ಆಳಂದನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಚನ ಗ್ಲೋಬಲ್ ವೆಂಚರ್ಸ್ ಸಂಸ್ಥೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಲೋಕಾರ್ಪಣೆ ಮಾಡಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಡಾ.ಗುರುಮಾಹಾಂತ ಸ್ವಾಮೀಜಿ, ಮಾಜಿ ಶಾಸಕ ಸುಭಾಷ ಗುತ್ತೇದಾರ್ ಇತರರಿದ್ದರು.
- ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿ
- ಆಳಂದನಲ್ಲಿ ವಚನ ಗ್ಲೋಬಲ್ ವೆಂಚರ್ಸ್ ಸಂಸ್ಥೆ ಉದ್ಘಾಟನೆ
ಆಳಂದ: ಬಸವಕಲ್ಯಾಣ ಸಾವಿರಾರು ಶರಣರು ಪ್ರಾಣ ಕೊಟ್ಟ ತ್ಯಾಗ ಭೂಮಿಯಾಗಿದ್ದು, ಇಲ್ಲಿ ಬಸವಣ್ಣನವರಿಗೆ ಚ್ಯುತಿ ಬಾರದಂತೆ ನಿರ್ವಹಿಸುತ್ತಾ ಬರುತ್ತಿದ್ದೇವೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಆಡಳಿತ ಸೌಧದ ಹತ್ತಿರ ಬೀದರ್ನ ವಚನ ಸಮೂಹ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಅನುಭವ ಗ್ರೀನ್ಸಿಟಿ ಯೋಜನೆಗೆ ಅಡಿಗಲ್ಲು ಹಾಗೂ ವಚನ ಗ್ಲೋಬಲ್ ವೆಂಚರ್ಸ್ ಸಂಸ್ಥೆ ಉದ್ಘಾಟನೆ, 16ನೇ ವಾರ್ಷಿಕೋತ್ಸವ ನಿಮಿತ್ತ 16 ಸಾವಿರ ಸಸಿ ನೆಡುವ, ವೃೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ಹೇರಿ ಶ್ರೀಗಳ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಜೂ.28ರಂದು ಎಲ್ಲರೂ ಕಲ್ಯಾಣಕ್ಕೆ ಆಗಮಿಸಿ ಬಸವನಿಷ್ಠೆ ತೋರಿಸಿ, ಕನ್ಹೇರಿ ಶ್ರೀ ಕಲ್ಯಾಣ ಪ್ರವೇಶ ಮಾಡದಂತೆ ತಡೆಯಬೇಕು ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದರೆ ಸಾಕಾಗಲ್ಲ, ಇಲ್ಲಿನ ಪ್ರಜೆಗಳು ಶ್ರೇಷ್ಠ ವ್ಯಕ್ತಿತ್ವ ಹೊಂದಿದವರು ಎಂದು ಸಾಬೀತು ಮಾಡಿದಾಗ ಭಾರತ ಯಶಸ್ವಿ ರಾಷ್ಟ್ರವಾಗುತ್ತದೆ. ಬುದ್ಧೀಜಿವಿಗಳಲ್ಲಿ ಅಧಿಕಾರ ಪಡೆದುಕೊಂಡವರಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗುತ್ತಿದೆ. ಬಸವಣ್ಣನವರ ತತ್ವಾದರ್ಶಗಳನ್ನು ಇಡೀ ಜಗತ್ತಿಗೆ ತೋರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಡಾ.ಗುರುಮಹಾಂತ ಸ್ವಾಮೀಜಿ, ಶ್ರೀ ನಿಜಗುಣಾನಂದ ಪ್ರಭು ಸ್ವಾಮೀಜಿ, ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುರಾಜೇಂದ್ರ ಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ, ಶ್ರೀ ಶರಣಬಸವ ದೇವರು, ಶ್ರೀ ಗಾಯತ್ರಿ ತಾಯಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ್, ಕಲಬುರಗಿ&ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್, ಪ್ರಮುಖರಾದ ಅಲ್ಲಮಪ್ರಭು ನಾವಾದಗೆರೆ, ಶಿವಕುಮಾರ ಸಾಲಿ, ಸಂಗಾರೆಡ್ಡಿ ಕೊತ್ತಾ, ಪ್ರಕಾಶ ಗಂದಿಗುಡಿ, ಪ್ರದಿಪ ನಿಸಾಜಿ, ಪಿ.ಎನ್.ಶಾಹ ಇತರರಿದ್ದರು.