ಹುಮನಾಬಾದ್ ಜೆಸ್ಕಾಂ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ನಿಮಿತ್ತ ವಿಭಾಗದ ಇಇ ಗುರುಶಾಂತ ವಾರದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಎಒ ಗಣಪತಿ ಖೇಣಿಕರ, ರಮೇಶ ಮೈನಾಳೆ, ರಾಹುಲ್ ಇಜಾರೆ, ಶಂಕರ ಪಸಾರ್ಗಿ, ಥಾಮಸ್, ರಮೇಶ ಸಂಗಮ, ಶ್ರೀಕಾಂತ ಇತರರಿದ್ದರು.
ಹುಮನಾಬಾದ್: ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 893ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ವಿಭಾಗದ ಇಇ ಗುರುಶಾಂತ ವಾರದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಸಮಾನತೆ, ಶ್ರಮದ ಗೌರವ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಮಾಜ ಸುಧಾರಕರು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಮಾನತೆ ಹೆಚ್ಚುತ್ತದೆ ಎಂದರು.
ಎಒ ಗಣಪತಿ ಖೇಣಿಕರ, ಎಇಇಗಳಾದ ರಮೇಶ ಮೈನಾಳೆ, ರಾಹುಲ್ ಇಜಾರೆ, ಸಂದ ಮಾಜಿ ಸಂಟನಾ ಕಾರ್ಯದರ್ಶಿ ಶಂಕರ ಪಸಾರ್ಗಿ, ಸಿಇಸಿಗಳಾದ ಥಾಮಸ್, ರಮೇಶ ಸಂಗಮ, ಸಂದ ಎಸ್ಸಿ&ಎಸ್ಟಿ ಕಾರ್ಯದರ್ಶಿ ಶ್ರೀಕಾಂತ, ಪ್ರಮುಖರಾದ ಮಹೇಶಕುಮಾರ, ಬಸವರಾಜ ಕಲ್ಲೂರ, ಸಿದ್ದಲಿಂಗಯ್ಯ, ಸಂತೋಷಕುಮಾರ, ವೀರಯ್ಯ ಸ್ವಾಮಿ, ಶಿವಕುಮಾರ, ಗೋರಖನಾಥ ಇತರರಿದ್ದರು.
ನಂತರ ತೆರದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ಕಚೇರಿಯಿಂದ ಪ್ರಮುಖ ರಸ್ತೆಯ ಮೂಲಕ ಬಸವೇಶ್ವರ ವೃತ್ತದವರೆಗೆ ನಡೆಯಿತು. ನಂತರ ಬಸವೇಶ್ವರರ ಮೂರ್ತಿಗೆ ಅಧಿಕಾರಿಗಳು, ನೌಕರರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿದರು.
893 ಲಾಡು ವಿತರಣೆ: ಮೆರವಣಿಗೆ ಉದ್ದಕ್ಕೂ ಜೆಸ್ಕಾಂ ವತಿಯಿಂದ 893ನೇ ಬಸವ ಜಯಂತಿ ನಿಮಿತ್ತ 893 ಲಾಡುಗಳ ಪ್ರಸಾದ ವಿತರಣೆ ಮಾಡಿದ್ದು ವಿಶೇಷವಾಗಿತ್ತು.