ಆಳಂದದ ವೀರಶೈವ ಲಿಂಗಾಯತ ಭವನದಲ್ಲಿ ಶುಕ್ರವಾರ ಕರೆದಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ಆರ್​.ಪಾಟೀಲ, ಡಾ.ಬಿ.ಜಿ.ಪಾಟೀಲ, ಆರ್​.ಕೆ.ಪಾಟೀಲ, ಅರುಣಕುಮಾರ ಪಾಟೀಲ, ಆರ್​.ಜಿ.ಬೇಟೆಗಾರ, ಶರಣು ಮೋದಿ, ಶರಣಬಸಪ್ಪ ಪಾಟೀಲ, ಶಿವಪುತ್ರಪ್ಪ ಪಾಟೀಲ ಇತರರಿದ್ದರು. 
ರಾಜ್ಯ

ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಬಸವಣ್ಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ವೈ.ಪಾಟೀಲ್​ ಬಣ್ಣನೆ
  • ಅಫಜಲಪುರದಲ್ಲಿ ಬಸವ ಜಯಂತ್ಯುತ್ಸವ ಪೂರ್ವಭಾವಿ ಸಭೆ
ಅಫಜಲಪುರ: ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಗೌರವಿಸಿ ಆರಾಧಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಪಟ್ಟಣದ ಶ್ರೀಗುರು ಮಳೇಂದ್ರ ಮಠದಲ್ಲಿ ಬಸವ ಜಯಂತ್ಯುತ್ಸವ ಸಮಿತಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಒಂದು ಕೋಮಿಗೆ ಸೀಮಿತವಾಗದೆ ಇಡೀ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ದಾರ್ಶನಿಕರು ಎಂದರು.
ಉಪ ಪಂಗಡಗಳಿಂದ ನಮ್ಮ ಸಂಖ್ಯಾಬಲ ಕಡಿಮೆಯಾಗುತ್ತಿದ್ದು, ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಒಂದೇ ಎಂದು ಸಾರಬೇಕು. ನಮ್ಮ ಶಕ್ತಿ ಅನಾವರಣದಿಂದ ಅಬಲರಿಗೆ ಶಕ್ತಿ ತುಂಬಲು ಸಾಧ್ಯವಾಗಲಿದೆ. ಜಯಂತ್ಯುತ್ಸವಕ್ಕೆ ಪ್ರತಿಯೊಬ್ಬರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸಮಿತಿ ಜಿಲ್ಲಾಧ್ಯರಾದ ಶಾಸಕ ಬಿ.ಆರ್​. ಪಾಟೀಲ ಮಾತನಾಡಿ, ನಮ್ಮಲ್ಲಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮಾಜಕ್ಕಾಗಿ ಒಂದಾಗಬೇಕು. ಇಂದಿನ ಯುಗದಲ್ಲಿ ಬಸವಣ್ಣನವರ ತತ್ವಾದರ್ಶಗಳು ಅಗತ್ಯವಾಗಿವೆ. ಕಲಬುರಗಿಯಲ್ಲಿ ಏ.16ರಿಂದ ಮೂರು ದಿನ ಸಂಗೀತ, ಸಾಹಿತ್ಯ ಕಾರ್ಯಕ್ರಮ, 19ರಂದು ಬಹಿರಂಗ ಸಭೆ, 20ರಂದು ಬೃಹತ್​ ರ್ಯಾಲಿ ನಡೆಯಲಿದ್ದು, ಎಲ್ಲ ತಾಲೂಕುಗಳಿಂದ ಹೆಚ್ಚಿನ ಜನರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸಮಿತಿ ಜಿಲ್ಲಾ ಕಾರ್ಯಾಧ್ಯರಾದ ಎಂಎಲ್​ಸಿ ಡಾ.ಬಿ.ಜಿ. ಪಾಟೀಲ ಮಾತನಾಡಿ, ಕಲಬುರಗಿ ಮಹಾನಗರದಲ್ಲಿ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರತಿ ಹಳ್ಳಿಯ ಬಸವಾಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಕೋರಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯ ಶರಣು ಮೋದಿ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ, ಉದ್ದೇಶಗಳನ್ನು ಪಸರಿಸಲು ಎಲ್ಲರೂ ಪಾತೀತವಾಗಿ ಒಂದಾಗುವ ಅಗತ್ಯವಿದೆ ಎಂದರು.
ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ, ಜಟ್ಟಿಂಗರಾಯ ಮುತ್ಯಾ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯ ಅರುಣಕುಮಾರ ಎಂ.ವೈ.ಪಾಟೀಲ, ಉಮಾಕಾಂತ ನಿಗ್ಗುಡಗಿ, ಅಶೋಕ ೂಳಿ, ಇಂದುಮತಿ ಪಾಟೀಲ, ರವಿ ಶೆಟ್ಟಿ, ಸಂಜು ನಿಂಬಾಳ, ಶಿವಪುತ್ರಪ್ಪ ಸಂಗೊಳಗಿ, ಶಿವಶರಣಪ್ಪ ಹೀರಾಪುರ, ಚನ್ನಬಸಯ್ಯ ಹಿರೇಮಠ, ಶಂಕರ ಸೋಬಾನಿ, ಬಸವರಾಜ ಕಲಶೆಟ್ಟಿ, ಶ್ರೀಮಂತ ಬಿರಾದಾರ, ಸಂಗ್ರಾಮಗೌಡ ಪಾಟೀಲ, ಗಂಗಾಧರ ಶ್ರೀಗಿರಿ, ಎಸ್​.ಎಸ್​. ಪಾಟೀಲ, ಕಂಟೆಪ್ಪ ಬಳೂರಗಿ, ನಾನಾಗೌಡ ಪಾಟೀಲ, ವಿಠ್ಠಲ ಜಾಮಗೊಂಡ, ರಾಜುಗೌಡ ಪಾಟೀಲ, ಚಂದ್ರಕಾಂತ ಇಬ್ರಾಹಿಂಪುರ, ಮಲ್ಲಿಕಾರ್ಜುನ ನೂಲಾ, ಧಾನು ನೂಲಾ, ಸಂತೋಷ ಮನ್ಮಿ, ಸಚಿನ ಲಿಂಗಶೆಟ್ಟಿ ಇತರರಿದ್ದರು.