ಮಹಾರಾಷ್ಟ್ರದ ಪುಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯ ಕ್ರಮವನ್ನು ಗುಣತೀರ್ಥವಾಡಿ ಶ್ರೀ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಸಾಹಿತಿ ಸತೀಶ ಕುಮುದಾಳೆ, ಸತೀಶಕುಮಾರ, ಶಿವಲಿಂಗ ಢವಳೇಶ್ವರ, ಯೋಗೇಶಬಾವು ಲಾಂಡಗೆ, ಅಮರನಾಥ ಮಾನಾ, ಚಂದ್ರಶೇಖರ ಹೋನರಾವ್​, ರಾಮುಶೇಖರ ದೇಶಿಂಗೆ, ಶಿವಕುಮಾರ ಆಗ್ರೆ ಇದ್ದರು. 
ರಾಜ್ಯ

ಬಸವಣ್ಣನವರ ಚಿಂತನೆಗಳು ಜಗದಗಲ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಬಸವಪ್ರಭು ಸ್ವಾಮೀಜಿ ಅಭಿಮತ
  • ಪುಣೆಯಲ್ಲಿ ಜಯಂತಿ ಆಚರಣೆ ಬಸವಣ್ಣನವರ ಚಿಂತನೆಗಳು ಜಗದಗಲ
ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಬೋಧಿಸಿದ ವಚನ ಸಾಹಿತ್ಯದ ಚಿಂತನೆಗಳು ಕನ್ನಡ ನಾಡು ಅಥವಾ ಭಾರತಕ್ಕೆ ಸೀಮಿತವಾಗಿರದೆ ಜಗದಗಲವಾಗಿವೆ ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠದ ಪೀಠಾಧಿಪತಿ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.
ಮಹಾರಾಷ್ಟ್ರದ ಪುಣೆಯ ಬೋಸರಿ ರೋಶಲ್​ ಮಂಗಲ ಕಾರ್ಯಾಲಯದಲ್ಲಿ ರಾಷ್ಟ್ರೀಯ ಬಸವದಳ ಗುರುವಾರ ಸಂಜೆ ಏರ್ಪಡಿಸಿದ್ದ 893ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಸವಣ್ಣನವರು ಅನುಭವ ಮಂಟಪ ಮೂಲಕ ಸಮಾನತೆ, ಸಹೋದರತೆ, ಸಂಟನೆ ಕಟ್ಟಿ ಪ್ರಜಾಪ್ರಭುತ್ವದ ಚಿಂತನೆಗಳಿಗೆ ಬುನಾದಿ ಹಾಕಿದರು. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಆಧ್ಯಾತ್ಮಿಕ, ಶೈಕ್ಷಣಿಕ, ನೈತಿಕ ಕ್ರಾಂತಿ ಮಾಡಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ಪುಣೆಯ ಸಾಹಿತಿ ಸತೀಶ ಕುಮುದಾಳೆ ಉಪನ್ಯಾಸ ನೀಡಿ, ಹೆಣ್ಣುಮಕ್ಕಳಿಗೆ ಮೊಟ್ಟ ಮೊದಲು ಸಮಾನತೆ, ಧಾರ್ಮಿಕ ಸ್ವಾತಂತ್ರ$್ಯ ಕಲ್ಪಿಸಿಕೊಟ್ಟವರು ಬಸವಣ್ಣನವರು. ಲಿಂಗಾಯತರು ಗುಲಾಮಗಿರಿ ಪದ್ಧತಿ ಅನುಸರಿಸುವ ವೈದಿಕ ಧರ್ಮದ ಆಚರಣೆ ಬಿಟ್ಟು ಲಿಂಗಾಯತ ಧರ್ಮದ ನಿಜಾಚರಣೆಗೆ ಮುಂದಾದಾಗಲೇ ಬಸವತತ್ವ ಬೆಳೆಯಲು ಸಾಧ್ಯ ಎಂದು ಹೇಳಿದರು.
ಶಿವಲಿಂಗ ಢವಳೇಶ್ವರ, ನಗರ ಸೇವಕ ಯೋಗೇಶಬಾವು ಲಾಂಡಗೆ ಮಾತನಾಡಿದರು. ಅಮರನಾಥ ಮಾನಾ, ಚಂದ್ರಶೇಖರ ಹೋನರಾವ್​, ರಾಮುಶೇಖರ ದೇಶಿಂಗೆ, ಶಿವಕುಮಾರ ಆಗ್ರೆ ಇತರರಿದ್ದರು. ಬಸವದಳದ ಅಧ್ಯಕ್ಷ ಸತೀಶಕುಮಾರ ಸ್ವಾಗತಿಸಿದರು. ಸತೀಶ ಮೀಠಾರೆ ನಿರೂಪಣೆ ಮಾಡಿ ವಂದಿಸಿದರು.