ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆದ ಹಿಂಸಾಚಾರ ಖಂಡಿಸಿ ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರು ಮೂಡಲಗಿಯಲ್ಲಿ ಪ್ರತಿಭಟನೆ ನಡೆಸಿದರು. ಬಲದೇವ ಸಣ್ಣಕ್ಕಿ, ಸದಾಶಿವ ಪಾಟೀಲ ಇತರರಿದ್ದರು. 
ರಾಜ್ಯ

ಬಾಂಗ್ಲಾ ಹಿಂಸಾಚಾರಕ್ಕೆ ಖಂಡನೆ

ಮೂಡಲಗಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗದಳ ಕಾರ್ಯಕರ್ತರು ಪಟ್ಟಣದ ಕಲ್ಮೇಶದ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು. ಬಾಂಗ್ಲಾದೇಶದ ಮೈಮನ್​ಸಿಂಗ್​ ಪ್ರದೇಶದಲ್ಲಿ ದೀಪು ಚಂದ್ರದಾಸ್​ ಎಂಬುವವರನ್ನು ಗುಂಪೊಂದು ಮರಕ್ಕೆ ಕಟ್ಟಿಹಾಕಿ ಸಜೀವವಾಗಿ ದಹಿಸಿದೆ. ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ಮನೆ, ಅಂಗಡಿಗಳನ್ನು ಸುಟ್ಟು ಹಾಕಲಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ವಿರೋಧಿ ಹಿಂಸಾಚಾರ ತಡೆಯಲು ಭಾರತ ಸರ್ಕಾರ ಬಾಂಗ್ಲಾದೇಶದ ವಿರುದ್ಧ ಆರ್ಥಿಕ, ವ್ಯಾಪಾರ ಹಾಗೂ ರಾಜಕೀಯ ನಿರ್ಬಂಧ ವಿಧಿಸಬೇಕು. ಉಗ್ರ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಲದೇವ ಸಣ್ಣಕ್ಕಿ, ಸದಾಶಿವ ಪಾಟೀಲ, ಭೀಮಶಿ ಮಂಟೂರ, ರಮೇಶ ಮಾದರ, ಮಾಳಪ್ಪ ನಾಯ್ಕ, ಲಕ್ಕಪ್ಪ ನಂದಿ, ಶಿವಾನಂದ ಗೋಟೂರ, ಮಾಳಪ್ಪ ಮೆಳವಂಕಿ, ಮಹಾಂತೇಶ ಮುಗಳಖೋಡ ಇತರರಿದ್ದರು.