ಬೆಂಗಳೂರು ವಿಶ್ವವಿದ್ಯಾಲಯ 
ರಾಜ್ಯ

Phd entance exam: ಆ.28, 29ರಂದು ಬೆಂ.ವಿವಿ ಪಿಎಚ್.ಡಿ ಮೌಖಿಕ ಪರೀಕ್ಷೆ

ಪ್ರಮುಖ ಮುಖ್ಯಾಂಶಗಳು

  • ಪಿಎಚ್.ಡಿ. ಪ್ರವೇಶ ಪರೀಕ್ಷೆಯನ್ನು ಜು.5ರಂದು ನಡೆಸಲಾಗಿದ್ದು, ಮೌಖಿಕ ಪರೀಕ್ಷೆಯನ್ನು ಆ.3, 4 ಮತ್ತು 5ರಂದು ನಡೆಸಲು ಉದ್ದೇಶಿಸಿತ್ತು.
  • ಕಾರಣಾಂತರಗಳಿಂದ ಮುಂದೂಡಿದ್ದ ವಿಶ್ವವಿದ್ಯಾಲಯವು ಇದೀಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.
  • ಮೌಖಿಕ ಪರೀಕ್ಷೆ ಪೂರ್ಣಗೊಂಡ ಬಳಿಕ ಸೆ.5ರಂದು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು.
ಬೆಂಗಳೂರು:

ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್.ಡಿ. ಪ್ರವೇಶ ಪ್ರಕ್ರಿಯೆಯ ಮೌಖಿಕ ಪರೀಕ್ಷೆಯನ್ನು ಆ.28 ಮತ್ತು 29ರಂದು ನಡೆಸಲಾಗುವುದು ಎಂದು ವಿಶ್ವವಿದ್ಯಾಲಯವು ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.

ಪಿಎಚ್.ಡಿ. ಪ್ರವೇಶ ಪರೀಕ್ಷೆಯನ್ನು ಜು.5ರಂದು ನಡೆಸಲಾಗಿದ್ದು, ಮೌಖಿಕ ಪರೀಕ್ಷೆಯನ್ನು ಆ.3, 4 ಮತ್ತು 5ರಂದು ನಡೆಸಲು ಉದ್ದೇಶಿಸಿತ್ತು. ಕಾರಣಾಂತರಗಳಿಂದ ಮುಂದೂಡಿದ್ದ ವಿಶ್ವವಿದ್ಯಾಲಯವು ಇದೀಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ. ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ವೇಳಾಪಟ್ಟಿಯನ್ನು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಅಭ್ಯರ್ಥಿಗಳ ಮೌಖಿಕ ಪರೀಕ್ಷೆಯು ಸಂಬಂಧಿತ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ನಡೆಯಲಿದೆ.
ಮೌಖಿಕ ಪರೀಕ್ಷೆ ಪೂರ್ಣಗೊಂಡ ಬಳಿಕ ಸೆ.5ರಂದು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು. ಪಿಎಚ್.ಡಿ. ಸೀಟುಗಳ ಹಂಚಿಕೆಗೆ ಸಂಬಂಧಿಸಿದಂತೆ ಸೆ.11ರಂದು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆ ಹೊರಡಿಸಿದ್ದಾರೆ.