ಶಹಾಪುರದಲ್ಲಿ ಏ.29ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಬೃಹತ್​ ಸಮಾವೇಶಕ್ಕೆ ಆಗಮಿಸಬೇಕೆಂದು ಹಿಂದೂ ವೇದಿಕೆಯಿಂದ ಶನಿವಾರ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಆಹ್ವಾನಿಸಲಾಯಿತು. ಸುಗೂರೇಶ್ವರ ಶಿವಾಚಾರ್ಯ, ಸಿದ್ದೇಶ್ವರ ಶಿವಾಚಾರ್ಯ, ವಿರುಪಾಯ್ಯ ಸ್ವಾಮೀಜಿ, ಸಿದ್ರಾಮೇಶ್ವರ ಸ್ವಾಮೀಜಿ, ಬಸವರಾಜ ಹೇರುಂಡಿ, ಮಲ್ಲಿಕಾರ್ಜುನ ಗಂಧದಮಠ, ಗುರು ಕಾಮಾ ಇತರರಿದ್ದರು. 
ರಾಜ್ಯ

ಬಸವಾದಿ ಶರಣರ ಹಿಂದೂ ಸಮಾವೇಶ 29ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಕನ್ನೇರಿ ಶ್ರೀಗಳ ಕಾರ್ಯಕಕ್ರಮಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರಗೆ ಆಹ್ವಾನ
ಶಹಾಪುರ: ನಗರದ ಸಿಪಿಎಸ್​ ಶಾಲಾ ಮೈದಾನದಲ್ಲಿ ಏ.29ರಂದು ಬಸವಾದಿ ಶರಣರ ಹಿಂದೂ ಬೃಹತ್​ ಸಮಾವೇಶ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಬಸವಾದಿ ಶಿವಶರಣರ ಹಿಂದೂ ವೇದಿಕೆಯಿಂದ ಶನಿವಾರ ಕಾರ್ಯಕ್ರಮದ ಭಿತ್ತಿಪತ್ರ ನೀಡುವ ಮೂಲಕ ಆಹ್ವಾನಿಸಲಾಯಿತು.
ಈ ವೇಳೆ ಮಾತನಾಡಿದ ಸೂಗುರೇಶ್ವರ ಶಿವಾಚಾರ್ಯರು, ಬಸವಾದಿ ಶಿವಶರಣರ ಹಿಂದೂ ಬೃಹತ್​ ಸಮಾವೇಶ ಪಾತೀತವಾಗಿದ್ದು, ಎಲ್ಲ ಸಮುದಾಯಗಳನ್ನೊಳಗೊಂಡು, ಶಿವಶರಣರೆಲ್ಲರು ಒಂದೇ ಸಮುದಾಯ ಅವರನ್ನು ಬೇರ್ಪಡಿಸುವುದು ಸರಿಯಲ್ಲ. ಶರಣರು ಬದುಕಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಅವರ ತತ್ವಾದರ್ಶ ಮತ್ತು ಅವರು ರಚಿಸಿದ ವಚನ ಸಾಹಿತ್ಯ ಮನಗಂಡು ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುವ ತತ್ವದಡಿ ಹಿಂದೂ ಸಮಾಜದ ಉನ್ನತಿಕರಣಕ್ಕಾಗಿ, ಸಂಟಿತ ಸಮಾವೇಶ ಮಾಡುತ್ತಿದ್ದು, ಇದರಲ್ಲಿ ಕನ್ನೇರಿ ಶ್ರೀಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
ಸ್ವಾನುಭವದ ಕೃಷಿ ಚಟುವಟಿಕೆ ಕುರಿತು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಅಲ್ಲದೆ ಸಂಟಿತರಾಗುವ ಮೂಲಕ ಭಾರತೀಯ ಮೂಲದ ಪರಂಪರೆ, ಸಾಂಸತಿಕ ಶ್ರೀಮಂತಿಕೆ ಕುರಿತು ಮನವರಿಕೆ ಮಾಡಲಿದ್ದಾರೆ. ಭಾರತೀಯತೆ ಪುನರುಜ್ಜೀವನದಡಿ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ವೇಳೆ ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯ, ಏಕದಂಡಿಗಿ ಮಠದ ವಿರುಪಾಯ್ಯ ಸ್ವಾಮೀಜಿ, ಸಿದ್ರಾಮೇಶ್ವರ ಸ್ವಾಮೀಜಿ, ಹಿರಿಯರಾದ ಬಸವರಾಜ ಹೇರುಂಡಿ, ಯುವ ಮುಖಂಡ ಮಲ್ಲಿಕಾರ್ಜುನ ಗಂಧದಮಠ, ಗುರು ಕಾಮಾ, ವ್ಯಾಪಾರಸ್ಥರ ಸಂದ ಅಧ್ಯ ರಾಜೂ ಆನೇಗುಂದಿ, ಅರವಿಂದ ಉಪ್ಪಿನ್​, ರಾವೇಂದ್ರ ಯಂತಿ, ಮಲ್ಲಿಕಾರ್ಜುನ ಚಿಂಚೋಳಿ ಇತರರಿದ್ದ