ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಶರಣರ ಸಮಾಗಮ ಕಾರ್ಯಕ್ರಮವನ್ನು ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಶಿವಕುಮಾರ ಶಿವಾಚಾರ್ಯ, ಶ್ರೀ ಪ್ರಭುದೇವರು ಖಟ್ವಾಂಗೇಶ್ವರ ಸ್ವಾಮೀಜಿ, ಶಾಸಕ ಡಾ.ಅವಿನಾಶ ಜಾಧವ್, ಮಾಜಿ ಶಾಸಕ ರಾಜಕುಮಾರ ಪಾಟೀಲ್, ಕೆಪಿಸಿಸಿ ಉಪಾಧ್ಯ ಸುಭಾಷ ರಾಠೋಡ್, ವಿರೇಶ ಯಂಪಳ್ಳಿ ಇತರರಿದ್ದರು.
- ಶ್ರೀ ಶಿವಕುಮಾರ ಶಿವಾಚಾರ್ಯರು ನುಡಿ
- ಚಿಂಚೋಳಿ ಶರಣರ ಸಮಾಗಮ ಕಾರ್ಯಕ್ರಮ
ಚಿಂಚೋಳಿ : ಹಾನಗಲ್ ಗುರು ಕಮಾರೇಶ್ವರರು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಸ್ಥಾಪಕರಾಗಿದ್ದು, ಗುರು ವಿರಕ್ತರನ್ನು ಒಗ್ಗೂಡಿಸಿ ಹಾನಗಲ್ ಶ್ರೀಗಳು ಶ್ರಮಿಸಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಗೌರವ ಅಧ್ಯಕ್ಷರೂ ಆದ ನರನಾಳದ ಶ್ರೀ ಶಿವಕುಮಾರ ಶಿವಾಚಾರ್ಯರು ಹೇಳಿದರು.
ಶ್ರೀ ಚನ್ನ ಕಲ್ಯಾಣ ಮಂಟಪದಲ್ಲಿ ಬಸವ ಜಯಂತ್ಯುತ್ಸವ ಸ್ವಾಗತ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶರಣರ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಗುರು ಬಸವಣ್ಣನ ತತ್ವ, ಸಿದ್ಧಾಂತ ಎಲ್ಲರೂ ತಿಳಿದುಕೊಳ್ಳಬೇಕು. ಎನಗಿಂತ ಕಿರಿಯರಿಲ್ಲ, ಕಾಯಕವೇ ಕೈಲಾಸ ಹೀಗೆ ಸಾಕಷ್ಟು ವಚನಗಳ ಮೂಲಕ ಸಮಾಜವನ್ನು ತಿದ್ದಿದ ಮಹಾನ್ ಶರಣ ಬಸವಣ್ಣ. ಅವರ ಆದರ್ಶ ನಮಗೆ ಪ್ರೇರಣೆಯಾಗಬೇಕು ಎಂದರು.
ಬೀದರ್ ಸಂಸದ ಸಾಗರ ಖಂಡ್ರೆ ಮಾತನಾಡಿ, ಇಂದಿನ ಯುವ ಪೀಳಿಗೆ ಬೆಟ್ಟಿಂಗ್, ಜೂಜಾಟ, ಕುಡಿತದಂತಹ ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕು ನಡೆಸಬೇಕು. ಶ್ರೀಮಂತ, ಬಡವ ಎನ್ನದೆ ಸಮಾನತೆಯಿಂದ ಹಿರಿಯರ ಮಾರ್ಗದಲ್ಲಿ ಸಾಗಬೇಕು. ಸಮಾಜಕ್ಕೆ ಸಂಟನೆ ಅಗತ್ಯವಾಗಿದ್ದು, ಹೀಗಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಸಮಾಜದ ಭವನ ನಿರ್ಮಾಣಕ್ಕೆ ಸ್ಥಳದ ಕೊರತೆ ಇದ್ದು, ಎಲ್ಲರೂ ಸೇರಿ ಉತ್ತಮ ಸ್ಥಳ ಗುರುತಿಸಿ ಎಂದು ಹೇಳಿದರು.
