ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಹಾಪುರ ತಾಲೂಕು ಭೀಮರಾಯನ ಗುಡಿ ಕೃಷಿ ವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜಿನ ಉಪಾಧ್ಯಕ್ಷ ಶ್ರೀಕಾಂತ ಪೂಜಾರಿ, ದಾನೇಶಗೌಡ ಪಾಟೀಲ್, ರಾಹುಲ್ ಭೋವಿ, ಹರೀಶ ಭೋಸಲೆ, ಆಕಾಶ ಎಸ್.ಕೆ., ಚಂದ್ರಕಾAತ, ಸಂಗಮೇಶ ದರ್ಶನಾಪುರ, ಪ್ರಮೋದ ರಾಠೋಡ್, ಅಬ್ದುಲ್ ಕಲಾಂ ಇತರರಿದ್ದರು.
- ರೈಟಿಕ್ ವಿವಿಗೆ ನೀಡಿದ ಅವಕಾಶ ತಕ್ಷಣ ರದ್ದುಗೊಳಿಸಿ
- ವಿವಿಧ ನಾಲ್ಕು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
೨೦೨೫ರ ಏ.೧೦ರ ಸುಪ್ರೀಂಕೋರ್ಟ್ ತೀರ್ಪಿನಂತೆ ಹೊಸ ನೇಮಕ ಅಽಸೂಚನೆಯಲ್ಲಿ ಘೋಷಿಸಿದ ಅರ್ಹತಾ ಮಾನದಂಡವನ್ನು ನೇಮಕಾತಿ ಪ್ರಕ್ರಿಯೆ ಮಧ್ಯೆ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಸಿ ಆ್ಯಂಡ್ ಆರ್ ನಿಯಮಗಳ ಉಲ್ಲಂಘನೆ ಮತ್ತು ರೈಟಿಕ್ ವಿವಿಗೆ ನೀಡಿದ ಅವಕಾಶ ಕೂಡಲೇ ರದ್ದುಗೊಳಿಸಬೇಕು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೃಷಿ ಅಽಕಾರಿ ಮತ್ತು ಸಹಾಯಕ ಕೃಷಿ ಅಽಕಾರಿ ಹುz್ದೆಗಳಿಗೆ ನಡೆಯಲಿರುವ ಕೆಇಎ ಪರೀಕ್ಷೆಗೆ ಕೊನೇ ಕ್ಷಣದಲ್ಲಿ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ರೈಟಿಕ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಸಂವಿಧಾನದ ೩೦೯ರ ವಿಽಯಡಿ ರಚನೆಯಾದ ಮೂಲ (ವೃಂದ ಮತ್ತು ನೇಮಕಾತಿ) ನಿಯಮ ಸರ್ಕಾರದ ಯಾವುದೇ ಸಾಮಾನ್ಯ ಆದೇಶ ಮೀರುವಂತಿಲ್ಲ. ಕೃಷಿ ಇಲಾಖೆ ಹಾಗೂ ಕೆಇಎ ಮಾಡಿದ ಈ ಎಡವಟ್ಟಿನಿಂದಾಗಿ ಸರ್ಕಾರಿ ವಿವಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅನ್ಯಾಯ ತಡೆಗೆ ತಕ್ಷಣ ರೈಟೆಕ್ ವಿವಿಯನ್ನು ಈ ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳಡಿ ೧೨ಕ್ಕೂ ಹೆಚ್ಚು ಖಾಸಗಿ ಕೃಷಿ ಕಾಲೇಜುಗಳಿಗೆ ಸಂಯೋಜನೆ ನೀಡಲಾಗುತ್ತಿದೆ. ಇದು ಕೃಷಿ ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣಗೊಳಿಸಿ ಬಡ ರೈತರ ಮಕ್ಕಳಿಗೆ ದುಬಾರಿ ಆಗುವಂತೆ ಮಾಡುತ್ತದೆ. ಆದ್ದರಿಂದ ಈ ವರ್ಷದ ಶೈಕ್ಷಣಿಕ ದಾಖಲಾತಿ ಆರಂಭಕ್ಕೂ ಮುನ್ನ ಈ ಎಲ್ಲ ಖಾಸಗಿ ಕಾಲೇಜುಗಳ ಪ್ರವೇಶಾತಿ ತಡೆಹಿಡಿಯಬೇಕು. ಕೃಷಿ ಕ್ಷೇತ್ರದ ಗಂಧ-ಗಾಳಿ ಗೊತ್ತಿಲ್ಲದ ಬಿಇ ಬಯೋಟೆಕ್ ಪದವೀಧರರಿಗೆ ಕೃಷಿ ಎಡಿ, ಎಡಿಒ ಹುz್ದÉಗಳಿಗೆ ಅವಕಾಶ ನೀಡಿರುವುದು ಅವೈe್ಞÁನಿಕ. ಬಿಎ ಪದವೀಧರರನ್ನು ವೈದ್ಯ ವೃತ್ತಿಯಲ್ಲಿ ಕೂರಿಸುವುದು ಎಷ್ಟು ಪ್ರಮಾದವೋ, ಕೃಷಿ ಅರಿಯದವರಿಗೆ ಈ ಹುz್ದÉ ನೀಡುವುದು ಅಷ್ಟೇ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ನಿರ್ಧಾರ ಹಿಂಪಡೆದು ಬಿಇ ಬಯೋಟೆಕ್ ಪದವೀಧರರನ್ನು ಹೊರಗಿಡಬೇಕು. ರೈತರಿಗೆ ಮಾರಕವಾಗಿರುವ ದೇಸಿ ಕೋರ್ಸ್ ರದ್ದಾಗಬೇಕು. ಕೃಷಿ ಇಲಾಖೆಯಲ್ಲಿ ಪ್ರತಿವರ್ಷ ನೇಮಕಾತಿ ಜತೆಗೆ ಶೇ.೨ ಕ್ರೀಡಾ ಮೀಸಲಾತಿಯನ್ನು ಎಡಿ ಮತ್ತು ಎಡಿಒ ನೇಮಕಾತಿಯಲ್ಲಿ ಅಳವಡಿಸಬೇಕು. ಕೃಷಿ ಅಽಕಾರಿಗಳು ಮಾಡಿದ ಈ ಎಡವಟ್ಟು ಕೂಡಲೇ ಸರಿಪಡಿಸಿ ಸಾವಿರಾರು ಕೃಷಿ ವಿದ್ಯಾರ್ಥಿಗಳು ಮತ್ತು ಅನ್ನದಾತರಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷಿಸಿದರೆ ಬೆಂಗಳೂರಿನಲ್ಲಿ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಕಾಲೇಜಿನ ಉಪಾಧ್ಯಕ್ಷ ಶ್ರೀಕಾಂತ ಪೂಜಾರಿ, ದಾನೇಶಗೌಡ ಪಾಟೀಲ್, ರಾಹುಲ್ ಭೋವಿ, ಹರೀಶ ಭೋಸಲೆ, ಆಕಾಶ ಎಸ್.ಕೆ., ಚಂದ್ರಕಾAತ, ಸಂಗಮೇಶ ಬಿ.ದರ್ಶನಾಪುರ, ಪ್ರಮೋದ ರಾಠೋಡ್, ಅಬ್ದುಲ್ ಕಲಾಂ ಇತರರಿದ್ದರು. ವಿದ್ಯಾರ್ಥಿಗಳ ಹೋರಾಟಕ್ಕೆ ಪ್ರಾಂತ ರೈತ ಸಂಘಟನೆ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಇತರರು ಬೆಂಬಲಿಸಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.