ಸಚಿವ ಬಸವಂತಪ್ಪ, ಮಾಜಿ ಲೋಕಸಭಾ ಸದಸ್ಯ ಬಿ.ಎನ್ ಚಂದ್ರಪ್ಪ ಹಾಗೂ ಅಹಿಂದ ಒಕ್ಕೂಟ ಸಮಿತಿ ರಾಜ್ಯಾಧ್ಯಕ್ಷ ಮುತ್ತುರಾಜ್ ಮುನಿಯಪ್ಪನವರಿಗೆ ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ. 
ರಾಜ್ಯ

ಬಂದರು ಮತ್ತು ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆಯ ನೂತನ ಸಚಿವರಾಗಿ ಸ್ಥಾನ ಪಡೆದಿರುವ ಬಸವಂತಪ್ಪ ಅವರು ಬುಧವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದರು/basavantappa

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಬಂದರು ಮತ್ತು ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆಯ ನೂತನ ಸಚಿವರಾಗಿ ಸ್ಥಾನ ಪಡೆದಿರುವ ಬಸವಂತಪ್ಪ ಅವರು ಬುಧವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದರು.
ಬುಧವಾರ ಖಾತೆ ಹಂಚಿಕೆಯಾದ ಬಳಿಕ ನೂತನ ಸಚಿವ ಕೆ.ಎಚ್.ಮುನಿಯಪ್ಪ ಅವರ ಮನೆಗೆೆ ತೆರಳಿದ ಸಚಿವ ಬಸವಂತಪ್ಪ, ಮಾಜಿ ಲೋಕಸಭಾ ಸದಸ್ಯ ಬಿ.ಎನ್ ಚಂದ್ರಪ್ಪ ಹಾಗೂ ಅಹಿಂದ ಒಕ್ಕೂಟ ಸಮಿತಿ ರಾಜ್ಯಾಧ್ಯಕ್ಷ ಮುತ್ತುರಾಜ್ ಮುನಿಯಪ್ಪನವರಿಗೆ ಹೂಗುಚ್ಚ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.
ಮೊದಲ ಬಾರಿಗೆ ಸಚಿವ ಸ್ಥಾನ ಪಡೆದಿರುವ ಬಸವಂತಪ್ಪ ಮುಂದಿನ ದಿನಗಳಲ್ಲಿ ತಮಗೆ ವಹಿಸಿರುವ ಖಾತೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಹಾಗೂ ಕೆಲವೊಂದು ಅಭಿವೃದ್ಧಿ ವಿಷಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಮುನಿಯಪ್ಪ ಅವರ ಬಳಿ ಮಾರ್ಗದರ್ಶನ ಪಡೆದರು. ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ಸಾಕಷ್ಟು ಅನುಭವ ಹೊಂದಿರುವ ಕೆ.ಎಚ್.ಮುನಿಯಪ್ಪ ಅವರು ಕೆಲವು ಸಲಹೆಗಳನ್ನು ನೀಡಿದ್ದು, ಮಾಜಿ ಸಚಿವ ಆಂಜನೇಯ ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ಹೇಳಿದ್ದಾರೆ.