- ಕೆಎಲ್ಇ ಸಂಸ್ಥೆಯಿಂದ ಬಸವ ಜಯಂತಿ ಆಚರಣೆ
- ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ
- ಬಸವಣ್ಣನವರ ಆದರ್ಶ ಪಾಲಿಸಿ ಎಂದ ಡಿಮ್ಡ್ ಉಪಕುಲಪತಿ
ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ
|ಉಪಕುಲಪತಿ ಡಾ. ಸಂದೀಪ್ ಶ್ರೀವಾಸ್ತವ ಅಭಿಪ್ರಾಯ | ಬಸವ ಜಯಂತಿ ಆಚರಣೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಕಾಯಕಯೋಗಿ ಬಸವಣ್ಣವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ್ ಶ್ರೀವಾಸ್ತವ ಅಭಿಪ್ರಾಯಪಟ್ಟರು.
ಇಲ್ಲಿನ ಕೆಎಲ್ಇ ಜೆಎನ್ ಎಂಸಿ ಆವರಣದಲ್ಲಿ ಭಾನುವಾರ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೇರ), ಡೀಮ್ಡ್-ಟು-ಬಿ ಯುನಿವರ್ಸಿಟಿ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ ಸಮಾಜ ನಿರ್ಮಾಣ, ಜಾತಿ ಪದ್ಧತಿ ನಿರ್ಮೂಲನೆಗಾಗಿ ಬಸವಣ್ಣವರ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು,ಯುವ ಸಮುದಾಯದ ಅವರ ಸಂದೇಶಗಳನ್ನು ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾನತೆಯ ತತ್ವ ಮತ್ತು ‘ಕಾಯಕವೇ ಕೈಲಾಸ’ ಎಂಬ ಅವರ ಸಂದೇಶದ ಮಹತ್ವವನ್ನು ವಿವರಿಸಿದರು.
ಇದಕ್ಕೂ ಮೊದಲು ಜಾಗತಿಕ ಶಾಂತಿಗೆ ಬಸವ ತತ್ವಶಾಸ್ತ್ರವೇ ಪರಿಹಾರ” ಎಂಬ ವಿಷಯವನ್ನು ಪ್ರತಿಬಿಂಬಿಸುವ ರೂಪಕ ವಾಹನದ ಭವ್ಯ ಮೆರವಣಿಗೆ ಜೆ ಎನ್ ಎಂಸಿ ಆವರಣದಿಂದ ಚನ್ನಮ್ಮ ವೃತ್ತದವರೆಗೆ ಸಾಗಿತು.
ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ,ಡಾ.ಅವಿನಾಶ ಕವಿ ,ಡಾ. ವಿ. ಡಿ. ಪಾಟೀಲ, ಡಾ. ರಾಜೇಶ್ ಪವಾರ ಇತರರಿದ್ದರು.