಿದರು. brain disease
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರಮಂಡಲ ಸಮಸ್ಯೆ ಅಂಗವೈಕಲ್ಯ ಮತ್ತು ಮರಣಕ್ಕೂ ಕಾರಣವಾಗುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.3.3 ಜನ ಮಿದುಳು, ನರಮಂಡಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದರು.
ದಣ ಕರ್ನಾಟಕದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅತ್ಯಾಧುನಿಕ ವೈದ್ಯಕಿಯ ತಂತ್ರಜ್ಞಾನದ ಮೂಲಕ ಸಮಗ್ರ ಆರೈಕೆಗೆ ಒಳಗಾದರೆ ಜೀವನದ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಪಾರ್ಕಿನ್ಸನ್ ಕಾಯಿಲೆಯು ಚಲನೆಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ನರಮಂಡಲವನ್ನು ಅವನತಿಯೆಡೆಗೆ ಕೊಂಡೊಯ್ಯುವ ಕಾಯಿಲೆಯಾಗಿದೆ. ಡಿಬಿಎಸ್ ಚಿಕಿತ್ಸಾ ವಿಧಾನವು ಪಾರ್ಕಿನ್ಸ್ನ್ ಕಾಯಿಲೆಯಲ್ಲಿ ಉಂಟಾಗುವ ಬಿಗಿತ, ನಡುಕ ಮತ್ತು ನಿಧಾನಗತಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ನ್ಯೂರೋಮಸ್ಕುಲರ್ ತಜ್ಞೆ ಡಾ.ವೀಣಾ ವೇದಾರ್ಥಂ ಮಾತನಾಡಿ, ಪಾರ್ಶ್ವವಾಯು ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಕಾಲಮಿತಿಯೊಳಗೆ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆ ಗುಣಪಡಿಸಿಕೊಳ್ಳಬಹುದು ಎಂದು ಹೇಳಿದರು.
ರಕ್ತ ಹೆಪ್ಪುಗಟ್ಟುವಿಕೆ, ರಕ್ತಸ್ರಾವದಿಂದ ಪಾರ್ಶ್ವವಾಯು ಹರಡುತ್ತದೆ. ಪಾರ್ಶ್ವವಾಯು ಬಂದ ತಕ್ಷಣ ಮಿದುಳಿನ ಜೀವಕೋಶಗಳನ್ನು ಹಾನಿಗೊಳಿಸುತ್ತವೆ. ರೋಗಿಯು 4 ಗಂಟೆಗಳ ಒಳಗೆ ಬಂದರೆ, ಔಷಧ ನೀಡಿ ರಕ್ತದ ಹೆಪ್ಪುಗಟ್ಟುವಿಕೆ ತಪ್ಪಿಸಬಹುದು. ರ್ನಿದಿಷ್ಟ ಪ್ರಕರಣಗಳಲ್ಲಿ, ಹೆಪ್ಪುಗಟ್ಟುವಿಕೆ ಇಲ್ಲದಂತೆ ಮಾಡಲು 24 ಗಂಟೆಗಳವರೆಗೆ ಪರಿಣಿತ ಸಾಧನಗಳನ್ನು ಬಳಸಲು ಸಾಧ್ಯ ಎಂದು ವಿವರಿಸಿದರು.