ಶಾಸಕ ಡಾ.ಅವಿನಾಶ ಜಾಧವ್ ಮಾತನಾಡಿ, ಸಮಾಜದಲ್ಲಿ ಮಾನವೀಯತೆ ಬಿತ್ತಿ, ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಶ್ರಮಿಸಿದ್ದಾರೆ. ಎಲ್ಲ ವರ್ಗವನ್ನು ಕೊಂಡೊಯ್ಯುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ ಎಂದು ಬಣ್ಣಿಸಿದರು.
ಬಸವ ಜಯಂತ್ಯುತ್ಸವ ಸಮಿತಿ ತಾಲೂಕು ಅಧ್ಯಕ್ಷ ವಿರೇಶ ಯಂಪಳ್ಳಿ ಅಧ್ಯತೆ ವಹಿಸಿದ್ದರು. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮಾತನಾಡಿದರು.
ಹಾರಕೂಡ ಶ್ರೀ ಡಾ.ಚನ್ನವಿರ ಶಿವಾಚಾರ್ಯ, ಶ್ರೀ ಪ್ರಭುದೇವರು ಖಟ್ವಾಂಗೇಶ್ವರ ಸ್ವಾಮೀಜಿಜಿ, ಪ್ರಮುಖರಾದ ಚಿತ್ರಶೇಖರ ಪಾಟೀಲ್, ಬಾಬುರಾವ ಪಾಟೀಲ್, ಲ್ಮದೇವಿ ಕೊರವಿ, ಗೌತಮ ಪಾಟೀಲ್, ಶಿವಶರಣಪ್ಪ ಪಾಟೀಲ್, ಎಸ್.ಎನ್.ದಂಡಿನಕುಮಾರ, ಶರಣಪ್ಪ ಹಲಚೇರಾ, ಸಂಗಪ್ಪ ಪಾಲಾಮೂರ, ಚಂದ್ರಶೇಖರ ಗುತ್ತೇದಾರ್, ಗೋಪಾಲ ಎಂ.ಪಿ., ಸಂಜುಕುಮಾರ ಪಾಟೀಲ್, ಹಣಮಂತ ಪೂಜಾರಿ, ಮಲ್ಲು ಕೊಡಂಬುಲ, ಸಂತೋಷ ಗಡಂತಿ, ರಾಜು ನಿಂಗದಳ್ಳಿ, ಡಾ.ಶಿವಶರಣಪ್ಪ ಮೋತಕಪಳ್ಳಿ, ಸುಭಾಷ ಸೀಳಿನ್, ನೀಲಕಂಠ ಸೀಳಿನ್, ವಸಂತ ಇಟಗಿ, ನಾಗೇಶ ಸೀಳಿನ್, ಹಣಮಂತ ಕೋರಿ, ಶ್ರೀಮಂತ ಕಟ್ಟಿಮನಿ, ಶಶಿಕಾಂತ ಆಡಕಿ, ವಿಜಯಕುಮಾರ ಹುಳಗೇರಿ, ರಾಜಶೇಖರ ಹಿತ್ತಲ್ ಇತರರಿದ್ದರು.
ಬಸವಾಭಿಮಾನಿಗಳಿಂದ 1500ಕ್ಕೂ ಅಧಿಕ ಸಸಿ ವಿತರಣೆ ಮಾಡಲಾಯಿತು. ಪ್ರಮುಖ ಬೀದಿಗಳಲ್ಲಿ ಬಸವಣ್ಣನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಡಾ.ಬಸವೇಶ ಪಾಟೀಲ್, ಮಲ್ಲಿಕಾರ್ಜುನ ಪಾಲಾಮೂರ, ಅಶೋಕ ಮೋಗ್ದಂಪುರ, ಬಗದಲ್ ಪಿಎಸ್ಐ ರಾಜೇಂದ್ರಪ್ರಸಾದ ಅವರನ್ನು ಸನ್ಮಾನಿಸಲಾಯಿತು.
ಎಲ್ಲ ವರ್ಗದವರು ಸೇರಿ ಬಸವ ಜಯಂತಿ ಆಚರಿಸುತ್ತಿರುವುದು ಖುಷಿ ತಂದಿದೆ. 12ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಬಸವಾದಿ ಶರಣರು ಕ್ರಾಂತಿ ನಡೆಸಿದ್ದಾರೆ. ಇದನ್ನು ಎಲ್ಲರೂ ತಿಳಿಯಬೇಕು. ಗುರು ವಿರಕ್ತರ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜ ಬಲಿಷ್ಠವಾಗಲಿದೆ.
— > ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಶಾಸಕರು