ಭಾಲ್ಕಿಯಲ್ಲಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದಿಂದ ಡಾ.ಕೆ.ಎಸ್​.ಬಂಧು ಅವರಿಗೆ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಎಂ.ಮಕ್ತುಂಬಿ ಇತರರಿದ್ದರು. 
ರಾಜ್ಯ

ಎಲ್ಲ ಜನಾಂಗ ಪ್ರೀತಿಸಿದ ವಿಶ್ವಗುರು ಬಸವಣ್ಣ

ಪ್ರಮುಖ ಮುಖ್ಯಾಂಶಗಳು

  • ನಾಡೋಜ ಡಾ.ಬಸವಲಿಂಗ ಶ್ರೀ ನುಡಿ
  • ಡಾ.ಕೆ.ಎಸ್​.ಬಂಧುಗೆ ಪಟ್ಟದ್ದೇವರ ಪ್ರಶಸ್ತಿ ಪ್ರದಾನ
ಭಾಲ್ಕಿ: ಸಮಸಮಾಜ ನಿರ್ಮಿಸಿರುವ ವಿಶ್ವಗುರು ಬಸವಣ್ಣನವರು ಎಲ್ಲರನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್​ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎಂದು ಎಲ್ಲ ಜನಾಂಗದವರನ್ನು ಪ್ರೀತಿಸಿದವರು ಬಸವಣ್ಣ. ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಕ್ಷರಶ@ ಪಾಲಿಸುತ್ತ ಬಂದಿರುವವರು ಡಾ.ಕೆ.ಎಸ್​. ಬಂಧು. ನಡೆ-ನುಡಿ ಒಂದಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಸದುವಿನಯವೇ ಸದಾಶಿವನ ಒಲುಮೆ ಎಂಬ ಅಪ್ಪ ಗುರು ಬಸವಣ್ಣನವರ ವಚನದಂತೆ ಅವರ ಜೀವನವಾಗಿದೆ. ಶರಣ ಧರ್ಮದಲ್ಲಿ ತನ್ನ ತಾನು ತಗ್ಗಿಸಿಕೊಳ್ಳುವುದು ಅತ್ಯಂತ ಮುಖ್ಯವಾದ ಗುಣ ಎಂದರು.
ಎದುರಿಗಿರುವ ಪ್ರತಿಯೊಬ್ಬರನ್ನು ಶಿವನ ಸ್ವರೂಪವೆಂದು ಕಂಡು ಗೌರವಿಸುವುದೇ ನಿಜವಾದ ಸದುವಿನಯ. ಅಂತಹ ಸದುವಿನಯವನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಡಾ.ಕೆ.ಎಸ್​. ಬಂಧು ಅವರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಸಮ್ಮುಖ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬುದ್ಧನ ಅಷ್ಟಾಂಗ ಮಾರ್ಗ, ಬಸವಣ್ಣನವರ ಕಾಯಕ ತತ್ವ, ಅಂಬೇಡ್ಕರರ ಸಾಮಾಜಿಕ ನ್ಯಾಯ ಹೀಗೆ ಈ ಮೂವರು ಮಹನೀಯರ ತತ್ವಾದರ್ಶಗಳನ್ನು ನಾವು ಡಾ.ಕೆ.ಎಸ್​. ಬಂಧು ಅವರಲ್ಲಿ ಕಾಣುತ್ತೇವೆ. ಇವರಿಗೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.
ಬೀದರ್​ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್​. ಬಿರಾದಾರ್​ ಅವರು ಡಾ.ಕೆ.ಎಸ್​.ಬಂಧು ಅವರಿಗೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ.ಬಂಧು ಮಾತನಾಡಿ, ಪೂಜ್ಯರ ಆಶೀರ್ವಾದದ ಶಕ್ತಿಯಿಂದ ನಾನು ಆರೋಗ್ಯವಾಗಿದ್ದು, ಪ್ರಶಸ್ತಿ ಪಡೆಯಲು ಅರ್ಹನಾಗಿದ್ದೇನೆ ಎಂದು ಹೇಳಿದರು.
ಎಂ.ಬಂಡೆಪ್ಪ ಶರಣರು ಅಧ್ಯಕ್ಷತೆ ವಹಿಸಿದ್ದರು. ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಟಿ.ಎಂ. ಭಾಸ್ಕರ್​, ಪ್ರಮುಖರಾದ ಜೈರಾಜ ಖಂಡ್ರೆ, ಬಸವರಾಜ ನಂದಿ, ಡಾ.ಗವಿಸಿದ್ಧಪ್ಪ ಪಾಟೀಲ್​ ಮುಖ್ಯ ಅತಿಥಿಗಳಾಗಿದ್ದರು. ಸ್ವರೂಪಾ ಬಂಡೆಪ್ಪ ಬಳತೆ ಬಸವ ಗುರು ಪೂಜೆ ನೆರವೇರಿಸಿದರು. ಪ್ರತಿಷ್ಠಾನದ ಅಧ್ಯಕ್ಷೆ ಡಾ.ಎಂ. ಮಕ್ತುಂಬಿ ಪ್ರಾಸ್ತಾವಿಕ ಮಾತನಾಡಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಕು.ದೀಕ್ಷಾ ಸಂತೋಷ, ಅನುಭವ ಮಂಟಪ ಸಂಸತಿ ವಿದ್ಯಾಲಯದ ವಿದ್ಯಾರ್ಥಿ
ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನ ದರ್ಶನ ಮಾಡಿಕೊಟ್ಟರು.