ಬೆಂಗಳೂರು: ಪ್ರಧಾನ ಮಂತ್ರಿ ಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಬ್ಯಾಂಕ್‌ಗಳು ಮತ್ತು ಸರ್ಕಾರದ ಏಜೆನ್ಸಿಗಳು ನಿರಾಸಕ್ತಿ ತೋರಿಸುತ್ತಿವೆ. ಬ್ಯಾಂಕ್‌ಗಳು ನೂರೆಂಟು ಷರತ್ತುಗಳನ್ನು ವಿಧಿಸಿ ರೈತರನ್ನು ದೂರ ಸರಿಸುತ್ತಿದ್ದರೆ ಮತ್ತೊಂದೆಡೆ ಗ್ರಾಹಕರ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಸಿಬ್ಬಂದಿಗೆ ಪ್ರಧಾನ ಮಂತ್ರಿ ಸಲ್ ಬಿಮಾ ಯೋಜನೆ ಬಗ್ಗೆ ಅರಿವೇ ಇಲ್ಲದೆ ರೈತರಿಗೆ ಸಹಾಯ ಮಾಡುತ್ತಿಲ್ಲ.
ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಅಭಾವವಿದೆ. ಐದು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ಮುಂಗಾರು ಬಿತ್ತನೆ ಗುರಿ 84.10 ಲಕ್ಷ ಹೆಕ್ಟೇರ್ ಇರಬೇಕಿತ್ತು. ಆದರೆ, ವಾಸ್ತವಿಕ ಬಿತ್ತನೆ 43.98 ಲಕ್ಷ ಹೆಕ್ಟೇರ್ ತಲುಪಿದೆ.
ರೈತರು ಮುಂಗಾರು ಮಳೆ ಕೊರತೆ ನಡುವೆಯೇ ಸಮಾಧಾನಕರ ಬಿತ್ತನೆ ಮಾಡಿದ್ದಾರೆ. ಬಹುತೇಕ ಕಡೆಗಳಲ್ಲಿ ಹಿಂಗಾರು ಬಿತ್ತನೆಗೆ ಭೂಮಿ ಹಸನು ಮಾಡಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆ ಕೈಸೇರುವ ನಿರೀಕ್ಷೆ ಈ ಬಾರಿ ಕಾಣಿಸುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬ ರೈತರು ಸಲ್ ಬಿಮಾ ಯೋಜನೆಯಡಿ ವಿಮಾ ಕಂತು ಪಾವತಿಗೆ ಸಮೀಪದ ಬ್ಯಾಂಕ್ ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಗಳಿಗೆ ತೆರಳುತ್ತಿದ್ದಾರೆ.
ಆದರೆ, ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲ ಪಡೆದವರಿಂದ ಮಾತ್ರ ವಿಮಾ ಕಂತು ಪಡೆಯುವ ಷರತ್ತು ವಿಧಿಸುತ್ತಿದ್ದಾರೆ ಸಲ್ ಬಿಮಾ ಕಂತು ಪಾವತಿಸಿಕೊಳ್ಳಲು ಷರತ್ತು ಹೇರಿರುವ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದವರಿಗೆ ಸಿಬ್ಬಂದಿ ಇಲ್ಲ ಎಂದು ನೆಪ ಹೇಳುತ್ತಿದ್ದಾರೆ. ಅವರ ಇಂಗ್ಲಿಷ್ ಉತ್ತರಕ್ಕೆ ರೈತರು ಗ್ರಾಮದ ಕಡೆಗೆ ಮುಖ ಮಾಡುತ್ತಿದ್ದಾರೆ.
ಗ್ರಾಹಕ ಸೇವಾ ಕೇಂದ್ರಗಳ ಸಾಕಷ್ಟು ಕಡೆ ಸಲ್ ಬಿಮಾ ಯೋಜನೆ ಬಗ್ಗೆ ಮಾಹಿತಿಯೇ ಇಲ್ಲ. ಕಂತು ಪಾವತಿಸುವ ರೈತರಿಗೆ ಹಾಗೆಂದರೇನು ಎಂದು ಮರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳು ಬ್ಯಾಂಕ್ ಹಾಗೂ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿಲ್ಲ. ಕೇವಲ ಸರ್ಕಾರದಿಂದ ಬಂದಿರುವ ಕರಪತ್ರಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಶೇರ್ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಸಂಕರ್ಪ ಕೇಂದ್ರಗಳ ನಿರ್ಲಕ್ಷ್ಯ :
ರೈತ ಸಂಪರ್ಕ ಕೇಂದ್ರಗಳ ಅಧಿಕಾರಿ, ಸಿಬ್ಬಂದಿಗೂ ಸಲ್ ಬಿಮಾ ವಿಮಾ ಕಂತು ಪಾವತಿಗೆ ಅಗತ್ಯ ಇರುವ ದಾಖಲೆಗಳ ಮಾಹಿತಿ ಇಲ್ಲವಾಗಿದೆ. ರೈತರು ಪ್ರಶ್ನಿಸಿದಾಗ ಬ್ಯಾಂಕ್ ಅಥವಾ ಗ್ರಾಹಕ ಸೇವಾ ಕೇಂದ್ರಗಳ ಕಡೆಗೆ ಕಳುಹಿಸಿ ಸುಮ್ಮನಾಗುತ್ತಿದ್ದಾರೆ. ಇದಕ್ಕೆ ಕೃಷಿ ಸಚಿವರು ಇಲ್ಲದೇ ಇರುವುದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ.
ಅಧಿಸೂಚಿತ ಬೆಳೆಗಳು, ವಿಮೆ ಕಂತಿನ ವಿವರ
ಬೆಳೆಗಳು ನೀರಾವರಿ/ಮಳೆಆಶ್ರಿತ ಪ್ರೀಮಿಯಂ(ರೂ.)
ತೊಗರಿ ಬೇಳೆ ಮಳೆಆಶ್ರಿತ 1,165
ಮುಂಗಾರು ಅವಧಿ ಬಿತ್ತನೆ ಪ್ರದೇಶ
ಬಿತ್ತನೆ ಗುರಿ 84.10 ಲಕ್ಷ ಹೆಕ್ಟೇರ್
ಒಟ್ಟು ಬಿತ್ತನೆ 43.98 ಲಕ್ಷ ಹೆಕ್ಟೇರ್
ವಾಡಿಕೆ ಬಿತ್ತನೆ ವ್ಯಾಪ್ತಿ 51.33 ಲಕ್ಷ ಹೆಕ್ಟೇರ್
2025ರ ಅವಧಿಯಲ್ಲಿ ಬಿತ್ತನೆ ವ್ಯಾಪಿ 57.81 ಲಕ್ಷ ಹೆಕ್ಟೇರ್