Bank holidays in August 2026
ನೀವು ಆಗಸ್ಟ್ನಲ್ಲಿ ಬ್ಯಾಂಕ್ನಲ್ಲಿ ಕೆಲಸ ಇಟ್ಟುಕೊಂಡಿದ್ದರೆ, ಆದಷ್ಟು ಬೇಗನೆ ಅವುಗಳನ್ನು ಪೊರ್ಣಗೊಳಿಸೋದು ನೋಡಿಕೊಳ್ಳಿ. ಯಾಕೆಂದರೆ ಈ ಮಾಸದಲ್ಲಿ ಅರ್ಧಕ್ಕರ್ಧ ತಿಂಗಳು ರಜೆಗಳಿಂದ ತುಂಬಿ ಹೋಗಿವೆ. ಸ್ವಾತಂತ್ರ್ಯ ದಿನಾಚರಣೆ, ಎರಡನೇ ಶನಿವಾರ ಸೇರಿದಂತೆ ಆಗಸ್ಟ್ನಲ್ಲಿ ಬರೋಬ್ಬರಿ 14 ದಿನ ರಜೆ ಇದೆ.
ಯಾವ್ಯಾವ ದಿನ ಬ್ಯಾಂಕ್ ಇರೋದಿಲ್ಲ.
- ಆಗಸ್ಟ್ 2 ಭಾನುವಾರ ವಾರದ ರಜೆ
- ಆಗಸ್ಟ್ 8 ಎರಡನೇ ಶನಿವಾರ
- ಆಗಸ್ಟ್ 9 ಭಾನುವಾರ
- ಆಗಸ್ಟ್ 13 ಮಣಿಪುರದಲ್ಲಿ ದೇಶಪ್ರೇಮಿಗಳ ದಿನ
- ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ
- ಆಗಸ್ಟ್ 16 ಭಾನುವಾರ
- ಆಗಸ್ಟ್ 22 ನಾಲ್ಕನೇ ಶನಿವಾರ
- ಆಗಸ್ಟ್ 23 ಭಾನುವಾರ
- ಆಗಸ್ಟ್ 25 ಈದ್ ಮಿಲಾದ್, ಓಣಂ
- ಆಗಸ್ಟ್ 28 ರಕ್ಷಾ ಬಂಧನ
- ಆಗಸ್ಟ್ 30 ಭಾನುವಾರ
ಆನ್ಲೈನ್ ಬಳಿಸಿ
ಈ ಮೇಲಿನ ದಿನಗಳು ಬ್ಯಾಂಕ್ಗೆ ಅಧಿಕೃತವಾಗಿ ಸರ್ಕಾರಿ ರಜೆ ಇದ್ದರೂ, ಸಹ ಹೆಚ್ಚು ಡಿಜಿಟಲ್ನಲ್ಲಿ ವ್ಯವಹರಿಸುವ ಕೆಲಸಗಳನ್ನು ಇಟ್ಟುಕೊಳ್ಳಿ. ಯುಪಿಐ, ಆನ್ಲೈನ್ ಅಪ್ಲಿಕೇಶನ್, ಮೊಬೈಲ್ ಬ್ಯಾಂಕಿಂಗ್ಮೂಲಕ ನಿಮ್ಮ ತುರ್ತು ಕೆಲಸ ಮಾಡಿಕೊಳ್ಳಬಹುದು. ಅಲ್ಲದೆ ಎಲ್ಲ ಸರ್ಕಾರಿ ಬ್ಯಾಂಕ್ಗಳ ಎಟಿಎಂ 24 ಗಂಟೆ ನಗರದಲ್ಲಿ ಕೆಲಸ ಮಾಡುವ ಹಿನ್ನೆಲೆ ತುರ್ತು ಪರಿಸ್ಥಿತಿ ಎದುರಾಗುವ ಯಾವ ಸಾಧ್ಯತೆ ಇರೋದಿಲ್ಲ. ಇಲ್ಲವೇ ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್ಗಳ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಆ ಮೂಲಕ ವ್ಯವಹರಿಸಬಹುದಾಗಿದೆ.
ರಜೆ ಪಟ್ಟಿ ನೋಡಿ
ಚೆಕ್ ಠೇವಣಿ, ಕೆವೈಸಿ ನವೀಕರಿಸುವಾಗ ಅಥವಾ ಶಾಖೆಯಲ್ಲಿ ಯಾವುದಾದರು ಕೆಲಸದ ಮೇಲೆ ತೆರಳುತ್ತಿದ್ದೀರಿ ಎಂದರೆ ಮೊದಲು ರಜೆ ಪಟ್ಟಿಯನ್ನು ಪರಿಶೀಲಿಸಿ. ಯಾವುದರ ಬಗ್ಗೆ ಗಮನ ಹರಿಸದೆ ಬ್ಯಾಕ್ ಬಳಿ ತೆರಳಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಿಕೊಳ್ಳಿ, (ಏಜೆನ್ಸೀಸ್)