ಹುಲಸೂರು ಪಟ್ಟಣದ ಶೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶಿವಸೇನೆ ರಾಜ್ಯಾಧ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ರಾಜೇಶ್ವರ ಶಿವಾಚಾರ್ಯ, ಮಲ್ಲಿಕಾರ್ಜುನ ಗುಂಗೆ, ಅನಿಲ ಭೂಸಾರೆ, ಮಲ್ಲಪ್ಪ ಧಬಾಲೆ, ಬಾಲಾಜಿ ಆದೆಪ್ಪ, ಬಸವರಾಜ ಮುರುಡೆ, ಓಂಕಾರ ಪಟ್ನೆ, ಕಾಶಿನಾಥ ಪಾರಶೆಟ್ಟೆ, ಚಂದ್ರಕಾಂತ ದೇಟ್ನೆ ಇತರರಿದ್ದರು. 
ರಾಜ್ಯ

ಶಾಸನಗಳಾಗಿವೆ ಬಸವಣ್ಣನವರ ವಚನ

ಪ್ರಮುಖ ಮುಖ್ಯಾಂಶಗಳು

  • ಅಂದೋಲಾ ಶ್ರೀ ಬಣ್ಣನೆ
  • ಹುಲಸೂರಿನಲ್ಲಿ ಧರ್ಮಸಭೆ
ಹುಲಸೂರು: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಬರೆದಿರುವ ವಚನಗಳು ಇಂದು ಶಾಸನಗಳಾಗಿವೆ ಎಂದು ಅಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶಿವಸೇನೆ ರಾಜ್ಯಾಧ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ರ ಸೋಮವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಬಸವಕಲ್ಯಾಣ ಅನುಭವ ಮಂಟಪ 12ನೇ ಶತಮಾನದಲ್ಲಿ ಸಂಸತ ಆಗಿತ್ತು. ಅದೇ ಮಾದರಿಯಲ್ಲಿ ಸಂಸತ್ತು ವಿಧಾನಸಭೆ, ನಗರಸಭೆ, ಗ್ರಾಪಂ ರಚಿಸಿದ್ದಾರೆ ಎಂದರು.
ದೇಶಕ್ಕಾಗಿ, ಧರ್ಮಕ್ಕಾಗಿ ದುಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ತಾಯಂದಿರು ತಮ್ಮ ಮಕ್ಕಳು ಡಾಕ್ಟರ್​, ಇಂಜಿನಿಯರ್​, ರಾಜಕೀಯ ನಾಯಕರು ಆಗಬೇಕು ಎಂದು ಬಯಸುತ್ತಿದ್ದಾರೆ ಹೊರತು ದೇಶ ಕಾಯುವ ಸೈನಿಕರಾಗುವ ಚಿಂತೆ ಯಾರು ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಯುವತಿಯರು ಜಾಗೃತರಾಗಿರಬೇಕು. ಲವ್​ ಜಿಹಾದ್​ಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗದೆ ಹೆತ್ತವರ ಮಾನ ಕಾಪಾಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಬರಿ ಜಾತ್ರೆ ಆಚರಿಸಿದರೆ ಸಾಲದು, ಜಾತ್ರೆಯಲ್ಲಿ ನಮ್ಮ ಜೀವನದ ಯಾತ್ರೆ ಸುಗಮವಾಗಿ ಸಾಗಬೇಕು ಅಂದಾಗ ಮಾತ್ರ ಸಾರ್ಥಕ ಜೀವನ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ದೂರದ ನಗರಗಳಲ್ಲಿ ಓದಿಸದೇ ತಮ್ಮ ಜತೆಯಲ್ಲಿ ಇಟ್ಟುಕೊಂಡು