ಕಂಪ್ಲಿಯ ಚಪ್ಪರದಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಲಾವಿದರಿಂದ ಶರಣರ ವಚನಗಾಯನ ನಡೆಯಿತು. ಕೊಪ್ಪಳದ ಶರಣತತ್ವ ಚಿಂತಕ ಡಾ.ಸಂಗಮೇಶ ಕಲಹಾಳ, ಬಸವೇಶ್ವರ ದಾಸೋಹ ಆಶ್ರಮದ ಪೀಠಾಧ್ಯಕ್ಷ ಪಾಮಯ್ಯ ಶರಣರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹೇಮಯ್ಯ ಸ್ವಾಮಿ ಇತರರಿದ್ದರು.
- ಕೊಪ್ಪಳದ ಶರಣತತ್ವ ಚಿಂತಕ ಡಾ.ಸಂಗಮೇಶ ಕಲಹಾಳ ಅನಿಸಿಕೆ
ಕಂಪ್ಲಿ: ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆಗಳನ್ನು ಕಿತ್ತೊಗೆಯುವಲ್ಲಿ ಜಗಜ್ಯೋತಿ ಬಸವೇಶ್ವರ ಅವರು ಅಗ್ರಪಂಕ್ತಿಯಲ್ಲಿದ್ದರು ಎಂದು ಕೊಪ್ಪಳದ ಶರಣತತ್ವ ಚಿಂತಕ ಡಾ.ಸಂಗಮೇಶ ಕಲಹಾಳ ಹೇಳಿದರು.
ನಗರದ ಶ್ರೀಗುರು ಭಕ್ತಿ ಬಂಡಾರಿ ಬಸವೇಶ್ವರ ದಾಸೋಹ ಆಶ್ರಮದಿಂದ ಚಪ್ಪರದಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಸಮಾಜ ನಿರ್ಮಿಸುವಲ್ಲಿ ಬಸವಣ್ಣ ಅವರ ಪಾತ್ರ ಅಗಾಧ ಎಂದರು. ಭಕ್ತಿ ಬಂಡಾರಿ ಬಸವೇಶ್ವರ ದಾಸೋಹ ಆಶ್ರಮದ ಪೀಠಾಧ್ಯಕ್ಷ ಪಾಮಯ್ಯ ಶರಣರು ಮಾತನಾಡಿ, ಬಸವಣ್ಣ ಅವರ ತತ್ವಾದರ್ಶಗಳನ್ನು ಪಾಲಿಸಿದರೆ ಅರ್ಥಪೂರ್ಣ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿದರು. ಕಲಾವಿದರಿಂದ ಶರಣರ ವಚನಗಾಯನ, ಶರಣರ ವಚನ ನೃತ್ಯ, ಕಹಳೆ ವಾದ್ಯನ ನಡೆಯಿತು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹೇಮಯ್ಯ ಸ್ವಾಮಿ, ಪ್ರಮುಖರಾದ ಡಾ.ಬಿ.ಸುನೀಲ್, ಮಾವಿನಹಳ್ಳಿ ಬಸವರಾಜ, ಕೆ.ವಿ.ರವಿಶಂಕರ, ಬಸನಗೌಡ ಹಂದ್ರಾಳ, ದಿಲೀಪ್‌ಕುಮಾರ್, ಡಾ.ಶಾರದಾ ಜ.ಹಿರೇಮಠ, ಕೆ.ಪಂಪಣ್ಣ, ಬಿ.ಎಂ.ರುದ್ರಯ್ಯ, ಸಿ.ಚನ್ನಬಸಪ್ಪ, ಕುಕನೂರು ಅಶೋಕ, ಚಂದ್ರಯ್ಯ ಸೊಪ್ಪಿಮಠ ಇತರರಿದ್ದರು.