ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 
ರಾಜ್ಯ

ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ವಿಜೇತರಿಗೆ ರಾಜ್ಯಮಟ್ಟ ದಲ್ಲಿ ಪ್ರಥಮ ಬಹುಮಾನ 31 ಸಾವಿರ ರೂ. ನಗದು, ದ್ವಿತೀಯ ಬಹುಮಾನ 21 ಸಾವಿರ ರೂ. ಮತ್ತು ತೃತೀಯ ಬಹುಮಾನ 11 ಸಾವಿರ ರೂ. ಇರಲಿದೆ.
  • ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಕ್ರಮವಾಗಿ 3, 2 ಮತ್ತು 1 ಸಾವಿರ ರೂ. ನಗದು ಬಹುಮಾನ
  • ಸೆ.3ರಂದು ಸ್ಪರ್ಧೆ ನಡೆಯಲಿದೆ. ಮೂರು ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅ.2ರಂದು ಗಾಂಧೀ ಜಯಂತಿಯಂದು ಬಹುಮಾನ ವಿತರಣೆ ಮಾಡಲಾಗುತ್ತದೆ.
ಬೆಂಗಳೂರು:

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ಬಾಪೂಜಿ ಪ್ರಬಂಧ ಸ್ಪರ್ಧೆ’ಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗಿದೆ.

ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರಬಂಧ ಇರಲಿದೆ.
ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ರಾಜ್ಯಮಟ್ಟ ದಲ್ಲಿ ಪ್ರಥಮ ಬಹುಮಾನ 31 ಸಾವಿರ ರೂ. ನಗದು, ದ್ವಿತೀಯ ಬಹುಮಾನ 21 ಸಾವಿರ ರೂ. ಮತ್ತು ತೃತೀಯ ಬಹುಮಾನ 11 ಸಾವಿರ ರೂ. ಇರಲಿದೆ. ಜಿಲ್ಲಾಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಕ್ರಮವಾಗಿ 3, 2 ಮತ್ತು 1 ಸಾವಿರ ರೂ. ನಗದು ಬಹುಮಾನ ಇರಲಿದೆ.
ಸೆ.3ರಂದು ಸ್ಪರ್ಧೆ ನಡೆಯಲಿದೆ. ಮೂರು ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅ.2ರಂದು ಗಾಂಧೀ ಜಯಂತಿಯಂದು ಬಹುಮಾನ ವಿತರಣೆ ಮಾಡಲಾಗುತ್ತದೆ.

ಪ್ರೌಢ ಶಾಲಾ ವಿಭಾಗ:

1. ಗಾಂಧೀಜಿ ಕಲಿಸಿದ ಸರಳ ಜೀವನ ಮಹಾನ್ ಸಂದೇಶ
2. ನಾನು ಗಾಂಧೀಜಿಯಂತೆ ಸತ್ಯ ಹೇಳುವೆನು
3. ಗಾಂಧೀಜಿಯ ಜೀವನ ಕಥೆಯಿಂದ ಕಲಿಯುವ ಐದು ಪಾಠಗಳು

ಪಿಯು ವಿಭಾಗ:

1. ಗಾಂಧೀಜಿಯ ದೃಷ್ಟಿಯಲ್ಲಿ ನಿಜವಾದ ಸ್ವಾತಂತ್ರ್ಯ
2. ಸತ್ಯ ಮತ್ತು ಅಹಿಂಸೆ ನನ್ನ ಜೀವನದ ದಾರಿ
3. ಅಸಮಾನತೆ ನಿವಾರಣೆಗೆ ಗಾಂಧೀಜಿಯವರ ಕೊಡುಗೆ

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ:

1. ನೈತಿಕ ರಾಜಕಾರಣ ಗಾಂಧೀಜಿಯ ತತ್ವಗಳ ಇಂದಿನ ಪ್ರಾಸಂಗಿಕತೆ
2. ಸತ್ಯಾಗ್ರಹ ಇಂದಿನ ಕಾಲದ ಅವಶ್ಯಕತೆ
3. ಗಾಂಧೀಜಿಯ ಶಿಕ್ಷಣ ತತ್ವ ನೈತಿಕತೆ, ಕೌಶಲ, ಸೇವಾಭಾವ