ಓದಿಸಬೇಕು. ಕಾಲ ಕೇಡುತ್ತಿದೆ. ಕಾಮುಕರು ಹೆಚ್ಚಾಗುತ್ತಿದ್ದು, ಕುಂಭಮೇಳದಲ್ಲಿ ರುದ್ರಾ ಮಾರುತ್ತಿರುವ ಕೇರಳದ ಹಿಂದೂ ಯುವತಿ ಮೊನಾಲಿಸಾ ಲವ್​ ಜಿಹಾದ್​ಗೆ ಸಿಲುಕಿ ಹಿಂದೂ ಧಮೀರ್ಯರನ್ನು ತಲೆ ತಗ್ಗಿಸುವಂತೆ ಮಾಡಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ಹಾಗೂ ಭಕ್ತಾದಿಗಳ ಪರಿಶ್ರಮದಿಂದ ಒಂದು ವಾರ ಕಾಲ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ ಜರುಗಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಹಕರ&ತಡೋಳಾದ ಶ್ರೀ ರಾಜೇಶ್ವರ ಸ್ವಾಮೀಜಿ ಮಾತನಾಡಿ, ನೀತಿ ಕೊಡುವ ಶಿಣವೇ ಮಾರಾಟವಾಗುತ್ತಿದೆ, ನ್ಯಾಯ ಕೊಡುವ ದೇವತೆ ಸರಿಯಾದ ನ್ಯಾಯ ಕೊಡುತ್ತಿಲ್ಲ. ಶಾಸನದಲ್ಲಿ ನೀತಿ ಇಲ್ಲ. ನೋಟಿಗಾಗಿ ಓಟು ಮಾರಿಕೊಳ್ಳುತ್ತಿದ್ದಾರೆ, ಸಮಾಜ ಜಾಗೃತವಾಗಬೇಕಾಗಿದೆ ಎಂದು ಹೇಳಿದರು.
ನೀರಾವರಿ ಇಲಾಖೆ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಗೋವಿಂದರಾವ ಸೋಮೊವಂಶಿ ಮಾತನಾಡಿದರು. ಜಿಪಂ ಮಾಜಿ ಅಧ್ಯ ಅನಿಲ ಭೂಸಾರೆ, ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಸರ್ಕಾರಿ ವಕೀಲ ಬಾಲಾಜಿ ಆದೆಪ್ಪ, ಡಿಸಿಸಿ ಬ್ಯಾಂಕ್​ ನಿರ್ದೇಶಕ ಓಂಕಾರ ಪಟ್ನೆ, ಪ್ರಮುಖರಾದ ಬಸವರಾಜ ಮುರುಡೆ, ಕಾಶಿನಾಥ ಪಾರಶೆಟ್ಟೆ, ಚಂದ್ರಕಾಂತ ದೇಟ್ನೆ, ಬಂಡುರಾವ ಪಾಟೀಲ್​, ಸಂತೋಷ ಜಾನಬಾ, ಮೌನೇಶ ಪಂಚಾಳ ಇತರರಿದ್ದರು. ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಮಕ್ಕಳಿಂದ ರೂಪಕ ಹಾಗೂ ನೃತ್ಯ ನೋಡುಗರ ಗಮನ ಸೆಳೆಯಿತು.ಪರಶುರಾಮ ರಾಠೋಡ ಸ್ವಾಗತಿಸಿ ನಿರೂಪಣೆ ಮಾಡಿದರು.

ಹುಲಸೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಳೆದ ವರ್ಷ 3 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಸರ್ಕಾರದಿಂದ ಮಂಜೂರು ಪಡೆದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಅಧಿಕಾರಿಗಳ ಜತೆ ಮಾತನಾಡಿ ಆದಷ್ಟು ಬೇಗನೆ ಕಾಮಗಾರಿ ಮುಗಿಸುವ ಪ್ರಯತ್ನ ಮಾಡುತ್ತೇನೆ.

> ಮಲ್ಲಿಕಾರ್ಜುನ ಗುಂಗೆ

ನಿವೃತ್ತ ಎಂಡಿ ನೀರಾವರಿ ಇಲಾಖೆ ಬೆಂಗಳೂರು.