ಬಸವಕಲ್ಯಾಣದ ಚೌಕಿಮಠದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಅನುಭವ ಮಂಟಪ ಗೋಷ್ಠಿ ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಸುಲೋಚನಾ ಮಾಮಾ, ಅನೀಲಕುಮಾರ ರಗಟೆ, ಡಾ.ಶಾಂತಾ ದುರ್ಗೆ, ಡಾ.ಎಸ್.ಬಿ ದುರ್ಗೆ, ಡಾ.ಮಹೇಶ ಪಾಟೀಲ್, ರಾಜೇಶ್ವರಿ ಖೂಬಾ, ನಿರ್ಮಲಾ ಶಟಗಾರ ಇದ್ದರು.
- ಶ್ರೀ ಶಿವಲಿಂಗ ಮಹಾಸ್ವಾಮೀಜಿ ಬಣ್ಣನೆ
- ಬಸವಕಲ್ಯಾಣದಲ್ಲಿ ಅನುಭವ ಮಂಟಪ ಗೋಷ್ಠಿ
ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ವಿಶ್ವದಲ್ಲಿಯೇ ಮೊದಲ ಸಂಸತ್ತು ಅನುಭವ ಮಂಟಪ ನಿಮಾರ್ಣ ಮಾಡಿ ಮಂಟಪದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿರುವುದು ಕ್ರಾಂತಿಕಾರಿ ಹೆಜ್ಜೆ ಎಂದು ಖೇಳಗಿಯ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ನುಡಿದರು.
ನಗರದ ಚೌಕಿಮಠದಲ್ಲಿ ವೈರಾಗ್ಯ ನಿಧಿ ಅಕ್ಕಮಹಾದೇವಿ ಮಹಿಳಾ ಮಹಾಮಂಡಳಿ ಟ್ರಸ್ಟ್ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಮತ್ತು ವಿಶ್ವಸ್ಥ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಅನುಭವ ಮಂಟಪ ಗೋಷ್ಠಿ, ಇಷ್ಟಲಿಂಗ ಯೋಗ, ಮಂತ್ರ ಜಪ, ಅನುಭಾವ ಹಾಗೂ ವಚನ ಭಜನೆ ಮಂಗಲ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ ಶ್ರೀಗಳು, ಮಹಿಳೆಯರೆಲ್ಲರೂ ಸೇರಿ ಮಹಿಳಾ ಅನುಭವ ಮಂಟಪ ಗೋಷ್ಠಿ ಆಯೋಜನೆ ಮಾಡಿದ್ದು ಒಂದು ವಿನೂತನ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ದೇಶದಲ್ಲಿರುವ ಪ್ರಮುಖ ನದಿಗಳಿಗೆ ಹೆಣ್ಣು ಮಕ್ಕಳ ಹೆಸರು ಇವೆ. ದೇಶವನ್ನು ಭಾರತಮಾತೆ ಎಂದು ಕರೆಯುವುದು ನಮ್ಮ ಪೂರ್ವಜರು ಹೆಣ್ಣು ಮಕ್ಕಳಿಗೆ ಕೊಟ್ಟಿರುವ ಸ್ಥಾನಮಾನ ಗೌರವದ ಬಗ್ಗೆ ಬಿಂಬುಸುತ್ತದೆ ಎಂದು ಹೇಳಿದರು.
ವಾಣಿಜ್ಯ ತೆರಿಗೆಯ ಸಹಾಯಕ ಆಯುಕ್ತ ಡಾ.ಮಹೇಶ್ ಪಾಟೀಲ್ ಮಾತನಾಡಿ, ಸ್ವಾತಂತ್ರ$್ಯ ಹೋರಾಟದಲ್ಲಿಯೂ ಮಹಿಳೆಯರ ಪಾತ್ರ ಮತ್ತು ಕೊಡುಗೆ ದೊಡ್ಡದು ಎಂದರು.
ಸ್ತ್ರೀ ರೋಗ ತಜ್ಞೆ ಡಾ.ಶಾಂತಾ ದುರ್ಗೆ ಮಾತನಾಡಿ, ಭ್ರೂಣ ಹತ್ಯೆ ಸಂಪೂರ್ಣವಾಗಿ ನಿಲ್ಲಬೇಕು. ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕಾದ ಅವಶ್ಯಕವಿದೆ ಎಂದು ಹೇಳಿದರು.
ಅಕ್ಕನ ಬಳಗದ ಅಧ್ಯಕ್ಷೆ ಸುಲೋಚನಾ ಮಾಮಾ, ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ, ಡಾ.ಎಸ್.ಬಿ ದುರ್ಗೆ, ಸುಲೋಚನಾ ಗುದಗೆ, ಸುರೇಖಾ ಮಂಗಾ, ಶಿವಮ್ಮ ಹೊಳಕುಂದೆ, ಬಸಮ್ಮ ಕಾಳಗೆ, ಮಹಾದೇವಿ, ಸಾವಿತ್ರಿ, ಕರುಣಾ, ರೇಣುಕಾ ಇದ್ದರು. ನಿವೃತ್ತ ಪ್ರಧ್ಯಾಪಕಿ ನಿರ್ಮಲಾ ಶಟಗಾರ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಖೂಬಾ ಸ್ವಾಗತಿಸಿದರು. ಸಂಗಮೇಶ್ ತೊಗರಖೇಡೆ ನಿರೂಪಣೆ ಮಾಡಿದರು.