ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿಯಲ್ಲಿ ಡಾ.ಉಮೇಶ ಜಾಧವ್, ರೇವುನಾಯಕ ಬೆಳಮಗಿ, ಪ್ರೊ.ಈ.ಟಿ.ಪುಟ್ಟಯ್ಯ, ಪ್ರೊ.ಶಶಿಕಾಂತ ಉಡಿಕೇರಿ, ಜಯಾಂಬಿಕ, ಪ್ರೊ.ರಮೇಶ ಲಂಡನಕರ್, ಡಾ.ಎನ್.ಜಿ.ಕಣ್ಣೂರ್ ಇತರರಿದ್ದರು.
ಕಲಬುರಗಿ: ಬಂಜಾರ ಜನಾಂಗದ ಸಮಗ್ರ ಇತಿಹಾಸದ ಅಧ್ಯಯನ ನಡೆಸಿ ಬೆಳಕಿಗೆ ತರಲು ಗುಲ್ಬರ್ಗ ವಿಶ್ವವಿದ್ಯಾಲಯದ ಸಂತ ಸೇವಾಲಾಲ್ ಅಧ್ಯಯನ ಪೀಠ ಮುಂದಾಗಬೇಕು ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಂತ ಸೇವಾಲಾಲ್ ಅಧ್ಯಯನ ಪೀಠದ ಸಹಯೋಗದಲ್ಲಿ ಕಾರ್ಯಸೌಧ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯಲ್ಲಿ ಮಾತನಾಡಿ, ಇಡೀ ದೇಶದಲ್ಲಿ ಒಂದೇ ಭಾಷೆಯನ್ನಾಡುವ ಬಂಜಾರ ಜನಾಂಗದ ಆಹಾರ, ಉಡುಗೆ&ತೊಡುಗೆ, ಆಚಾರ&ವಿಚಾರ ಮತ್ತು ಸಂಸತಿ ಸಮಾನವಾಗಿದೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಇತಿಹಾಸದ ಸಂಶೋಧನೆ ಅತ್ಯಗತ್ಯ. ಮೌಖಿಕ ಸಾಹಿತ್ಯ ಮತ್ತು ಜನಪದ ಹಾಡುಗಳಲ್ಲಿ ಅಡಕವಾಗಿರುವ ಬಂಜಾರ ಸಂಸತಿಯ ಬಗ್ಗೆ ಅಧ್ಯಯನ ಪೀಠ ಪಿಎಚ್.ಡಿ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿ, ಜನಾಂಗದ ಚರಿತ್ರೆ ಬಗ್ಗೆ ಹೊಸ ಬೆಳಕು ಚೆಲ್ಲಬೇಕಾಗಿದೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಈ.ಟಿ.ಪುಟ್ಟಯ್ಯ ಮಾತನಾಡಿ, ಸಂತ ಸೇವಾಲಾಲ್ ಮತ್ತು ಬಸವಣ್ಣನವರ ತತ್ವಗಳು ಸಮಾನವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅಧ್ಯತೆ ವಹಿಸಿದ್ದರು. ಅಧ್ಯಯನ ಪೀಠದ ನಿರ್ದೇಶಕ ದಶರಥ ನಾಯಕ್ ಪ್ರಾಸ್ತಾವಿಕ ಮಾನಾಡಿದರು. ಶ್ರೀ ಮುರಾರಿ ಮಹಾರಾಜ, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಶಾಸಕ ಡಾ.ಅವಿನಾಶ ಜಾಧವ್, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ಕುಲಸಚಿವ ಪ್ರೊ.ರಮೇಶ ಲಂಡನಕರ, ಸಿಂಡಿಕೇಟ್ ಸದಸ್ಯ ಪ್ರೊ.ಹೂವಿನಭಾವಿ ಬಾಬಣ್ಣ ಇತರರಿದ್ದರು. ಸುಭಾಷ ರಾಠೋಡ್ ಬಂಜಾರ ಗೀತೆ ಗಾಯನ ಮಾಡಿದರು. ಭುವನೇಶ್ವರಿ ಜಾಧವ್ ಪ್ರಾರ್ಥನಾ ಗೀತೆ ಹಾಡಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಮಹೇಶ ನಿರೂಪಣೆ ಮಾಡಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜನಿಸಿದ ಸೇವಾಲಾಲ್ ಮಹಾರಾಜರು ಪ್ರಕೃತಿ ಪ್ರೀತಿಸುವ ಮಹಾನ್ ಸಂತರಾಗಿದ್ದಾರೆ. ಆಯುರ್ವೇದ ವೈದ್ಯನಾಗಿ ಅನೇಕ ಪವಾಡದೊಂದಿಗೆ ಜನರ ಕಲ್ಯಾಣಕ್ಕೆ ಶ್ರಮಿಸಿ ಸಾಮರಸ್ಯದ ಬದುಕು ಕಟ್ಟಿಕೊಟ್ಟವರು.> ಪ್ರೊ.ಈ.ಟಿ.ಪುಟ್ಟಯ್ಯ, ವಿಶ್ರಾಂತ ಕುಲಪತಿ, ಗುವಿವಿ